Watch | ನನ್ನ ಪತ್ರಕ್ಕೆ ಮೋಹನ್ ಭಾಗ್ವತ್ ಅವರು ಪ್ರತಿಕ್ರಿಯೆ ನೀಡಿಲ್ಲ!

ನೋಂದಣಿ ವಿಷಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಂಘವು 'ಅಹಂಕಾರವನ್ನು ಬಿಟ್ಟು' ಕಾನೂನನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ RSS ನೋಂದಣಿ ಬಗ್ಗೆ ಸ್ಪಷ್ಟನೆ ಕೋರಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದರು.

ಅದಕ್ಕೆ ಮೋಹನ್ ಭಾಗವತ್ ಅವರು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮಾಧ್ಯಗಳಲ್ಲಿ ವರದಿಯಾಗಿತ್ತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿಡಿಯೋ ಸಹ ವೈರಲ್ ಆಗಿತ್ತು.

ಭಾಗವತ್ ಅವರದ್ದು ಎನ್ನಲಾದ ವಿಡಿಯೋದ ಅಸಲಿಯತ್ತನ್ನು ಪರಿಶೀಲಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅದು ನನ್ನ ಪತ್ರಕ್ಕೆ ನೀಡಿದ ಉತ್ತರ ಅಲ್ಲ ಎಂದು ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com