'12 ವರ್ಷ ಪ್ರಧಾನಿಯಾಗಿರುವ ಮೋದಿ ಅದು ಹೇಗೆ ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಪಿಎಂ ಆಗುತ್ತಾರೆ ಯಾರಾದರೂ ಬುದ್ಧಿವಂತರು ವಿವರಿಸಿ': ಡಾ ಹೆಚ್ ಸಿ ಮಹದೇವಪ್ಪ

ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಹರೂ ಮತ್ತು ಇಂದಿರಾ ಗಾಂಧಿಯವರು ದೇಶವನ್ನಾಳಿದ ವರ್ಷಗಳನ್ನು ಲೆಕ್ಕಹಾಕಿ ಪ್ರಧಾನಿ ಮೋದಿಯವರು ಅದು ಹೇಗೆ ಅತಿ ದೀರ್ಘಾವಧಿ ಆಡಳಿತ ನಡೆಸಿದ ಪ್ರಧಾನಿಯಾಗಿದ್ದಾರೆ ಎಂದು ಬುದ್ಧಿವಂತರು ಸ್ವಲ್ಪ ವಿವರಿಸಿ ಎಂದು ವ್ಯಂಗ್ಯವಾಡಿದ್ದಾರೆ.
PM Narendra Modi and Dr H C Mahadevappa(File photo)
ಡಾ ಹೆಚ್ ಸಿ ಮಹದೇವಪ್ಪ, ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Updated on

ಸತತ 12 ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ದಾಖಲೆ ನಿರ್ಮಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಭಿನಂದನಾ ನಿರ್ಣಯ ಅಂಗೀಕರಿಸಿ ಸಂಪುಟ ಸಹೋದ್ಯೋಗಿಗಳು ಎದ್ದುನಿಂತು ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.

ನಂತರ ಎನ್ ಡಿಎ ಸದಸ್ಯರ ಜೊತೆ ಸಂಜೆ ದೆಹಲಿಯ ಭಾರತ ಮಂಟಪ್ ನಲ್ಲಿ ಸಂಭ್ರಮಾಚರಣೆ ಕೂಡ ನೆರವೇರಿತ್ತು. ಇದಕ್ಕೆ ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಹರೂ ಮತ್ತು ಇಂದಿರಾ ಗಾಂಧಿಯವರು ದೇಶವನ್ನಾಳಿದ ವರ್ಷಗಳನ್ನು ಲೆಕ್ಕಹಾಕಿ ಪ್ರಧಾನಿ ಮೋದಿಯವರು ಅದು ಹೇಗೆ ಅತಿ ದೀರ್ಘಾವಧಿ ಆಡಳಿತ ನಡೆಸಿದ ಪ್ರಧಾನಿಯಾಗಿದ್ದಾರೆ ಎಂದು ಬುದ್ಧಿವಂತರು ಸ್ವಲ್ಪ ವಿವರಿಸಿ ಎಂದು ಕುಟುಕಿದ್ದಾರೆ.

PM Narendra Modi and Dr H C Mahadevappa(File photo)
ಮೋದಿ ದಾಖಲೆ ಸಭೆಯಲ್ಲಿ ಮತ್ತೆ ಸುದ್ದಿಯಾದ ಝಲ್ ಮುರಿ ಸ್ನ್ಯಾಕ್ಸ್: ಅಮಿತ್ ಶಾ ಸೋಷಿಯಲ್ ಮೀಡಿಯಾ ಪೋಸ್ಟ್ ನ ಅರ್ಥವೇನು?

ನೆಹರೂ ಪ್ರಧಾನಿಯಾಗಿದ್ದು ಆಗಸ್ಟ್ 15, 1947 ರಿಂದ ಮೇ 27, 1964ರ ವರೆಗೆ. ಅಂದರೆ ಬರೋಬ್ಬರಿ 16 ವರ್ಷಗಳು ಮತ್ತು 286 ದಿನಗಳು. ಇಂದಿರಾ ಗಾಂಧಿ ಪ್ರಧಾನಿ ಆಗಿದ್ದದ್ದು ಎರಡು ಅವಧಿಯಲ್ಲಿ ಒಟ್ಟು 15 ವರ್ಷಗಳು ಮತ್ತು 350 ದಿನಗಳು. 12 ವರ್ಷ ಪ್ರಧಾನಿಯಾಗಿರುವ ಮೋದಿ ಅದು ಹೇಗೆ ಭಾರತದ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಆಗುತ್ತಾರೆ ಎಂಬುದನ್ನು ಯಾರಾದರೂ ಬುದ್ಧಿವಂತರು ವಿವರಿಸಿ ಎಂದು ಕೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಿ, ರಾಷ್ಟ್ರೀಯ ಸಂಸ್ಥೆಗಳನ್ನು ಬೆಳೆಸಿ, ದೇಶ ಕಟ್ಟುವ ಕೆಲಸ ಮಾಡಿದ ಪಂಡಿತ್ ನೆಹರೂ ಎಲ್ಲಿ, ದೇಶವನ್ನು ಸಾಲದ ಸುಳಿಗೆ ನೂಕಿ, ಕಾರ್ಪೋರೆಟ್ ಗಳ ಸೇವೆ ಮಾಡುತ್ತಾ ದೇಶದ ಭವಿಷ್ಯವನ್ನು , ಆರ್ಥಿಕತೆಯನ್ನು ಕತ್ತಲಿಗೆ ನೂಕಿರುವ ಪ್ರಧಾನಿ ನರೇಂದ್ರ ಮೋದಿ ಹೋಲಿಕೆ ಎಲ್ಲಿ ಎಂದು ಕೇಳಿದ್ದಾರೆ.

PM Narendra Modi and Dr H C Mahadevappa(File photo)
ದೀರ್ಘಾವಧಿ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾದ ಮೋದಿಗೆ ವಿಶ್ವ ನಾಯಕರಿಂದ ಅಭಿನಂದನೆಗಳ ಮಹಾಪೂರ; ಹೇಳಿದ್ದೇನು?

X

Advertisement

X
Kannada Prabha
www.kannadaprabha.com