ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ: 3,427 ಕೋಟಿ ರೂ ವೆಚ್ಚದ ಚೊಚ್ಚಲ ಬಜೆಟ್ ಮಂಡನೆ!

2026-27 ರ ಹಣಕಾಸು ವರ್ಷಕ್ಕೆ ಕೇಂದ್ರ ಮಹಾನಗರ ಪಾಲಿಕೆ ಆಯುಕ್ತ ಪಿ. ರಾಜೇಂದ್ರ ಚೋಳನ್ ಬಜೆಟ್ ಮಂಡಿಸಿದರು.
GBA Chief Commissioner Maheswara Rao
ಬಜೆಟ್ ಪ್ರತಿಗಳೊಂದಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್
Updated on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬರುವ ಐದು ಹೊಸ ಪಾಲಿಕೆಗಳಲ್ಲಿ ಒಂದಾಗಿರುವ ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡನೆಯಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ₹3,427 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವುದು ಮತ್ತು ಸಾರ್ವಜನಿಕ ಆರೋಗ್ಯದ ಬಲವರ್ಧನೆಗೆ ಒತ್ತು ನೀಡಿದೆ.

ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ ರಚನೆಯಾದ ನಂತರ ಮಂಡಿಸಿದ ಮೊದಲ ಬಜೆಟ್ ಇದಾಗಿದೆ. ಸೆಪ್ಟೆಂಬರ್ 2025 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬದಲಿಗೆ ಬೃಹತ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬೆಂಗಳೂರನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂದು ಐದು ಮಹಾನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ.

2026-27 ರ ಹಣಕಾಸು ವರ್ಷಕ್ಕೆ ಕೇಂದ್ರ ಮಹಾನಗರ ಪಾಲಿಕೆ ಆಯುಕ್ತ ಪಿ. ರಾಜೇಂದ್ರ ಚೋಳನ್ ಬಜೆಟ್ ಮಂಡಿಸಿದರು. ಬಜೆಟ್ ಅನ್ನು ನಿಜವಾಗಿಯೂ ನಾಗರಿಕ ಮತ್ತು ಮಾನವ-ಕೇಂದ್ರಿತ" ಎಂದು ಕರೆದಿದ್ದು, ಗೋಲ್ಡನ್ ಅವರ್ ನಲ್ಲಿ ಉಚಿತ ಜೀವ ರಕ್ಷಣೆಗಾಗಿ ಮೊದಲ ಪ್ರತಿಕ್ರಿಯೆ ಘಟಕ ಯೋಜನೆಯಡಿ ಬೈಕ್ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸುವುದಾಗಿ ಹೇಳಿದೆ. ಬಡವರ ಮನೆ ಬಾಗಿಲಿಗೆ ಕಾರ್ಪೊರೇಟ್ ಮಾದರಿಯ ವೈದ್ಯಕೀಯ ಸೇವೆಗಳನ್ನು ತಲುಪಿಸಲು 19 ಕೋಟಿ ರೂ. ವೆಚ್ಚದಲ್ಲಿ 22 ಹೈಟೆಕ್ 'ಸ್ಮಾರ್ಟ್ ವರ್ಚುವಲ್ ಕ್ಲಿನಿಕ್'ಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

ಹಿರಿಯರ ವಾಡಿ' ಆರಂಭ: ಅಲ್ಲದೇ, ವಿಶೇಷ ಚೇತನ ಮಕ್ಕಳ ಡೇ-ಕೇರ್ ಸೆಂಟರ್ 'ವಾತ್ಸಲ್ಯ ಮನೆ' ಮತ್ತು ಆರೈಕೆದಾರರಿಲ್ಲದ ವೃದ್ಧರಿಗೆ ವಸತಿ ಕಲ್ಪಿಸುವ 'ಹಿರಿಯರ ವಾಡಿ' ಪ್ರಾರಂಭಿಸಲು ಬಜೆಟ್ ಪ್ರಸ್ತಾಪಿಸಿದೆ.

ಅಂದಾಜು 3,427 ಕೋಟಿ ಆದಾಯ ಮತ್ತು 3,425 ಕೋಟಿ ರೂ.ವೆಚ್ಚದ ಬಜೆಟ್ ಆಗಿದ್ದು, 1.38 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಆರೋಗ್ಯವಂತ ಬೆಂಗಳೂರು ಯೋಜನೆಯಡಿ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 40 ಕೋಟಿ ರೂ. ಮೀಸಲಿರಿಸಲಾಗಿದೆ. ಶತಮಾನದಷ್ಟು ಹಳೆಯದಾದ ರಸೆಲ್ ಮಾರುಕಟ್ಟೆಯ ಪುನಶ್ಚೇತನಕ್ಕೆ 70 ಕೋಟಿ ರೂ. ಇತರೆ ಮಾರುಕಟ್ಟೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 20 ಕೋಟಿ ರೂ. ಮೀಸಲಿರಿಸಲಾಗಿದೆ.

ಎಲ್‌ಇಡಿ ಲೈಟ್‌ಗಳ ಬಳಕೆಯ ಮೂಲಕ ವಿದ್ಯುತ್ ಬಿಲ್‌ಗಳಲ್ಲಿ ಶೇ. 60 ರಷ್ಟು ಕಡಿತವನ್ನು ಯೋಜಿಸಿದೆ. ಕೇಂದ್ರ ಬೆಂಗಳೂರನ್ನು ಸುರಕ್ಷಿತ, ಹೆಚ್ಚು ಸುಸ್ಥಿರ ನಗರವಾಗಿ ಪರಿವರ್ತಿಸಲು ನೀಲಿ-ಹಸಿರು ಕಾರಿಡಾರ್‌ಗಳ ರಚನೆಯನ್ನು ಪ್ರಸ್ತಾಪಿಸಿದೆ. ಜಾಗತಿಕ ಮಟ್ಟದ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳ ವಿನ್ಯಾಸಕ್ಕಾಗಿ ಅರ್ಬನ್ ಡಿಸೈನ್ ಸೆಲ್ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿಬೀದಿ ಆಹಾರ ಮಾರಾಟಗಾರರಿಗೆ ಆಹಾರ ಸುರಕ್ಷತೆಯಲ್ಲಿ ತರಬೇತಿ ನೀಡಲು ಮತ್ತು ಪ್ರಮಾಣೀಕರಿಸಲು 25 ಲಕ್ಷ ರೂ. ಬಜೆಟ್‌ನೊಂದಿಗೆ ಶುದ್ಧ ಆಹಾರದ ಕಿರುಮಳಿಗೆ ಪ್ರಾಯೋಗಿಕ ಯೋಜನೆಯನ್ನು ಘೋಷಿಸಲಾಗಿದೆ.

ಪಾಲಿಕೆಯು 2025–26ರಲ್ಲಿ 900 ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಿದ್ದು, 2026–27ರಲ್ಲಿ 1,150 ಕೋಟಿ ರೂ. ಆದಾಯದ ಗುರಿಯನ್ನು ಹೊಂದಿದೆ. ತನ್ನ 438 ಆಸ್ತಿಗಳಿಂದ 58 ಕೋಟಿ ರೂ. ಬಾಡಿಗೆ ಆದಾಯವನ್ನು ನಿರೀಕ್ಷಿಸುತ್ತದೆ. ಇದಲ್ಲದೆ, 112 ಮಾರುಕಟ್ಟೆಗಳಾದ್ಯಂತ 4,772 ಅಂಗಡಿಗಳಿಂದ 25 ಕೋಟಿ ರೂ. ಬಾಡಿಗೆ ಆದಾಯವನ್ನು ನಿರೀಕ್ಷಿಸಲಾಗಿದೆ.

ಲೋಕೋಪಯೋಗಿ ಕಾಮಗಾರಿಗೆ 1,760 ಕೋಟಿ ಮೀಸಲಿಟ್ಟಿದ್ದು, 217.50 ಕೋಟಿ ವೆಚ್ಚದಲ್ಲಿ 145 ಕಿ.ಮೀ ಉದ್ದದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. 200 ಕೋಟಿ ವೆಚ್ಚದಲ್ಲಿ 115 ಕಿ.ಮೀ ವಾರ್ಡ್ ರಸ್ತೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದ್ದು, ಅವುಗಳನ್ನು "ಗುಂಡಿ ಮುಕ್ತ" ಮಾಡುವತ್ತ ಗಮನ ಹರಿಸಲಿದೆ. ಇದಲ್ಲದೆ ಪ್ರತಿ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ 141.75 ಕೋಟಿ ರೂ., ಪ್ರತಿ ವಾರ್ಡ್‌ಗೆ 2.25 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

10 ಹೊಸ ಸಮುದಾಯ ಭವನಗಳ ನಿರ್ಮಾಣ, ವಿಶ್ವಬ್ಯಾಂಕ್ ನೆರವಿನೊಂದಿಗೆ ಮಳೆನೀರು ಚರಂಡಿಗಳ ಮೇಲ್ದರ್ಜೆಗೇರಿಸುವುದು, 15 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ರಸ್ತೆಗಳ ವಿದ್ಯುದೀಕರಣ, ಮತ್ತು ಫ್ಲೈಓವರ್‌ಗಳ ಅಡಿಯಲ್ಲಿರುವ ಜಾಗಗಳನ್ನು ಮೈಕ್ರೋ ಪಾರ್ಕ್‌ಗಳು ಮತ್ತು ಕಲಾತ್ಮಕ ಕೇಂದ್ರಗಳಾಗಿ ಪರಿವರ್ತಿಸುವುದು ಇತರ ಕೆಲಸಗಳಾಗಿವೆ. 35.70 ಕೋಟಿ ರೂ. ವೆಚ್ಚದಲ್ಲಿ 500 ವೈಯಕ್ತಿಕ ಮನೆಗಳ ನಿರ್ಮಾಣವನ್ನೂ ಕೈಗೆತ್ತಿಕೊಳ್ಳಲಿದೆ. ಬಜೆಟ್‌ನಲ್ಲಿ ಘನತ್ಯಾಜ್ಯ ನಿರ್ವಹಣೆಗೆ 215 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, 60 ಹೊಸ ಸಾರ್ವಜನಿಕ ಶೌಚಾಲಯಗಳು ಮತ್ತು ಮಹಿಳೆಯರಿಗಾಗಿ 20 ಶೀ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗುವುದು ಎಂದು ಬಜೆಟ್ ನಲ್ಲಿ ಹೇಳಲಾಗಿದೆ.

GBA Chief Commissioner Maheswara Rao
ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ ಶಿವಕುಮಾರ್

ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ವಾರ್ಡ್‌ನಲ್ಲಿ ಸುಸಜ್ಜಿತ ಮಸ್ಟರಿಂಗ್ ಕೇಂದ್ರಗಳು ಮತ್ತು ವಿಶ್ರಾಂತಿ ಸೌಲಭ್ಯಗಳೊಂದಿಗೆ ಸುವಿಧಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 2 ಕೋಟಿ ವೆಚ್ಚದಲ್ಲಿ ಬೀದಿ ನಾಯಿಗಳಿಗೆ ವೈಜ್ಞಾನಿಕ ಆಶ್ರಯ ಮತ್ತು ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಾಕುಪ್ರಾಣಿಗಳಿಗೆ ಉಚಿತ ಚಿಕಿತ್ಸೆ, ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗಳು ಮತ್ತು ಲಸಿಕೆ ಅಭಿಯಾನಗಳನ್ನು ಸಹ ನಡೆಸಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ. ಬಜೆಟ್‌ನಲ್ಲಿ 215ಕ್ಕೂ ಹೆಚ್ಚು ಉದ್ಯಾನವನಗಳ ಸಮಗ್ರ ಅಭಿವೃದ್ಧಿಗೆ 15 ಕೋಟಿ ರೂ. ಪುಟಾಣಿ ಪಾರ್ಕ್ (ಮಕ್ಕಳ ಉದ್ಯಾನ) ನಿರ್ಮಿಸಲಾಗುವುದು, ಮರಗಳ ಆರೈಕೆ ಮತ್ತು ನಿರ್ವಹಣೆಗೆ 19.38 ಕೋಟಿ ರೂ. ಮೀಸಲಿಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com