

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಬುಧವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆಜೆ ನಗರದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಅಕ್ರಂ ಪಾಷಾ (43) ಎಂದು ಗುರುತಿಸಲಾಗಿದ್ದು, ಉಮರ್ ಖಾಲೀದ್ ಎಂಬುವವರ ಪತ್ನಿಯ ಜೊತೆ ಅಕ್ರಂ ಪಾಷಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ.
ನಿನ್ನೆ ರಾತ್ರಿ ಅಕ್ರಂ ಪಾಷಾ ಉಮರ್ ಖಾಲಿದ್ ಮನೆ ಬಳಿ ಬಂದಿದ್ದರು. ಈ ವೇಳೆ ಉಮರ್ ಖಾಲಿದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುಮಾರು 12:30ಕ್ಕೆ ಹಲ್ಲೆ ಆಗಿದೆ ಎಂದು ಮಾಹಿತಿ ನಮಗೆ ಬಂದಿತ್ತು. ಮಾಹಿತಿ ಆಧರಿಸಿ ಪೊಲೀಸರು ಹೋಗಿ ನೋಡಿದಾಗ ಓರ್ವ ವ್ಯಕ್ತಿ ಮೇಲೆ ಭೀಕರ ಹಲ್ಲೆ ಆಗಿರುತ್ತದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಅಕ್ರಂ ಪಾಷಾ ಮೃತಪಟ್ಟಿದ್ದಾನೆ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಅವರು ಹೇಳಿದ್ದಾರೆ.
ಅಕ್ರಂ ಪಾಷಾ ಹಾಗೂ ಉಮರ್ ಖಾಲಿದ್ ಕಾರು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಪತ್ನಿ ಜತೆ ಅಕ್ರಮ ಸಂಬಂಧ ವಿಚಾರವಾಗಿ ಆರೋಪಿ ಉಮರ್, ಅಕ್ರಂ ಪಾಷಾ ಮೇಲೆ ಹಲ್ಲೆ ಮಾಡಿದ್ದಾನೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೂರ್ತಿ ತನಿಖೆ ಆದಮೇಲೆ ನಿಖರ ಕಾರಣ ತಿಳಿದು ಬರಲಿದೆ. ಆರೋಪಿ ಹೆಂಡತಿಗೂ ಮೃತನಿಗೂ ಸಂಬಂಧವಿತ್ತು. ಅದೇ ವಿಚಾರಕ್ಕೆ ಗಲಾಟೆಯಾಗಿದೆ ಎಂಬ ಮಾಹಿತಿ ಇದೆ. ಆರೋಪಿ ಉಮರ್ ಖಾಲೀದ್‌ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಯತೀಶ್ ತಿಳಿಸಿದ್ದಾರೆ.
Advertisement