Video: ಬೀದರ್ BRIMS ಆಸ್ಪತ್ರೆಯಲ್ಲಿ ಕುಡುಕರ ಹುಚ್ಚಾಟ; ಎಮರ್ಜೆನ್ಸಿ ವಾರ್ಡ್‌ಗೆ ಬೈಕ್ ನುಗ್ಗಿಸಿದ ಯುವಕರು, ರೋಗಿಗಳಲ್ಲಿ ಆತಂಕ!

ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ಆಸ್ಪತ್ರೆ ಆವರಣ ಪ್ರವೇಶಿಸಿ, ನೇರವಾಗಿ ಬೈಕ್ ಅನ್ನು ತುರ್ತು ಚಿಕಿತ್ಸಾ ವಿಭಾಗದೊಳಗೆ ಚಲಾಯಿಸಿದ್ದಾರೆ.
Drunk Youths Ride Motorcycle Into Bidar Hospital Emergency Ward
ಬೈಕ್ ಸಮೇತ ಆಸ್ಪತ್ರೆಗೆ ನುಗ್ಗಿದ ಮದ್ಯಪಾನಿಗಳು
Updated on

ಬೀದರ್: ಕರ್ನಾಟಕದ ಬೀದರ್ ಜಿಲ್ಲೆಯ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (BRIMS) ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ (ಎಮರ್ಜೆನ್ಸಿ ವಾರ್ಡ್) ಮದ್ಯಪಾನ ಮಾಡಿದ್ದ ದ ಅಮಲಿನಲ್ಲಿದ್ದರೆನ್ನಲಾದ ಇಬ್ಬರು ಯುವಕರು ಬೈಕ್‌ನಲ್ಲೇ ನುಗ್ಗಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ಆಸ್ಪತ್ರೆ ಆವರಣ ಪ್ರವೇಶಿಸಿ, ನೇರವಾಗಿ ಬೈಕ್ ಅನ್ನು ತುರ್ತು ಚಿಕಿತ್ಸಾ ವಿಭಾಗದೊಳಗೆ ಚಲಾಯಿಸಿದ್ದಾರೆ.

ಈ ಆಕಸ್ಮಿಕ ಘಟನೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು, ಅವರ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಕೆಲಕಾಲ ಗಾಬರಿಗೊಂಡರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

Drunk Youths Ride Motorcycle Into Bidar Hospital Emergency Ward
ಬೆಂಗಳೂರಿನಲ್ಲಿ ಮತ್ತೊಂದು Road Rage: ಕಾರಿನ ಬಾನೆಟ್ ಮೇಲೆ 1 ಕಿ.ಮೀ ವ್ಯಕ್ತಿ ಎಳೆದೊಯ್ದ ಕ್ಯಾಬ್ ಚಾಲಕ, Video ವೈರಲ್

ಕೂಡಲೇ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆಯಲು ಮುಂದಾದ ವೇಳೆ ಅವರು ಪ್ರತಿರೋಧ ತೋರಿದ್ದಾರೆ ಎನ್ನಲಾಗಿದೆ. ಬಳಿಕ ಅವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದ್ದು, ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿಯಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಯುವಕರ ಕೃತ್ಯಕ್ಕೆ ಕಾರಣವೇನು? ನಿಜಕ್ಕೂ ಅವರು ಮದ್ಯದ ಅಮಲಿನಲ್ಲಿ ಈ ಕೃತ್ಯವೆಸಗಿದರೇ? ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com