ಕಾಂಗ್ರೆಸ್ ಸಚಿವ ಸಂಪುಟ ಭಿನ್ನಮತ ಶಮನ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ!

ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಸಚಿವ ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮನವೊಲಿಕೆ, ಸಂಧಾನದ ಬಳಿಕ ರಾಜಿನಾಮೆ ವಾಪಸ್ ಪಡೆದಿದ್ದಾರೆ.
Ramalinga Reddy
ರಾಮಲಿಂಗಾ ರೆಡ್ಡಿonline desk
Updated on

ಬೆಂಗಳೂರು: ಖಾತೆ ಹಂಚಿಕೆ ವಿಷಯವಾಗಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿದ್ದ ಗೊಂದಲ, ಭಿನ್ನಮತ ಶಮನಗೊಂಡಂತಿದೆ.

ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಸಚಿವ ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮನವೊಲಿಕೆ, ಸಂಧಾನದ ಬಳಿಕ ರಾಜಿನಾಮೆ ವಾಪಸ್ ಪಡೆದಿದ್ದಾರೆ.

Ramalinga Reddy
ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ; ಪಕ್ಷ ಬಿಟ್ಟು ಹೋಗುವೆ ಎಂದು ರಾಮಲಿಂಗಾರೆಡ್ಡಿ ಎಲ್ಲಾದರೂ ಹೇಳಿದ್ದಾರೆಯೇ?

ಹೈಕಮಾಂಡ್ ನಾಯಕ ರಣ್ದೀಪ್ ಸುರ್ಜೆವಾಲ ಅವರೊಂದಿಗೆ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾ ರೆಡ್ಡಿ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಆದರೆ ಮುಖ್ಯಮಂತ್ರಿಗಳು ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ, ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎಂದರೆ ರಿಜೆಕ್ಟ್ ಎಂದು ಅರ್ಥ. ಸಿಎಂ ಜೊತೆ ಮಾತನಾಡಿದ್ದೇನೆ. ಖಾತೆ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಎಲ್ಲಾ ಗೊಂದಲಗಳೂ ಬಗೆಹರಿದಿವೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com