

ಬೆಂಗಳೂರು: ಕಳೆದ ವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಹೈಕಮಾಂಡ್ ಗೆ ವರದಿ ಸಲ್ಲಿಸಲು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದವರು ಯಾರು ಎಂಬುದನ್ನು ತಿಳಿಯಲು ಮಂಜುನಾಥನ ಸನ್ನಿಧಿಯಲ್ಲಿ ಆಣೆ- ಪ್ರಮಾಣ ಮಾಡಿಸಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಬಿ.ವೈ. ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ. ಆದರೆ ಪಕ್ಷದ ಹಲವು ಹಿರಿಯ ನಾಯಕರು ರಾಜಕೀಯ ಉದ್ದೇಶಗಳಿಗಾಗಿ ಪವಿತ್ರ ಸ್ಥಳವನ್ನು ಬಳಸದಂತೆ ಸಲಹೆ ನೀಡಿದ್ದಾರೆ ಎಂದು ಅಶೋಕ ಹೇಳಿದರು.
ನಾಲ್ಕು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೋರಿದ್ದೇವೆ. ಅವರು ನಾಳೆ ಮಧ್ಯಾಹ್ನ ನಮಗೆ ಸಮಯ ನೀಡಿದ್ದಾರೆ. ವಿಧಾನ ಪರಿಷತ್ತಿನ ಚುನಾವಣೆಯ ಸಮಯದಲ್ಲಿ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿದ ಬಗ್ಗೆ ವಿಜಯೇಂದ್ರ ಮತ್ತು ನಾನು ಅವರಿಗೆ ವಿವರಿಸುತ್ತೇವೆ ಎಂದು ಅವರು ಹೇಳಿದರು.
"ನಮ್ಮ ಇಬ್ಬರೂ ಅಭ್ಯರ್ಥಿಗಳು ಗೆದಿದ್ದಾರೆ. ಆದರೆ ಅಡ್ಡ ಮತದಾನ ಕೆಲವು ಶಾಸಕರು ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರು ಯಾರೆಂದು ನಾವು ಗುರುತಿಸಬೇಕಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸಲಾಗಿದ್ದು, ಇಂದು ಅಥವಾ ನಾಳೆಯೊಳಗೆ ಅದು ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ನಾವು ವರದಿಯನ್ನು ಕೇಂದ್ರ ನಾಯರಿಗೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಪಕ್ಷದ ಹೈಕಮಾಂಡ್ ಅಸಮಾಧಾನಗೊಂಡು ನಮ್ಮನ್ನು ಕರೆಸುತ್ತಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ ಅಶೋಕ್, ಆ ರೀತಿಯದ್ದೇನೂ ಇಲ್ಲ. ನಾವು ಅಪಾಯಿಂಟ್ಮೆಂಟ್ ಕೋರಿದ್ದೇವೆ; ಅವರು ನಮಗೆ ಕರೆ ಮಾಡಿಲ್ಲ. ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ರಾಜ್ಯದಲ್ಲಿ ಹಲವು ಬಾರಿ ಅಡ್ಡ ಮತದಾನ ನಡೆದಿದೆ" ಎಂದು ಹೇಳಿದರು.
ಗುರುವಾರ ನಡೆದ ಏಳು ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಎರಡು ಸ್ಥಾನಗಳನ್ನು ಪಡೆದುಕೊಂಡಿತು. ಜೆಡಿಎಸ್ ಸ್ಪರ್ಧಿಸಿದ ಏಕೈಕ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಯಿತು. ಫಲಿತಾಂಶಗಳು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಸೂಚಿಸಿವೆ, ಆಡಳಿತ ಪಕ್ಷವು 151 ಮತಗಳನ್ನು ಗಳಿಸಿದೆ - ನಿರೀಕ್ಷಿತ 140 ಕ್ಕಿಂತ 11 ಹೆಚ್ಚು ಎಂದು ಮೂಲಗಳು ತಿಳಿಸಿವೆ. ಅಡ್ಡ ಮತದಾನಕ್ಕೆ ಕಾರಣರಾದವರನ್ನು ಪಕ್ಷ ಗುರುತಿಸಿದೆಯೇ ಎಂದು ಕೇಳಿದಾಗ, ಅಶೋಕ ಅವರು ಅನುಮಾನಗಳಿವೆ ಆದರೆ ಯಾವುದೇ ದೃಢೀಕರಣವಿಲ್ಲ ಎಂದು ಹೇಳಿದರು.
"ಎಲ್ಲವೂ ಹೊರಬರುತ್ತದೆ. ಕೆಲವರು ಇದನ್ನು ಅಭಿವೃದ್ಧಿಯ ಹಿತಾಸಕ್ತಿಯಿಂದ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದರಲ್ಲಿ ಕುದುರೆ ವ್ಯಾಪಾರ ನಡೆದಿದೆ., ಆದರೂ ಇದನ್ನು ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಯಾರ ಅಭಿವೃದ್ಧಿ? ಕ್ಷೇತ್ರದ ಅಭಿವೃದ್ಧಿಯಲ್ಲ, ಅದು ವೈಯಕ್ತಿಕ ಅಭಿವೃದ್ಧಿಯಾಗಿದೆ. ಅಡ್ಡ ಮತದಾನದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಡಿವಿ ಸದಾನಂದಗೌಡ, ಸುರೇಶ್ ಕುಮಾರ್, ಪ್ರಲ್ಹಾದ್ ಜೋಶಿ ಮತ್ತಿತರರು ಕರೆ ಮಾಡಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವುದು ಬೇಡ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರು ಸತ್ಯವನ್ನು ಮಾತನಾಡುತ್ತಾರೆಯೇ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್ ಶಾಸಕರನ್ನು ಅಡ್ಡ ಮತದಾನಕ್ಕೆ ಪ್ರೇರೇಪಿಸಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಕಾಂಗ್ರೆಸ್ ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆಡಳಿತ ಪಕ್ಷದ ನಾಯಕರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರುತ್ತಾರೆ ಎಂದು ಅವರು ಹೇಳಿದರು.
ನಾವು ಕೂಡ ಹಿಂದೆ 15-16 ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ನೀಡಿ ಅಧಿಕಾರಕ್ಕೆ ಬರುವಂತೆ ಮನವೊಲಿಸಿದ್ದೇವೆ. ಇದು ಹೊಸದಲ್ಲ. ಅಧಿಕಾರದಲ್ಲಿರುವ ಪಕ್ಷಗಳು ಆಗಾಗ್ಗೆ ಇಂತಹ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತವೆ" ಎಂದು ಅವರು ಹೇಳಿದರು.
'ಆಪರೇಷನ್ ಕಮಲ' ಬಗ್ಗೆ ಕಾಂಗ್ರೆಸ್ ಪದೇ ಪದೇ ಮಾಡುತ್ತಿರುವ ಆರೋಪಗಳನ್ನು ಉಲ್ಲೇಖಿಸಿದ ಅಶೋಕ, "ನೀವು ಈಗ ಏನು ಮಾಡಿದ್ದೀರಿ? ನಾವು ಅದನ್ನು 'ಆಪರೇಷನ್ ಹಸ್ತ' (ಆಪರೇಷನ್ ಹ್ಯಾಂಡ್) ಎಂದು ಕರೆಯುತ್ತೇವೆ. ನೀವು ಕುದುರೆ ವ್ಯಾಪಾರದಲ್ಲಿ ತೊಡಗಿದ್ದೀರಿ ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್ ನಾಯಕರು ಸ್ವತಃ ಬಿಜೆಪಿಗೆ ಸೇರುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
Advertisement