IPL ಟಿಕೆಟ್ ವಿವಾದ: ಎರೆಡರಡು VIP ಪಾಸ್ ಪಡೆದರೂ ಮೈದಾನಕ್ಕೆ ಬಾರದ ಶಾಸಕರು, ಟೀಕೆ ಶುರು

ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯಕ್ಕೆ ಒಟ್ಟು 224 ಶಾಸಕರ ಪೈಕಿ ಕೇವಲ 3 ರಿಂದ 4 ಶಾಸಕರು ಮಾತ್ರ ಹಾಜರಾಗಿರುವುದು ಕಂಡು ಬಂದಿತ್ತು.
An aerial view of floodlit in Bengaluru Chinnaswamy Stadium
ಚಿನ್ನಸ್ವಾಮಿ ಸ್ಟೇಡಿಯಂ
Updated on

ಬೆಂಗಳೂರು: ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್ ವಿಚಾರ ಪ್ರಸ್ತಾಪಿಸಿ ತೀವ್ರ ಟೀಕೆಗೆ ಗುರಿಯಾಗಿ, ಕೊನೆಗೆ ಎರೆಡರಡು ವಿಐಪಿ ಪಾಸ್ ಪಡೆದುಕೊಂಡಿದ್ದರೂ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಹಲವು ಶಾಸಕರು ಗೈರು ಹಾಜರಾಗಿರುವುದು ಕಂಡು ಬಂದಿತ್ತು. ಇದು ಸಾರ್ವಜನಿಕ ವಲಯದಲ್ಲಿ ಟೀಕೆಗಳಿಗೆ ಕಾರಣವಾಗಿದೆ.

ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯಕ್ಕೆ ಒಟ್ಟು 224 ಶಾಸಕರ ಪೈಕಿ ಕೇವಲ 3 ರಿಂದ 4 ಶಾಸಕರು ಮಾತ್ರ ಹಾಜರಾಗಿರುವುದು ಕಂಡು ಬಂದಿತ್ತು.

ಮೈಸೂರಿನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂದ್ಯ ವೀಕ್ಷಿಸಲು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು, "ಹೋಗಲು ಬಯಸುವವರು ಹೋಗುತ್ತಾರೆ, ಹೋಗದವರು ಹೋಗುವುದಿಲ್ಲ" ಎಂದು ತಿಳಿಸಿದ್ದರು.

ಈ ನಡುವೆ ಶಾಸಕರ ಟಿಕೆಟ್ ಬೇಡಿಕೆಯನ್ನು ಬೆಂಬಲಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಅದು ಅವರ ಹಕ್ಕು ಮತ್ತು ಸವಲತ್ತು ಎಂದು ಹೇಳಿದ್ದರು.

An aerial view of floodlit in Bengaluru Chinnaswamy Stadium
'ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿ, ನನಗೆ ಐಪಿಎಲ್ ಪಾಸ್ ಬೇಡ': ಶಾಸಕ ಸುರೇಶ್ ಕುಮಾರ್

ಇದೇ ವೇಳೆ ತಾವು ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿರುವ ಅಸ್ಸಾಂನಲ್ಲಿ ಪ್ರಚಾರದಲ್ಲಿ ನಿರತರಾಗಿವುದಾಗಿ ತಿಳಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಕ್ರೀಡೆಯಲ್ಲಿನ ಆಸಕ್ತಿಯೇ ಶಾಸಕರ ವಿಐಪಿ ಟಿಕೆಟ್ ಬೇಡಿಕೆಗೆ ಕಾರಣ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸುವ ಮೊದಲು 'ಅಡೆತಡೆಗಳನ್ನು' ನಿವಾರಿಸಲು ಕೆಎಸ್‌ಸಿಎ ನಡೆಸಿದ 'ಗಣಹೋಮ'ದಲ್ಲಿ ಆಪ್ತ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಭಾಗವಹಿಸಿದ್ದರು. ನಂತರ ಪಂದ್ಯವನ್ನೂ ವೀಕ್ಷಣೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com