

ಕಾಂಗ್ರೆಸ್ ಸರ್ಕಾರದ ಎಡಪಂಥೀಯ ಪಟಾಲಂ ಹಣೆದಿದ್ದ ನೀಚ ಸಂಚು ಇಂದು ನಡುರಸ್ತೆಯಲ್ಲಿ ಬೆತ್ತಲಾಗಿದೆ. ಮುಸುಕುಧಾರಿ ಚಿನ್ನಯ್ಯ ಎಂಬ ಅಯೋಗ್ಯನನ್ನು ಮುಂದಿಟ್ಟುಕೊಂಡು, ಕ್ಷೇತ್ರಕ್ಕೆ ಕಳಂಕ ಹಚ್ಚಲು ಕಾಂಗ್ರೆಸ್ ಹೆಣೆದಿದ್ದ 200 ಕೋಟಿ ರೂಪಾಯಿಗಳ ಬ್ರಹ್ಮಾಂಡ ಷಡ್ಯಂತ್ರದ ಮುಖವಾಡ ಇಂದು ಕಳಚಿ ಬಿದ್ದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತೀವ್ರ ಟೀಕೆ ಮಾಡಿದ್ದಾರೆ.
ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಅಂದು ಸತ್ಯದ ಪರ ನಿಲ್ಲಬೇಕಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಬುರುಡೆ ದಾಸನಿಗೆ ರೆಡ್ ಕಾರ್ಪೆಟ್ ಹಾಸಿ ವೈಭವೀಕರಿಸಿದ್ದರು. ಧರ್ಮದ ನೆಲೆಗಟ್ಟನ್ನು ಅಲ್ಲಾಡಿಸಲು ಹೋದ ಸಿದ್ದರಾಮಯ್ಯನವರಿಗೆ ಕಾಲವೇ ತಕ್ಕ ಶಾಸ್ತಿ ಮಾಡಿದೆ ಎಂದಿದ್ದಾರೆ.
ಅಂದು ಈ ಸನಾತನ ವಿರೋಧಿ ನೀತಿಯನ್ನು ಖಂಡಿಸಿ, ಧರ್ಮ ರಕ್ಷಣೆಗಾಗಿ ಬಿಜೆಪಿ ಧರ್ಮಸ್ಥಳ ಚಲೋ' ನಡೆಸಿ ಎಚ್ಚರಿಸಿತ್ತು. ಇಂದು ಆ ಹೋರಾಟಕ್ಕೆ ಜಯ ಸಿಕ್ಕಿದೆ, ಸತ್ಯ ಸೂರ್ಯನಂತೆ ಹೊರಬಂದಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವಕ್ಕೆ, ಧರ್ಮಸ್ಥಳದ ಘನತೆಗೆ ಮಸಿ ಬಳಿಯಲು ಯತ್ನಿಸಿದ ಕಾಂಗ್ರೆಸ್ ಸರ್ಕಾರ ತಕ್ಷಣ ಕರ್ನಾಟಕದ ಜನತೆಯ ಬಹಿರಂಗ ಕ್ಷಮೆಯಾಚಿಸಬೇಕು. ಈ ಇಡೀ ಕೃತ್ಯದ ಹಿಂದಿರುವ ಸೂತ್ರಧಾರಿಗಳನ್ನು ಕಂಬಿ ಹಿಂದೆ ತಳ್ಳುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement