

ಬೆಂಗಳೂರು: ರಾಜ್ಯದಲ್ಲೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಮುಂದಿನ ತಿಂಗಳಿಂದ ಆರಂಭವಾಗುವ ಸಾಧ್ಯತೆ ಇದ್ದು, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಇದಕ್ಕೆ ಸಂಬಂಧಿಸಿದ ಕೆಲಸವನ್ನು ಆರಂಭಿಸಿದ್ದಾರೆ. ಒಟ್ಟು 5.57 ಕೋಟಿ ಮತದಾರರಲ್ಲಿ 4.08 ಕೋಟಿ ಜನರನ್ನು ಮ್ಯಾಪಿಂಗ್ ಮಾಡಿದ್ದು, ಇದು ಒಟ್ಟು ಮತದಾರರಲ್ಲಿ ಶೇ. 73.2% ರಷ್ಟಿದೆ.
ಸಿಇಒ ಅವರ ಮಾಹಿತಿಯ ಪ್ರಕಾರ, ತುಮಕೂರಿನಲ್ಲಿ(92.05%), ನಂತರ ಕೊಪ್ಪಳ (91.32%) ಮತ್ತು ಉಡುಪಿ (90.12%)ಯಲ್ಲಿ ಅತಿ ಹೆಚ್ಚು ಮ್ಯಾಪಿಂಗ್ ಮಾಡಲಾಗಿದೆ. ಬಿಬಿಎಂಪಿ ದಕ್ಷಿಣ ಕ್ಷೇತ್ರದಲ್ಲಿ (34.22% ಮತ್ತು ಬಿಬಿಎಂಪಿ ಕೇಂದ್ರ ಕ್ಷೇತ್ರದಲ್ಲಿ(34.79%) ಅತಿ ಕಡಿಮೆ ಮ್ಯಾಪಿಂಗ್ ಆಗಿದೆ.
“ಭಾರತೀಯ ಚುನಾವಣಾ ಆಯೋಗವು ನಮಗೆ ನಿರ್ದೇಶನ ನೀಡಿದ ತಕ್ಷಣ ನಾವು ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧರಿದ್ದೇವೆ. ಕರ್ನಾಟಕದಲ್ಲಿ ಏಪ್ರಿಲ್‌ನಿಂದ ಎಸ್ ಐಆರ್ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೆಲಸ ನಡೆಯುತ್ತಿದೆ” ಎಂದು ಚುನಾವಣಾ ಆಯೋಗದ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
ಅದೇ ಸಮಯದಲ್ಲಿ, ರಾಜ್ಯ ಚುನಾವಣಾ ಆಯೋಗ(ಎಸ್‌ಇಸಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಚುನಾವಣೆಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದೆ. "ನಾವು SIR ನಲ್ಲಿ ಭಾಗಿಯಾಗಿಲ್ಲ. GBA ಚುನಾವಣೆಗೆ ಅಂತಿಮ ಮತದಾರರ ಪಟ್ಟಿಗಾಗಿ ಏಪ್ರಿಲ್ 6 ರಿಂದ ದಿನಾಂಕವನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದೇವೆ. ಬೂತ್ ಮಟ್ಟದ ಅಧಿಕಾರಿಗಳು (BLO ಗಳು) ಮತ್ತು ಇತರ ಸಿಬ್ಬಂದಿ ಈ ಕೆಲಸದಲ್ಲಿ ನಿರತರಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.
ನಿಖರತೆಯನ್ನು ಕಾಪಾಡಿಕೊಳ್ಳಲು, ಅವರು 2025 ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
"ಮ್ಯಾಪಿಂಗ್ ಒಂದು ಟೇಬಲ್-ಟಾಪ್ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸಿಬ್ಬಂದಿಗಳು 2002ರ ಡೇಟಾವನ್ನು ಪರಿಶೀಲನೆಗೆ ಆಧಾರವಾಗಿ ಬಳಸುತ್ತಾರೆ. ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ವಿಶೇಷ ಸಾರಾಂಶ ಪರಿಷ್ಕರಣೆ(SSR) ಡೇಟಾವನ್ನು ಸಹ ಬಳಸಲಾಗುತ್ತದೆ” ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement