OBC ಕ್ರೀಮಿ ಲೇಯರ್ ಆದಾಯ ಮಿತಿ 12.75 ಲಕ್ಷ ರೂಪಾಯಿಗೆ ಹೆಚ್ಚಳ ಪರಿಶೀಲನೆಯಲ್ಲಿ: ಸಚಿವ ಶಿವರಾಜ್ ಎಸ್. ತಂಗಡಗಿ

ವಿಧಾನಸಭೆಯ ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಶಿವಮೊಗ್ಗ ಶಾಸಕ ಎಸ್.ಎನ್. ಚೆನ್ನಬಸಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ, ಈ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
Shivaraj S Thangadagi
ಶಿವರಾಜ್ ಎಸ್ ತಂಗಡಗಿ
Updated on

ಶಿವಮೊಗ್ಗ: ರಾಜ್ಯ ಸರ್ಕಾರವು ಇತರ ಹಿಂದುಳಿದ ವರ್ಗಗಳ (OBC) ಉನ್ನತ ಆದಾಯ ಜನರ(creamy layer) ವಾರ್ಷಿಕ ಆದಾಯ ಮಿತಿಯನ್ನು 8 ಲಕ್ಷ ರೂಪಾಯಿಗಳಿಂದ ಸುಮಾರು 12.75 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ವಿಧಾನಸಭೆಯ ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಶಿವಮೊಗ್ಗ ಶಾಸಕ ಎಸ್.ಎನ್. ಚೆನ್ನಬಸಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ, ಈ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು. ಆದರೆ, ಈ ಕುರಿತು ಆದೇಶ ಹೊರಡಿಸುವ ಸಮಯವನ್ನು ಅವರು ಸ್ಪಷ್ಟಪಡಿಸಲಿಲ್ಲ.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯಗಳ ಅರ್ಹತೆಯನ್ನು ನಿರ್ಧರಿಸುವ ಆದಾಯ ಮಿತಿ 2018ರ ಸೆಪ್ಟೆಂಬರ್ 14ರಿಂದ 8 ಲಕ್ಷ ರೂಪಾಯಿಯಾಗಿಯೇ ಉಳಿದಿದೆ. ಸಂವಿಧಾನದ ವಿಧಿ 342A ಅಡಿಯಲ್ಲಿ ಕರ್ನಾಟಕವು ತನ್ನದೇ ಮೀಸಲಾತಿ ನೀತಿಯನ್ನು ರೂಪಿಸಿಕೊಳ್ಳುತ್ತದೆ ಎಂದು ಸಚಿವರು ಹೇಳಿದರು. 2002ರಲ್ಲಿ ಹೊರಡಿಸಿದ ಸರ್ಕಾರದ ಆದೇಶದ ಮೂಲಕ ಕ್ರೀಮಿ ಲೇಯರ್ ನಿಯಮಗಳನ್ನು ಜಾರಿಗೆ ತರಲಾಗಿದೆ.

Shivaraj S Thangadagi
ಕರ್ನಾಟಕ ಸರ್ಕಾರಿ ಉದ್ಯೋಗಗಳಲ್ಲಿ SC/ST ಪ್ರಾತಿನಿಧ್ಯವೇ ಹೆಚ್ಚು: ಭುಗಿಲೆದ್ದ ವಿವಾದ, ಅಸಮಾಧಾನ

ಈ ಮಿತಿಯನ್ನು ಹಿಂದೆ ಕಾಲಕಾಲಕ್ಕೆ ಪರಿಷ್ಕರಿಸಲಾಗಿತ್ತು—2013ರಲ್ಲಿ 3.5 ಲಕ್ಷ ರೂಪಾಯಿಗಳಿಂದ 4.5 ಲಕ್ಷ ರೂಪಾಯಿಗಳಿಗೆ 2015ರಲ್ಲಿ 6 ಲಕ್ಷ ರೂಪಾಯಿಗಳಿಗೆ ಮತ್ತು 2018ರಲ್ಲಿ 8 ಲಕ್ಷ ರೂಪಾಯಿಗಳಿಗೆ ಏರಿಸಲಾಗಿತ್ತು. ಆದರೆ ಕಳೆದ ಎಂಟು ವರ್ಷಗಳಿಂದ ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಗಮನಕ್ಕೆ ತಂದರು.

ಸ್ಥಿರವಾಗಿರುವ ಆದಾಯ ಮಿತಿಯಿಂದ ಅರ್ಹ ಅಭ್ಯರ್ಥಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳಿಂದ ಹೊರಗುಳಿಯುತ್ತಿದ್ದಾರೆ ಎಂಬ ಆತಂಕಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಇವು ಆಧಾರರಹಿತವೆಂದು ಹೇಳಿದರು. ಕ್ರೀಮಿ ಲೇಯರ್ ನೀತಿ ಹಲವು ಮಾನದಂಡಗಳ ಮೇಲೆ ಆಧಾರಿತವಾಗಿದ್ದು, ಆದಾಯವು ಅವುಗಳಲ್ಲಿ ಒಂದು ಭಾಗ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳು ತಾಂತ್ರಿಕ ಕೋರ್ಸ್‌ಗಳನ್ನು ಒಳಗೊಂಡಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಹಾಗೂ ಸರ್ಕಾರಿ ಉದ್ಯೋಗದಲ್ಲಿಯೂ ಪ್ರಸ್ತುತ ವ್ಯವಸ್ಥೆಯಡಿ ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಸಚಿವರು ಹೇಳಿದರು.

ತಾಂತ್ರಿಕ ಶಿಕ್ಷಣದಲ್ಲಿ ಹೆಚ್ಚಿನ ಸೀಟುಗಳು ಖಾಲಿಯಾಗಿರುವುದಕ್ಕೆ ಆದಾಯ ಮಿತಿ ಕಾರಣ ಎಂಬ ವಾದವನ್ನು ಸರ್ಕಾರ ತಳ್ಳಿ ಹಾಕಿದ್ದು, ಪ್ರವೇಶ ಮತ್ತು ಮೀಸಲಾತಿ ಪ್ರಕ್ರಿಯೆಗಳು ನೀತಿ ಪ್ರಕಾರವೇ ನಡೆಯುತ್ತಿವೆ ಎಂದು ತಿಳಿಸಿದೆ. ಉದ್ಯೋಗದ ವಿಷಯದಲ್ಲಿ, ನಿಗದಿತ ಆದಾಯ ಮಿತಿಯೊಳಗಿನ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರ ಪಡೆದು ನೇಮಕಾತಿಯಲ್ಲಿ ಮೀಸಲಾತಿ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com