ಬೆಂಗಳೂರು: 500 ರೂ ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

ಮಿತವಾದ ಹಣದಲ್ಲಿ ಬೆಂಗಳೂರಿನಲ್ಲಿ ಇಡೀ ದಿನ ಹೇಗೆ ಕಳೆಯಬಹುದು ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದ ಬೆಂಗಳೂರಿನ ಬಂಗಾಳಿ ನಿವಾಸಿ ಪ್ರಿಯಾಂಕಾ ಮೊಂಡಲ್, ಬೆಳಗ್ಗೆ ಇಡ್ಲಿ ಬ್ರೇಕ್ ಪಾಸ್ಟ್ ನೊಂದಿಗೆ ದಿನವನ್ನು ಆರಂಭಿಸಿದ್ದಾರೆ.
Priyanka
ಪ್ರಿಯಾಂಕಾ
Updated on

ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳದ ಯುವತಿಯೊಬ್ಬರು ಕೇವಲ 500 ರೂ. ಬಜೆಟ್‌ನಲ್ಲಿ ನಗರದಲ್ಲಿ ಇಡೀ ದಿನ ಹೇಗೆ ಬಿಂದಾಸ್ ಲೈಫ್ ಎಂಜಾಯ್ ಮಾಡಬಹುದು ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

ಈ ಮೂಲಕ ದೇಶದ ಅತ್ಯಂತ ದುಬಾರಿ ನಗರಗಳಲ್ಲಿ ದೈನಂದಿನ ವೆಚ್ಚಗಳ ಸವಾಲುಗಳ ಜೊತೆಗೆ ಎಚ್ಚರಿಕೆಯಿಂದ ಹಿತ-ಮಿತವಾಗಿ ಹಣ ಖರ್ಚು ಮಾಡಿದರೆ ಹೇಗೆ ಸಂತೃಪ್ತ ಜೀವನ ನಡೆಸಬಹುದು ಎಂಬುದನ್ನು ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು. ಮಿತವಾದ ಹಣದಲ್ಲಿ ಬೆಂಗಳೂರಿನಲ್ಲಿ ಇಡೀ ದಿನ ಹೇಗೆ ಕಳೆಯಬಹುದು ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದ ಬೆಂಗಳೂರಿನ ಬಂಗಾಳಿ ನಿವಾಸಿ ಪ್ರಿಯಾಂಕಾ ಮೊಂಡಲ್, ಬೆಳಗ್ಗೆ ಇಡ್ಲಿ ಬ್ರೇಕ್ ಪಾಸ್ಟ್ ನೊಂದಿಗೆ ದಿನವನ್ನು ಆರಂಭಿಸಿದ್ದಾರೆ.

ಬಳಿಕ ಪ್ರಯಾಣಕ್ಕಾಗಿ ಕ್ಯಾಬ್ ಬುಕ್ ಮಾಡುವುದರ ಬದಲು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಬಳಿಕ ಚಹಾ ಸೇವಿಸಿದ್ದಾರೆ. ಮಧ್ಯಾಹ್ನದ ಊಟದ ಮೆನು ನೋಡಿ ಶಾಕ್ ಆದ ಪ್ರಿಯಾಂಕಾ, ಕೊನೆಗೆ 120 ರೂ. ಗೆ ಊಟ ಮುಗಿಸಿದ್ದಾರೆ.

ತದನಂತರ ಸಂಜೆ ವಡಾ ಪಾವ್ ಮತ್ತು ಕಪ್ ಚಹಾ ಸೇವಿಸಿದ್ದಾರೆ. ಬಳಿಕ ತನ್ನ ಹಣವೆಲ್ಲಾ ಖರ್ಚು ಆಯಿತು ಎಂದು ಅರಿತು ಮನೆಗೆ ವಾಪಸ್ಸಾಗಿದ್ದಾರೆ. ಮಿತವಾದ ಬಜೆಟ್ ನಲ್ಲಿ ಇಡೀ ದಿನ ಎಂಜಾಯ್ ಮಾಡಿದ ಪ್ರಿಯಾಂಕಾ ಕೊನೆಗೂ 200 ರೂ. ಉಳಿಸಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಮತ್ತೊಬ್ಬರು ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ 30 ರೂ. ಊಟ ಮಾಡಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.

Priyanka
ಬೆಂಗಳೂರು: ಕೊಳಚೆ ಗುಂಡಿಯಾಗಿ ಮಾರ್ಪಟ್ಟ 179 ಕೋಟಿ ರೂ ವೆಚ್ಚದ K-100 ಜಲಮಾರ್ಗ; ದುರ್ವಾಸನೆ, ಸೊಳ್ಳೆಗಳ ಕಾಟಕ್ಕೆ ಬೇಸತ್ತ ನಿವಾಸಿಗಳು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com