ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ: ಪ್ರಿಯಾಂಕ್ ಖರ್ಗೆಗೆ ಮುರುಗೇಶ್ ನಿರಾಣಿ ತಿರುಗೇಟು

ಕೇಂದ್ರ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿ ಇಡಿ, ಐಟಿ ದಾಳಿ ನಡೆಸುತ್ತಿದೆ. ಮುಂದೆ ನಮ್ಮ ಮೇಲೂ ರೇಡ್ ಆಗಬಹುದು ಎಂದು ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದದ್ದಕ್ಕೆ ನಿರಾಣಿ ಪ್ರತಿಕ್ರಿಯಿಸಿದರು.
Mugesh Nirani
ಮುರುಗೇಶ್ ನಿರಾಣಿ
Updated on

ಬಾಗಲಕೋಟೆ: ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮಾಜಿ ಸಚಿವ ಮುರುಗೇಶ್‌ ನಿರಾಣಿ ತಿರುಗೇಟು ನೀಡಿದ್ದಾರೆ

ಕೇಂದ್ರ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿ ಇಡಿ, ಐಟಿ ದಾಳಿ ನಡೆಸುತ್ತಿದೆ. ಮುಂದೆ ನಮ್ಮ ಮೇಲೂ ರೇಡ್ ಆಗಬಹುದು ಎಂದು ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದದ್ದಕ್ಕೆ ನಿರಾಣಿ ಪ್ರತಿಕ್ರಿಯಿಸಿದರು.

ಇಡಿ ಯಾರ ಕೈಗೊಂಬೆಯೂ ಅಲ್ಲ, ಅದು ಸ್ವತಂತ್ರವಾಗಿ ಕೆಲಸ ಮಾಡುವ ಸಂಸ್ಥೆ. ಸಾಕಷ್ಟು ಪುರಾವೆ ಹಾಗೂ ಪ್ರೂಫ್ ಸಿಕ್ಕ ಬಳಿಕವೇ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಸೂಕ್ತ ಸಾಕ್ಷ್ಯಗಳಿಲ್ಲದೆ ಯಾರ ಮನೆಗೂ ಇಡಿ ಹೋಗುವುದಿಲ್ಲ. ಯಾಂಕ್ ಖರ್ಗೆ ಅವರು ಯಾವುದೇ ತಪ್ಪು ಮಾಡದೆ ಕ್ಲೀನ್ ಆಗಿದ್ದರೆ ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿರುವುದು ಸ್ಪಷ್ಟ. ಗೋಪ್ಯ ಮತದಾನ ಆಗಿರುವುದರಿಂದ ಯಾರು ಎಂದು ಕಂಡು ಹಿಡಿಯುವುದು ಕಷ್ಟ. 200 ಮಂದಿ ಕಳ್ಳರು ತಪ್ಪಿಸಿಕೊಂಡರೂ ಒಬ್ಬ ನಿಷ್ಠಾವಂತನಿಗೆ ಶಿಕ್ಷೆ ಆಗಬಾರದು’ ಎಂದು ಮುರುಗೇಶ ನಿರಾಣಿ ಹೇಳಿದರು.

Mugesh Nirani
RSS ಗಲಿಬಿಲಿಗೊಂಡರೆ BJP ಏಕೆ ಬುಸುಗುಡುತ್ತೆ: ಬಾಲ ಯಾರ ಕೈಯ್ಯಲ್ಲಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com