ರಾಜ್ಯ ಸರ್ಕಾರಕ್ಕೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡೋ ಅಧಿಕಾರವೇ ಇಲ್ಲ: ಛಲವಾದಿ ನಾರಾಯಣಸ್ವಾಮಿ ಕಿಡಿ!

ಶಾಶ್ವತ ನಿವಾಸ ಪತ್ರ ಕೊಡೋದು ಇವರಿಗೆ ಅಧಿಕಾರ ಇಲ್ಲ. ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡೋಕೆ ರಾಜ್ಯ ಸರ್ಕಾರ ಯಾರು? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
chalavadi narayanaswamy
ಛಲವಾದಿ ನಾರಾಯಣಸ್ವಾಮಿ
Updated on

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಶಾಶ್ವತ ನಿವಾಸ ಪತ್ರ ಕೊಡೋ ಅಧಿಕಾರವೇ ಇಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಶ್ವತ ನಿವಾಸ ಪ್ರಮಾಣ ಪತ್ರ ಅಂದರೆ ಅದು ಪೌರತ್ವ ವಿಚಾರ. ಶಾಶ್ವತ ನಿವಾಸ ಪತ್ರ ಕೊಡೋದು ಇವರಿಗೆ ಅಧಿಕಾರ ಇಲ್ಲ. ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡೋಕೆ ರಾಜ್ಯ ಸರ್ಕಾರ ಯಾರು? ಎಂದು ಪ್ರಶ್ನಿಸಿದರು. ಈಗ ಅ ಪ್ರಮಾಣ ಪತ್ರ ಕೊಟ್ಟು ನಾವೇ ಕೇಂದ್ರ ಸರ್ಕಾರ ಅಂತ ಭಾವಿಸೋದು ಬೇಡ ಎಂದರು.

ಇನ್ನೂ ಕಡತ ವಿಲೇವಾರಿ ಕುರಿತು ವ್ಯಂಗ್ಯವಾಡಿದ ನಾರಾಯಣಸ್ವಾಮಿ, ಕೆಲವುದರಲ್ಲಿ ಕಡತ ವಿಲೇವಾರಿ ಆಗಬೇಕು ಅಂದ್ರೆ ಸಚಿವರು ಬರಬೇಕು. ಕಡತದ ವಾರಸುದಾರರು ಬಂದು, ನೇರವಾಗಿ ಬಂದು ಭೇಟಿಯಾಗದಿದ್ರೆ ಹೇಗೆ ಕಡತ ವಿಲೇವಾರಿ ಆಗಲಿದೆ.? ಮಾತುಕತೆ ಮೂಲಕ ಕಡತ ವಿಲೇವಾರಿ ಮಾಡಬೇಕಿದೆ ಎಂದು ಹೇಳಿದರು.

chalavadi narayanaswamy
Watch | ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ಅಮಿತ್ ಶಾಗೆ ಕರಂದ್ಲಾಜೆ ಪತ್ರ

ಸಿಎಂ ಬೆಂಗಳೂರು ಸಿಟಿ ರೌಂಡ್ಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಮಾತಲ್ಲಿ ಅಭಿವೃದ್ಧಿ ಆಗೋದಿಲ್ಲ. ಬೆಂಗಳೂರು ಅಭಿವೃದ್ಧಿ ಕೇವಲ ಮಾತಲ್ಲಿ ಆಗಲ್ಲ. ಕೆಲಸ ಮಾಡಿ ತೋರಿಸಬೇಕಿದೆ. ಸಿದ್ದರಾಮಯ್ಯ ಅವರಿದ್ದಾಗಲೂ ಅಭಿವೃದ್ಧಿ ಆಗಲಿಲ್ಲ. ಈಗ ಡಿಕೆ ಶಿವಕುಮಾರ್ ಬಂದ ಮೇಲೂ ಏನೂ ಅಭಿವೃದ್ಧಿ ಇಲ್ಲ. ಇವರು ಬಂದ ಮೇಲೆ ಮಳೆ ಕೂಡ ಸರಿಯಾಗಿ ಬರ್ತಿಲ್ಲ. ಬೆಂಗಳೂರಿನಲ್ಲಿ ಉತ್ತಮ ರಸ್ತೆ ಇಲ್ಲ, ಅದನ್ನ ಮಾಡಿ ಎಂದು ಸಲಹೆ ನೀಡಿದರು.

ಸೋಲಿನ ಭೀತಿಯಿಂದ GBA ಚುನಾವಣೆ ಮುಂದೂಡಿಕೆ: GBA ಚುನಾವಣೆ ಮುಂದೂಡಿಕೆಗೆ ಮೆಲ್ಮನವಿ ವಿಚಾರ ಕುರಿತು ಮಾತನಾಡಿದ ನಾರಾಯಣಸ್ವಾಮಿ, ಕೋರ್ಟ್ ಆದೇಶವನ್ನ ಸರ್ಕಾರ ಗೌರವಿಸಬೇಕು. ಬಹು ಕಾಲದಿಂದ ಬೆಂಗಳೂರು ಪ್ರಜೆಗಳು ಚುನಾವಣೆ ಆಗಬೇಕು ಅಂತ ಕಾಯ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಕಂಟಕ ಇದೆ. ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ, ಗುಂಡಿ, ಕಸ ಅನೇಕ ವಿಚಾರ ಕಾಡ್ತಿದೆ. ನಾವು GBA ಚುನಾವಣೆ ಮಾಡಿ ನಾವು ಗೆಲ್ಲಲು ಸಾಧ್ಯವಿಲ್ಲ ಅನ್ನೋದು ಗೊತ್ತಾಗಿದೆ.

chalavadi narayanaswamy
ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!

ಕೆಂಪೇಗೌಡರ ನಾಡು ಬೆಂಗಳೂರನ್ನ ಐದು ತುಂಡು ಮಾಡಿದ್ದಾರೆ. ಎರಡು ಪಾಲಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಈಗ ಹೋದ್ರೆ ಗೆಲ್ಲಲ್ಲ ಅಂತ ಗೊತ್ತಿದ್ದು, SIR ನೆಪ ಇಟ್ಟುಕೊಂಡು ತಡೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಮರು ಪರಿಶೀಲನಾ ಅರ್ಜಿ ಹಾಕಿದ್ದಾರೆ. ಮತದಾರರ ಹಕ್ಕನ್ನ ಕಿತ್ತುಕೊಳ್ಳಲು ಹೊರಟಿದ್ದಾರೆ. SIR ನಲ್ಲಿ ಸತ್ತವರ ಹೆಸರನ್ನ ತೆಯಬೇಕು. ಆದ್ರೆ ಹೊರಗಡೆ ಇಂದ ಬಂದವರ ಹೆಸರನ್ನ ಸೇರಿಸಲಾಗ್ತಿದೆ. ಈ ಪ್ರಾಂತ್ಯದವರ ಹಕ್ಕನ್ನ ಕಿತ್ತುಕೊಳ್ಳಲು ಆಗಲ್ಲ. ಗುಂಪಾಗಿ ಹೋಗಿ ಪರಿಷ್ಕರಣೆ ಮಾಡಲಾಗ್ತಿದೆ. ಸೋಲಿನ ಭೀತಿಯಿಂದ GBA ಚುನಾವಣೆ ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com