ಕೋಲಾರ: ಸಂಪ್‌ಗೆ ಬಿದ್ದು 3 ವರ್ಷದ ಮಗು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಮೃತ ಮಗುವನ್ನು ನಗರದ ವಿಕಾಸ್ ಹಾಗೂ ಹಂಸ ದಂಪತಿ ಪುತ್ರ ಯಶಸ್(3) ಎಂದು ಗುರುತಿಸಲಾಗಿದ್ದು, ಅಂಗಳದಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಸಂಪ್‌ಗೆ ಬಿದ್ದಿದೆ.
3 Year old child dies after falling into water sump in Kolar
ಸಾಂದರ್ಭಿಕ ಚಿತ್ರ
Updated on

ಕೋಲಾರ: ಕೋಲಾರದ ಕಾರಂಜಿಕಟ್ಟೆ ಬಡಾವಣೆಯ 10ನೇ ಕ್ರಾಸ್‌ನಲ್ಲಿ ಸೋಮವಾರ ಮನೆ ಬಳಿಯ ಸಂಪ್‌ಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಮೃತ ಮಗುವನ್ನು ನಗರದ ವಿಕಾಸ್ ಹಾಗೂ ಹಂಸ ದಂಪತಿ ಪುತ್ರ ಯಶಸ್(3) ಎಂದು ಗುರುತಿಸಲಾಗಿದ್ದು, ಅಂಗಳದಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಸಂಪ್‌ಗೆ ಬಿದ್ದಿದೆ.

ಸಂಪ್‌ಗೆ ಬಿದ್ದ ಮಗುವನ್ನು ತಕ್ಷಣ ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

3 Year old child dies after falling into water sump in Kolar
ಬೆಂಗಳೂರು: ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ BWSSB ಸಂಪ್ ನಲ್ಲಿ ಶವವಾಗಿ ಪತ್ತೆ!

ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com