ರಾಜ್ಯ ಸರ್ಕಾರದಿಂದ ಹಣಕಾಸು ನಿಯಮ ಉಲ್ಲಂಘನೆ: ಸಂಸದ ಬೊಮ್ಮಾಯಿ

ಸರ್ಕಾರ ಸಾಲದ ಹೊರೆಯ ನಿಜವಾದ ಪ್ರಮಾಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ. ಅತಿಯಾದ ಖರ್ಚುಗಳು, ಅರ್ಥವಿಲ್ಲದ ವೆಚ್ಚಗಳು ಹೆಚ್ಚುತ್ತಿರುವ ಸಾಲಕ್ಕೆ ಪ್ರಮುಖ ಕಾರಣವಾಗಿದೆ.
Basavaraj Bommai
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯ್ದೆ (ಕೆಎಫ್‌ಆರ್‌ಎ) ಅಡಿಯಲ್ಲಿ ಸ್ಥಾಪಿತವಾದ ಹಣಕಾಸಿನ ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಒಟ್ಟು ಸಾಲಗಳು ಈಗ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ನಿರ್ಣಾಯಕ ಶೇ.25ರಷ್ಟು ಮಿತಿಯನ್ನು ಮೀರಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಸಾಲದ ಹೊರೆಯ ನಿಜವಾದ ಪ್ರಮಾಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ. ಅತಿಯಾದ ಖರ್ಚುಗಳು, ಅರ್ಥವಿಲ್ಲದ ವೆಚ್ಚಗಳು ಹೆಚ್ಚುತ್ತಿರುವ ಸಾಲಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಅಂದಾಜು ಪ್ರಕಾರ 8 ಲಕ್ಷ ಕೋಟಿ ರೂ. ಒಟ್ಟು ಸಾಲದಲ್ಲಿ 5 ಲಕ್ಷ ಕೋಟಿ ರೂ. ಸಿದ್ದರಾಮಯ್ಯ ಆಡಳಿತದಲ್ಲಿ ಜಮಾ ಆಗಿದ್ದು, ಭವಿಷ್ಯದ ಯಾವುದೇ ಆಡಳಿತಕ್ಕೆ ರಾಜ್ಯದ ಹಣಕಾಸು ಸರಿಹೊಂದಿಸುವುದು ದೊಡ್ಡ ಸವಾಲಾಗಬಹುದು ಎಂದು ತಿಳಿಸಿದ್ದಾರೆ.

Basavaraj Bommai
ಮಾರ್ಚ್ 6 ರಂದು ದಾಖಲೆಯ 17 ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ: ಜನರ ಮೇಲೆ ಹೊಸ ತೆರಿಗೆ ಸಾಧ್ಯತೆ- ಅಶೋಕ್ ಟೀಕೆ

ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ, ಈ ಬಾರಿಯ ಬಜೆಟ್ ಹಣಕಾಸಿನ ಕೊರತೆಯ ಮಿತಿಗಳನ್ನು ಉಲ್ಲಂಘಿಸಲಿದೆ, ಇದು GSDP ಅಂಕಿಅಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.

ಹಣಕಾಸಿನ ಕೊರತೆ ಶೇ.25ರ ಒಳಗೆ ಇರಬೇಕು. ಆದರೆ, ರಾಜ್ಯವು ಆ ಮಿತಿಯನ್ನು ದಾಟುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಇಂದು 17ನೇ ರಾಜ್ಯ ಬಜೆಟ್‌ ಮಂಡಿಸುತ್ತಿದ್ದು, ಇದರ ಬೆನ್ನಲ್ಲೇ ವಿಪಕ್ಷಗಳು ಪ್ರತಿಕ್ರಿಯೆಗಳನ್ನು ನೀಡುತ್ತಿವೆ.

ಬಜೆಟ್ ಸುಮಾರು 4 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆಗಳಿದ್ದು, ಈ ಬಾರಿಯ ಬಜೆಟ್ ಕಲ್ಯಾಣ, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರಿತವಾಗಿರಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com