ಆಫ್ರಿಕಾ, ದುಬೈವರೆಗೂ ಹಬ್ಬಿತ್ತು ನಟಿ 'ರನ್ಯಾ ರಾವ್' ಗೋಲ್ಡ್ ಸ್ಮಗ್ಲಿಂಗ್ ನೆಟ್ ವರ್ಕ್!

ಕಳ್ಳ ಸಾಗಣೆ ಕಾರ್ಯಾಚರಣೆಯು ಆಫ್ರಿಕಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವ ಸಂಘಟಿತ ಅಂತಾರಾಷ್ಟ್ರೀಯ ಜಾಲದ ಭಾಗವಾಗಿತ್ತು ಎಂದು ಕೇಂದ್ರಿಯ ತನಿಖಾ ಸಂಸ್ಥೆಯ ತನಿಖೆ ವೇಳೆ ತಿಳಿದುಬಂದಿದೆ.
Kannada actor Ranya Rao
ನಟಿ 'ರನ್ಯಾ ರಾವ್'
Updated on

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ, ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್, ಚಿನ್ನ ಕಳ್ಳಸಾಗಣೆ ಬಗ್ಗೆ ಬಗೆದಷ್ಟು ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿವೆ.

ಆಕೆ ಆಫ್ರಿಕಾ, ದುಬೈನಿಂದ ಹಿಡಿದು ಭಾರತದಲ್ಲಿ 102 ಕೋಟಿ ರೂಪಾಯಿಗಳ ಚಿನ್ನ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದರು. ಇದು ಆಫ್ರಿಕಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವ ಸಂಘಟಿತ ಅಂತಾರಾಷ್ಟ್ರೀಯ ಜಾಲದ ಭಾಗವಾಗಿತ್ತು ಎಂದುಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನಟಿಯ ಸಹಚರ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ತರುಣ್ ಕೊಂಡೂರು ಹೆಸರನ್ನು ಇಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ರನ್ಯಾ ರಾವ್ ಮತ್ತು ಅವರ ಸಹಚರರು ಮಾರ್ಚ್ 2024 ಮತ್ತು ಮಾರ್ಚ್ 2025 ರ ನಡುವೆ 102.55 ಕೋಟಿ ರೂ. ಮೌಲ್ಯದ 127.28 ಕೆಜಿ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳ್ಳಸಾಗಣೆ ಮಾಡಿದ ಚಿನ್ನವನ್ನು ನಂತರ ಮಧ್ಯವರ್ತಿಗಳು ಮತ್ತು ಆಭರಣ ವ್ಯಾಪಾರಿಗಳ ಜಾಲದ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು. ರನ್ಯಾ ರಾವ್ ದುಬೈ ಮೂಲದ ವೀರ ಡೈಮಂಡ್ಸ್ ಟ್ರೇಡಿಂಗ್ ಎಲ್‌ಎಲ್‌ಸಿಯನ್ನು 2023 ರಲ್ಲಿ ಸ್ಥಾಪಿಸಿದ್ದರು ಮತ್ತು ಉಗಾಂಡಾ, ಕೀನ್ಯಾ ಮತ್ತು ತಾಂಜಾನಿಯಾ ಸೇರಿದಂತೆ ಆಫ್ರಿಕಾದ ರಾಷ್ಟ್ರಗಳ ಪೂರೈಕೆದಾರರಿಂದ ನೇರವಾಗಿ ಚಿನ್ನವನ್ನು ಪಡೆಯಲು ಪ್ರಯತ್ನಿಸಿದ್ದರು.

ಆದರೆ ಒಮ್ಮೆ, ಭರವಸೆಯಂತೆ ಚಿನ್ನವನ್ನು ತಲುಪಿಸದ ಉಗಾಂಡಾ ಏಜೆಂಟ್‌ನಿಂದ ನಟಿಗೆ 2 ಕೋಟಿ ರೂ. ವಂಚನೆಯಾಗಿತ್ತು. ನಂತರ ಅವರು ದುಬೈಗೆ ನೆಲೆಯನ್ನು ಬದಲಾಯಿಸಿದ್ದರು ಎಂದು ಸಂಸ್ಥೆ ತಿಳಿಸಿದೆ.

ತದನಂತರ ಆರೋಪಿ ದುಬೈನ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾದ ಡೇರಾ ಗೋಲ್ಡ್ ಸೌಕ್‌ನಲ್ಲಿ ಆಫ್ರಿಕನ್ ವಿತರಕರಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿದರು. ದುಬೈನ ಮಾರುಕಟ್ಟೆಯಲ್ಲಿ ಹೆಚ್ಚಿನ ಚಿನ್ನಲಪ ಆಫ್ರಿಕನ್ ಗಣಿಗಳಿಂದ ಉತ್ಪಾದನೆಯಾದ ಚಿನ್ನವಾಗಿರುತ್ತದೆ. ರಾವ್ ಚಿನ್ನ ಸಂಗ್ರಹಿಸಲು ಮಾರುಕಟ್ಟೆಗೆ ದೊಡ್ಡ ಮೊತ್ತದ ಹಣ ಸಾಗಿಸಿದರೆ, ಕೊಂಡೂರು ಚಿನ್ನವನ್ನು ದುಬೈನಿಂದ ಸ್ವಿಟ್ಜರ್ಲೆಂಡ್ ಅಥವಾ ಥೈಲ್ಯಾಂಡ್‌ನಂತಹ ಮೂರನೇ ದೇಶಕ್ಕೆ ಸಾಗಿಸಲಾಗುತ್ತಿದೆ ಎಂದು ವಂಚನೆಯ ಕಸ್ಟಮ್ಸ್ ಪ್ರಮಾಣ ಪತ್ರ ಸಲ್ಲಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Kannada actor Ranya Rao
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್: ಮತ್ತಷ್ಟು ಸ್ಫೋಟಕ ಸತ್ಯ ಬಯಲು, ರೂ. 40 ಕೋಟಿಗೂ ಅಧಿಕ ಮೊತ್ತದ ವ್ಯವಹಾರ!

ರಾವ್ ಅವರನ್ನು ಮಾರ್ಚ್ 2025 ರಲ್ಲಿ ದುಬೈನಿಂದ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಆಕೆಯ ಬಂಧನದ ನಂತರ ಆಕೆಯ ದೇಹದಲ್ಲಿ ಬಚ್ಚಿಟ್ಟಿದ್ದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com