ರಾಮನಗರ: ಫಾರ್ಮ್​ಹೌಸ್ ಗೇಟ್ ಬಳಿ ನಾಡಬಾಂಬ್ ಸ್ಫೋಟ; ವಕೀಲನ ಸ್ಥಿತಿ ಗಂಭೀರ

ಫಾರ್ಮ್ ಹೌಸ್ ಮುಂಭಾಗದ ಗೇಟ್ ಬಳಿ ದುಷ್ಕರ್ಮಿಗಳು ನಾಡಬಾಂಬ್ ಇಟ್ಟಿದ್ದರು ಎನ್ನಲಾಗುತ್ತಿದೆ. ಸುಣ್ಣ ಘಟ್ಟ ಗ್ರಾಮದಲ್ಲಿರೋ ಫಾರ್ಮ್ ಹೌಸ್​​ ಗೇಟ್ ಓಪನ್ ಮಾಡುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡಿದೆ.
Representational image
ಸಾಂದರ್ಭಿಕ ಚಿತ್ರ
Updated on

ರಾಮನಗರ: ಬೆಂಗಳೂರು ದಕ್ಷಿಣ ‌ಜಿಲ್ಲೆ ಹಾರೋಹಳ್ಳಿ ತಾಲೂಕಿನ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವಕೀಲರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಫಾರ್ಮ್ ಹೌಸ್ ಮುಂಭಾಗದ ಗೇಟ್ ಬಳಿ ದುಷ್ಕರ್ಮಿಗಳು ನಾಡಬಾಂಬ್ ಇಟ್ಟಿದ್ದರು ಎನ್ನಲಾಗುತ್ತಿದೆ. ಸುಣ್ಣ ಘಟ್ಟ ಗ್ರಾಮದಲ್ಲಿರೋ ಫಾರ್ಮ್ ಹೌಸ್​​ ಗೇಟ್ ಓಪನ್ ಮಾಡುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡಿದೆ.

ಬೆಂಗಳೂರು ದಕ್ಷಿಣ ‌ಜಿಲ್ಲೆ ಹಾರೋಹಳ್ಳಿ ತಾಲೂಕಿನ ಸುಣ್ಣಘಟ್ಟ ಗ್ರಾಮದ ಜಮೀನಿನಲ್ಲಿ ಈ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ವಕೀಲ ಎನ್​ಸಿ ಮೋಹನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಣ್ಣಘಟ್ಟ ಗ್ರಾಮದ ಜಮೀನಿನಲ್ಲಿ ಮೋಹನ್​ ಫಾರ್ಮ್​​ಹೌಸ್ ಕಟ್ಟಿಕೊಂಡಿದ್ರು,

ಇಂದು ಬೆಳಗ್ಗೆ ಕೂಡ ತೋಟಕ್ಕೆ ಬಂದಿದ್ದು, ಮನೆಯ ಮುಂಭಾಗದ ಗೇಟ್ ಓಪನ್ ಮಾಡುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡಿದೆ. ಗಾಯಾಳು ಮೋಹನ್ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Representational image
ಕತಾರ್ ಕಾರ್ಖಾನೆಯಲ್ಲಿ ಸ್ಫೋಟ: ಮೃತರಲ್ಲಿ 12 ಮಂದಿ ಭಾರತೀಯರು; ವಿಧ್ವಂಸಕ ಕೃತ್ಯವಲ್ಲ ಎಂದು ಇಂಧನ ಸಚಿವಾಲಯ ಸ್ಪಷ್ಟನೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com