664 ಉದ್ಯೋಗ ಆಫರ್‌ಗಳೊಂದಿಗೆ ದಾಖಲೆಯ ಪ್ಲೇಸ್ ಮೆಂಟ್: IIMBಯ ಸಾಧನೆ

2024–26ರ ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ (PGPV) ಮತ್ತು ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ ಬಿಸಿನೆಸ್ ಅನಾಲಿಟಿಕ್ಸ್ (PGPBA) ವಿದ್ಯಾರ್ಥಿಗಳಲ್ಲಿ, 45 ಶೇಕಡಾ ಆಫರ್‌ಗಳು ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕ್ಷೇತ್ರಕ್ಕೆ ಹೋಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (IIMB) ಈ ಶೈಕ್ಷಣಿಕ ವರ್ಷದಲ್ಲಿ ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ ದಾಖಲೆ ಮಾಡಿದೆ. ವಿವಿಧ ವಿಭಾಗಗಳಡಿಯಲ್ಲಿ 596 ವಿದ್ಯಾರ್ಥಿಗಳು 177 ಸಂಸ್ಥೆಗಳಿಂದ ಒಟ್ಟು 664 ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ.

2024–26ರ ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ (PGPV) ಮತ್ತು ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ ಬಿಸಿನೆಸ್ ಅನಾಲಿಟಿಕ್ಸ್ (PGPBA) ವಿದ್ಯಾರ್ಥಿಗಳಲ್ಲಿ, 45 ಶೇಕಡಾ ಆಫರ್‌ಗಳು ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕ್ಷೇತ್ರಕ್ಕೆ ಹೋಗಿದ್ದು, ನಂತರ 15 ಶೇಕಡಾ ಟೆಕ್/ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಮತ್ತು 11 ಶೇಕಡಾ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸೇರಿವೆ.

ಐಐಎಂಬಿಯ ಕರಿಯರ್ ಡೆವಲಪ್‌ಮೆಂಟ್ ಸರ್ವಿಸಸ್ (CDS) ಅಧ್ಯಕ್ಷ ಹಾಗೂ ಪ್ರೊಡಕ್ಷನ್ ಮತ್ತು ಆಪರೇಷನ್ಸ್ ಮ್ಯಾನೇಜ್ಮೆಂಟ್ ವಿಭಾಗದ ಪ್ರಾಧ್ಯಾಪಕ ನಿಶಾಂತ್ ಕುಮಾರ್ ವರ್ಮಾ, ಆಫರ್‌ಗಳ ಸಂಖ್ಯೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಾದ ಹುದ್ದೆಗಳ ವೈವಿಧ್ಯ ಎರಡರಲ್ಲಿಯೂ ಈ ಪ್ರಕ್ರಿಯೆ ನಮ್ಮ ನಿರೀಕ್ಷೆಗಳನ್ನು ಮೀರಿ ಸಾಧಿಸಿದೆ.

Representational image
ಬೆಂಗಳೂರು: ಐಐಎಂಬಿ ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಸಿಡಿಎಸ್ ಮುಖ್ಯಸ್ಥರಾದ ತಪಸ್ ರಂಜನ್ ಪತಿ, ಎಫ್ ಎಂಸಿಜಿ, ರಿಟೇಲ್, ಇ-ಕಾಮರ್ಸ್, ಕಾಂಗ್ಲೊಮರೇಟ್, ಫಿನ್‌ಟೆಕ್, ಆರೋಗ್ಯ ಸೇವೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಾವಕಾಶ ನೀಡಲಾಗಿದೆ. ವಿಶೇಷವಾಗಿ ಅಕ್ಸೆಂಚರ್ ಸ್ಟ್ರಾಟೆಜಿ ಈ ವರ್ಷ ದಾಖಲೆಯಷ್ಟು ಉದ್ಯೋಗದ ಆಫರ್ ನೀಡಿದೆ ಎಂದು ಹೇಳಿದರು.

ಈ ವರ್ಷ ಹೆಚ್ಚು ಆಫರ್‌ಗಳನ್ನು ನೀಡಿದ ಪ್ರಮುಖ ಕಂಪನಿಗಳು: ಅಕ್ಸೆಂಚರ್ (101), ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (29), ಬೇನ್ & ಕಂಪನಿ (23), EY-ಪಾರ್ಥೆನಾನ್ (23), ಅಮೆರಿಕನ್ ಎಕ್ಸ್‌ಪ್ರೆಸ್ (15), ಕಿಯರ್ನಿ (13), ಮತ್ತು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (11)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com