ಪುತ್ರಿಯ ಅಕ್ರಮಕ್ಕೆ ನೆರವು ಆರೋಪದ ಮೇಲೆ ಅಮಾನತು: ಹೈಕೋರ್ಟ್ ಮೆಟ್ಟಿಲೇರಿದ KPSC ಅಧ್ಯಕ್ಷ

ಅಮಾನತು ಆದೇಶ ಹೊರಬಿದ್ದ ತಕ್ಷಣವೇ ಸಾಹುಕಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ನಿನ್ನೆ ಅರ್ಜಿಯ ವಿಚಾರಣೆಯನ್ನು ಕೆಲಕಾಲ ನಡೆಸಿದರು.
High court
ಹೈಕೋರ್ಟ್
Updated on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಮಾನತುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಮಾನತಿಗೆ ಕಾರಣವಾಗಿರುವುದು ಅವರ ಪುತ್ರಿಯ ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವಾದವಾಗಿದೆ.

ಅಮಾನತು ಆದೇಶ ಹೊರಬಿದ್ದ ತಕ್ಷಣವೇ ಸಾಹುಕಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ನಿನ್ನೆ ಅರ್ಜಿಯ ವಿಚಾರಣೆಯನ್ನು ಕೆಲಕಾಲ ನಡೆಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಭಾರತ ಸಂವಿಧಾನದ 317ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ಮೂಲಕ ವಿಚಾರಣೆ ಆರಂಭಿಸುವ ಮುನ್ನವೇ ರಾಜ್ಯಪಾಲರು ಅಮಾನತು ಕ್ರಮ ಕೈಗೊಂಡಿರುವುದು ಕಾನೂನುಬದ್ಧವಲ್ಲ ಎಂದು ವಾದಿಸಿದರು.

High court
ಪುತ್ರಿಯರ ಅಕ್ರಮ ನೇಮಕಕ್ಕೆ ನೆರವು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ

ಇದಕ್ಕೆ ಪ್ರತಿಯಾಗಿ ರಾಜ್ಯಪಾಲರ ಪರ ಹಾಜರಾದ ಹಿರಿಯ ವಕೀಲ ಉದಯ ಹೊಳ್ಳ, ಅರ್ಜಿದಾರರ ವಿರುದ್ಧದ ಆರೋಪಗಳ ಗಂಭೀರತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಗಣಿಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಇಂದಿಗೆ ಮುಂದೂಡಿತು. ತಮ್ಮ ತಮ್ಮ ವಾದಕ್ಕೆ ಆಧಾರವಾಗಿರುವ ತೀರ್ಪುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎರಡೂ ಕಡೆಯ ವಕೀಲರಿಗೆ ಸೂಚಿಸಿದೆ. ರಾಜ್ಯಪಾಲರು ತಮ್ಮ ಅಧಿಕಾರವನ್ನು ಕಾನೂನುಬದ್ಧವಾಗಿ ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಈ ತೀರ್ಪುಗಳು ನೆರವಾಗಲಿವೆ ಎಂದು ನ್ಯಾಯಾಲಯ ಹೇಳಿದೆ.

ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್, ಗ್ರೂಪ್ ‘ಸಿ’ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವೇಳೆ 3ಬಿ ಮೀಸಲಾತಿ ವರ್ಗದ ಸೌಲಭ್ಯ ಪಡೆದಿದ್ದರು.

ಆದರೆ, ತಾವು 3ಬಿ ಜಾತಿ ಪ್ರಮಾಣಪತ್ರಕ್ಕಾಗಿ ಮಾತ್ರ ಅರ್ಜಿ ಸಲ್ಲಿಸಿದ್ದೆ, ಅದರಲ್ಲಿ ಆದಾಯದ ಮಾಹಿತಿಯೂ ಸೇರಿರುತ್ತದೆ ಎಂಬುದು ತಿಳಿದಿರಲಿಲ್ಲ ಎಂದು ಸುಮಾ ತಮ್ಮ ವಾದದಲ್ಲಿ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಆಯೋಗಕ್ಕೆ ಈ ವಿಷಯ ಗಮನಕ್ಕೆ ಬಂದಿದ್ದು, ಪ್ರಮಾಣಪತ್ರದಲ್ಲಿ ನಮೂದಿಸಿದ್ದ ಆದಾಯವು ಸುಮಾ ಅವರ ತಂದೆಯ ನಿಜವಾದ ಆದಾಯಕ್ಕಿಂತ ಕಡಿಮೆ ಎಂದು ಹೇಳಿ ವಿವಾದ ಹುಟ್ಟಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com