

ಕೋಲಾರ: ಲಂಚ ಕೇಳಿದರೆ ದೂರು ಕೊಡಿ ಎಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರ ಮಾತು ನಂಬಬೇಕೇ ಅಥವಾ ಅವರ ಚರಿತ್ರೆ ನೋಡಬೇಕೇ ಗೊತ್ತಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.
ಕೋಲಾರದಲ್ಲಿ ಮಾತನಾಡಿದ ಅವರು, ಡಿಕೆಶಿ ಉಸ್ತುವಾರಿ ಸಚಿವರಾಗಿದ್ದ ಬೆಂಗಳೂರಿನಲ್ಲಿ ಭೂಪರಿವರ್ತನೆಗೆಂದು ಅಡಿಗೆ 100 ಕೊಡಬೇಕಿತ್ತಂತೆ. ಇದು ಶುಲ್ಕವಲ್ಲ ಲಂಚ. ಆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಹೆದರಬೇಡಿ, ನಾನಿದ್ದೇನೆ ಧೈರ್ಯವಾಗಿರಿ’ ಎಂದು ಕುರಿಗಳಿಗೆ ತೋಳ ನಿತ್ಯ ಹೇಳುತ್ತಿತಂತೆ. ತೋಳದ ಮಾತು ನಂಬಿ ದಿನ ಕಳೆದಂತೆ ಕುರಿಗಳ ಸಂಖ್ಯೆ ಕಡಿಮೆ ಆಗುತ್ತಾ ಹೋಯಿತಂತೆ. ರಾಜ್ಯದ್ದು ಕುರಿಗಳ ಪರಿಸ್ಥಿತಿ ಆಗಬಾರದು. ತೋಳನ ಕೈಗೆ ಕುರಿಮಂದಿಯನ್ನು ಒಪ್ಪಿಸಬಾರದು. ನಾವು ಕುರಿಗಾಹಿಗಳಾಗಿ ತೋಳದಿಂದ ಕುರಿಗಳನ್ನು ರಕ್ಷಿಸೋಣ ಎಂದು ಹೇಳಿದರು.
ಪ್ರಿಯಾಂಕ್ ಅವರಿಗೆ ಆರ್‌ಎಸ್‌ಎಸ್ ಯಾವುದೇ ಸ್ಪಷ್ಟನೆ, ಪ್ರತಿಕ್ರಿಯೆ ಕೊಟ್ಟಿಲ್ಲ. ಕೇರಳಂನಲ್ಲಿ ಜನರ ಪ್ರಶ್ನೆಯೊಂದಕ್ಕೆ ಸಂಘದ ಮೋಹನ್ ಭಾಗವತ್ ಉತ್ತರಿಸಿದ್ದಾರೆ. 100 ವರ್ಷಗಳ ಬೆಳವಣಿಗೆಯೇ ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ, ಜನ ಸ್ವೀಕಾರ ಮಾಡಿರುವುದಕ್ಕೂ ಸಾಕ್ಷಿಯಾಗಿದೆ. ಸಂಘದ ಸ್ವಯಂಸೇವಕರೇ ದೇಶದ ಪ್ರಧಾನಿ, ದೇಶದ ಗೃಹಸಚಿವ, ರಾಷ್ಟ್ರಪತಿ ಆಗಿದ್ದಾರೆ. ದೇಶದ ಜನ ಸ್ವೀಕಾರ ಮಾಡಿದ್ದರೆ ಎಂದರ್ಥ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕಾದರೆ ಸಂಘದ ಶಾಖೆಗೆ ಬರಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಮೋಹನ್ ಭಾಗವತ್‌ರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಪತ್ರ ಬರೆದಿದ್ದರೆ ಸರ್ಕಾರದಲ್ಲೇ ಅದಕ್ಕೆ ದಾಖಲೆ ಇವೆ. ಆರ್‌ಎಸ್‌ಎಸ್ ಅನ್ನು 3 ಬಾರಿ ನಿಷೇಧಕ್ಕೆ ಹಾಕಲಾಗಿತ್ತು. 2 ಬಾರಿ ಕೋರ್ಟ್ ನಿಷೇಧ ವಾಪಸ್ ಪಡೆದಿತ್ತು. ಒಮ್ಮೆ ಸರ್ಕಾರ ನಿಷೇಧ ವಾಪಸ್ ಪಡೆದಿತ್ತು. ನಿಮ್ಮ ಪ್ರಶ್ನೆಗಳಿಗೆ ಸರ್ಕಾರ ಮತ್ತು ನ್ಯಾಯಾಲಯದ ಹಂತದಲ್ಲಿ ಚರ್ಚೆ ಆಗಿದೆ. ಸಂವಿಧಾನದಲ್ಲಿ ನೋಂದಣಿ, ನೋಂದಣಿ ರಹಿತವಾಗಿ ನಡೆಸಲು ಅವಕಾಶ ಮಾಡಿ ಕೊಟ್ಟಿದೆ ಎಂದು ತಿಳಿಸಿದರು
Advertisement