ವಾಣಿಜ್ಯ LPG ಕೊರತೆ: ಪರ್ಯಾಯ ಇಂಧನಕ್ಕಾಗಿ ಕಾಲೇಜು ಹಾಸ್ಟೆಲ್'ಗಳ ಹುಡುಕಾಟ; ಕಟ್ಟಿಗೆ-ಇಂಡಕ್ಷನ್ ಸ್ಟೌವ್'ಗೆ ಹೆಚ್ಚಿದ ಬೇಡಿಕೆ

ಹಲವು ವರ್ಷಗಳ ಹಿಂದೆ ಕ್ಯಾಂಪಸ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬಳಸಿಕೊಂಡು ಅನಿಲವನ್ನು ಉತ್ಪಾದಿಸಲು ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಿದ್ದೇವೆ. ಇದೇ ಅನಿಲವನ್ನು ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಳಸಲಾಗುತ್ತದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕ್ಯಾಂಪಸ್ ಹಾಸ್ಟೆಲ್‌ಗಳು ಪರ್ಯಾಯ ಇಂಧನಗಳತ್ತ ಮುಖ ಮಾಡುತ್ತಿವೆ.

ಕೆಲ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಕಟ್ಟಿಗೆ ಬಳಸಲು ಆರಂಭಿಸಿದ್ದು, ಇನ್ನೂ ಕೆಲವು ಹಾಸ್ಟೆಲ್'ಗಳg ಬಯೋಗ್ಯಾಸ್ ಹಾಗೂ ಇಂಡಕ್ಷನ್ ಸ್ಟೌವ್ ಬಳಕೆಯನ್ನು ಪರಿಶೀಲಿಸುತ್ತಿವೆ.

ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್ ಕಾರ್ಯದರ್ಶಿ ಡಾ. ವೆಂಕಟೇಶ್ ಬೊದ್ದಪಾಟಿ ಮಾತನಾಡಿ, “ನಮ್ಮ ಹಾಸ್ಟೆಲ್‌ನಲ್ಲಿ 2,400 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ವಾಣಿಜ್ಯ ಎಲ್‌ಪಿಜಿ ಸಿಗದ ಕಾರಣ ಈಗ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿದ್ದೇವೆ. ಮೆನುದಲ್ಲಿದ್ದ ಶೇ.90ರಷ್ಟು ಆಹಾರ ಪದಾರ್ಥಗಳನ್ನು ಕಡಿತಗೊಳಿಸಿ ಅಕ್ಕಿ, ರಸಂ, ಮೊಸರು ಅನ್ನ ಮತ್ತು ಸಾಂಬಾರ್ ಮಾತ್ರ ಮಾಡುತ್ತಿದ್ದೇವೆಂದು ಹೇಳಿದ್ದಾರೆ.

ಏತನ್ಮಧ್ಯೆ, ರೇವಾ ವಿಶ್ವವಿದ್ಯಾಲಯವು ತನ್ನ ಹಾಸ್ಟೆಲ್‌ನಲ್ಲಿ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು, ಪ್ರತಿದಿನ 15,000 ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವಿರುವ ಕ್ಯಾಂಟೀನ್ ಅನ್ನು ನಡೆಸುತ್ತಿದೆ. ಇಲ್ಲಿನ ಅಧಿಕಾರಿಗಳೂ ಕೂಡ ಪರ್ಯಾಯ ಆಯ್ಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

File photo
ಅಡುಗೆ ಅನಿಲ ಅಕ್ರಮ ಸಂಗ್ರಹ, ಕಾಳಸಂತೆ ಮಾರಾಟದ ವಿರುದ್ಧ ಕಠಿಣ ಕ್ರಮ: ರಾಜ್ಯ ಸರ್ಕಾರ ಎಚ್ಚರಿಕೆ

ಪ್ರೊ. ವೈಸ್ ಚಾನ್ಸಲರ್ ಡಾ. ರಾಮಲಿಂಗ ರೆಡ್ಡಿ ಅವರು ಮಾತನಾಡಿ, “ನಮ್ಮಲ್ಲಿ ಎಲ್‌ಪಿಜಿ ಸಂಗ್ರಹ ಸಾಕಷ್ಟಿದೆ. ಆದರೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಕಟ್ಟಿಗೆ ಹಾಗೂ ಇಂಡಕ್ಷನ್ ಸ್ಟೌವ್ ಸೇರಿದಂತೆ ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆಂದು ಹೇಳಿದ್ದಾರೆ.

ಸೇಂಟ್ ಜೋಸೆಫ್ ಕಾಲೇಜು ಹಾಸ್ಟೆಲ್ ಉಸ್ತುವಾರಿ ರೆವರೆಂಡ್ ಫಾದರ್ ಅರವಿಂದ್ ಅವರು ಮಾತನಾಡಿ, ನಾವು ಹಲವು ವರ್ಷಗಳ ಹಿಂದೆ ಕ್ಯಾಂಪಸ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬಳಸಿಕೊಂಡು ಅನಿಲವನ್ನು ಉತ್ಪಾದಿಸಲು ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಿದ್ದೇವೆ. ಇದೇ ಅನಿಲವನ್ನು ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಳಸಲಾಗುತ್ತದೆ. ಎಲ್‌ಪಿಜಿ ಸರಬರಾಜು ಸಿಗುವವರೆಗೆ ಇಡ್ಲಿ, ದೋಸೆ ಮುಂತಾದ ಹೆಚ್ಚು ಗ್ಯಾಸ್ ಬಳಕೆಯಾಗುವ ಆಹಾರ ಪದಾರ್ಥಗಳನ್ನು ನಿಲ್ಲಿಸಿ ಅಕ್ಕಿ ಆಧಾರಿತ ಆಹಾರಕ್ಕೆ ಒತ್ತು ನೀಡಿದ್ದೇವೆಂದು ತಿಳಿಸಿದ್ದಾರೆ.

ಏತನ್ಮಧ್ಯೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ನೂಡಲ್ಸ್ ಅಥವಾ ಸೂಪ್ ತಯಾರಿಸಿಕೊಳ್ಳಲು ಇಂಡಕ್ಷನ್ ಸ್ಟೌವ್‌ಗಳನ್ನು ಖರೀದಿಸುವಂತೆ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೂಚನೆ ನೀಡಿದ್ದು, ಪ್ರತಿ ಮಹಡಿಯಲ್ಲಿ ವಿದ್ಯುತ್ ಸ್ಟೌವ್ ವ್ಯವಸ್ಥೆ ಮಾಡುವ ಯೋಜನೆ ರೂಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com