'ISIS ಉಗ್ರನಿಗೆ ರಾಜಾತಿಥ್ಯ ನೀಡಿದ ಸರ್ಕಾರದ ಮಹಾನ್ ಗೃಹ ಸಚಿವರಿಗೆ RSS ಬಗ್ಗೆ ಅಧ್ಯಯನ ಮಾಡೋಕೆ ಸಮಯ ಸಿಕ್ತಿಲ್ಲ; ಇನ್ನು ಕಾನೂನು ಸುವವ್ಯಸ್ಥೆ ಕಾಪಾಡೋಕೆ ಸಮಯ ಎಲ್ಲಿದೆ'

ಪಾಪ, ನಿಮಗೆ RSS ಬಗ್ಗೆ ಅಧ್ಯಯನ ಮಾಡೋಕೆ ಸಮಯ ಸಿಗುತ್ತಿಲ್ಲ, ಇನ್ನೂ ಜೈಲು, ಕಾನೂನು ಸುವವ್ಯಸ್ಥೆ ಕಾಪಾಡೋಕೆ ಸಮಯ ಎಲ್ಲಿದೆ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.
B Y Vijayendra
ಬಿ ವೈ ವಿಜಯೇಂದ್ರ
Updated on

ಬೆಂಗಳೂರು: ಐಸಿಸ್ ಉಗ್ರನಿಗೆ ರಾಜಾತಿಥ್ಯ ನೀಡಿದ ಮಹಾನ ಸರ್ಕಾರದ ಮಹಾನ್ ಗೃಹ ಸಚಿವರೇ, ನೀವು ಆರ್ ಎಸ್ ಎಸ್ ಬಗ್ಗೆ ಚಿಂತೆ ಮಾಡುವುದನ್ನು ಬಿಡಿ. ನಿಮ್ಮ ತವರು ಜಿಲ್ಲೆಯಲ್ಲಿಯೇ ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡಿದ್ದು ನಿಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹರಿಹಾಯ್ದಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, 2010ರಲ್ಲಿ ಆಯಿತು ಅಂತ ಈಗ ನೀವು ಜೈಲಿನಿಂದ ತಪ್ಪಿಸಿಕೊಳ್ಳಲು ಬಿಟ್ಟಿದ್ದೀರಾ? ನಿಮ್ಮ ವೈಪಲ್ಯ ಮರೆ ಮಾಚಲು ಕಾಗಕ್ಕ ಗುಬ್ಬಕ್ಕ ಕಥೆ ಹೇಳಬೇಡಿ... ಪಾಪ, ನಿಮಗೆ RSS ಬಗ್ಗೆ ಅಧ್ಯಯನ ಮಾಡೋಕೆ ಸಮಯ ಸಿಗುತ್ತಿಲ್ಲ, ಇನ್ನೂ ಜೈಲು, ಕಾನೂನು ಸುವವ್ಯಸ್ಥೆ ಕಾಪಾಡೋಕೆ ಸಮಯ ಎಲ್ಲಿದೆ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.

ಮಹತ್ವದ ಇಲಾಖೆಯ ಜವಾಬ್ದಾರಿ ಹೊತ್ತಿರುವ ತಾವು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಮ್ಮ ಯೋಗ್ಯತೆಯನ್ನು ತೋರಿಸುತ್ತದೆ. ತಮ್ಮ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ಜೈಲಿನಲ್ಲಿ ಏನೇನಾಗಿತ್ತು ಎನ್ನುವದು ಇಡೀ ದೇಶದ ಜನತೆಗೆ ಗೊತ್ತಿದೆ ಮಿಸ್ಟರ್ ಹೋಮ್ ಮಿನಿಸ್ಟರ್... ನಾಚಿಕೆ ಆಗಬೇಕು ನಿಮಗೆ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡೋಕೆ ಎಂದು ಲೇವಡಿ ಮಾಡಿದ್ದಾರೆ.

B Y Vijayendra
Watch | ಕಲಬುರಗಿ: ಪರಾರಿಯಾಗಿದ್ದ ಕೈದಿಯ ಕಾಲಿಗೆ ಗುಂಡು ಹಾರಿಸಿ ಬಂಧನ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com