ಕೊನೆಗೂ ಪೆರಿಫೆರಲ್ ರಿಂಗ್ ರೋಡ್ ಗೆ ಟೆಂಡರ್ ಕರೆದ BDA; ಮೋಹನ್‌ದಾಸ್ ಪೈ ಹೇಳಿದ್ದೇನು?

ಸುಮಾರು 20 ಕಿ.ಮೀ. ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಮೊದಲ ಪ್ಯಾಕೇಜ್‌ಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, ಇದನ್ನು 36 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಡೆಡ್ ಲೈನ್ ನೀಡಲಾಗಿದೆ.
BDA Invites Tender for 20km Peripheral Ring Road at Rs 3,348, Aims Completion in 36 months
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸೋಮವಾರ 3,348 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಹುನಿರೀಕ್ಷಿತ ಬೆಂಗಳೂರು ಬಿಸಿನೆಸ್ ಕಾರಿಡಾರ್(ಪೆರಿಫೆರಲ್ ರಿಂಗ್ ರೋಡ್)ಗೆ ಟೆಂಡರ್ ಆಹ್ವಾನಿಸಿದೆ.

ಸುಮಾರು 20 ಕಿ.ಮೀ. ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಮೊದಲ ಪ್ಯಾಕೇಜ್‌ಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, ಇದನ್ನು 36 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಡೆಡ್ ಲೈನ್ ನೀಡಲಾಗಿದೆ. ಇದರೊಂದಿಗೆ, ಸುಮಾರು ಎರಡು ದಶಕಗಳಿಂದ ವಿಳಂಬವಾಗಿದ್ದ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಕೊನೆಗೂ ಚಾಲನೆ ನೀಡಲಾಗಿದೆ.

ಬಿಡಿಎ ಆಹ್ವಾನಿಸಿದ ಇಪಿಸಿ(ಎಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ನಿರ್ಮಾಣ) ಟೆಂಡರ್‌ನಲ್ಲಿ, ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗಿನ ಒಟ್ಟು 19.80 ಕಿ.ಮೀ. ದೂರದಲ್ಲಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್(ಪೆರಿಫೆರಲ್ ರಿಂಗ್ ರಸ್ತೆ-1) ಪ್ಯಾಕೇಜ್-1 ನಿರ್ಮಾಣಕ್ಕೆ 36 ತಿಂಗಳುಗಳ ಅವಧಿ ನೀಡಲಾಗಿದೆ. ಟೆಂಡರ್ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ(ಡಿಬಿಒಟಿ) ವಿಧಾನದಲ್ಲಿ 10 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ) ಒಳಗೊಂಡಿದೆ.

BDA Invites Tender for 20km Peripheral Ring Road at Rs 3,348, Aims Completion in 36 months
ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಸಂಪುಟ ಅನುಮೋದನೆ; ಎರಡು ವರ್ಷದಲ್ಲಿ ಪೂರ್ಣ

ಟೆಂಡರ್ ದಾಖಲೆಯಲ್ಲಿ ಉಲ್ಲೇಖಿಸಲಾದ ಸಮಯದ ಪ್ರಕಾರ, ಟೆಂಡರ್ ವಿಚಾರಣೆಗಳಿಗೆ ಕೊನೆಯ ದಿನಾಂಕ ಏಪ್ರಿಲ್ 15, ಮತ್ತು ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮೇ 4. ತಾಂತ್ರಿಕ ಬಿಡ್‌ಗಳನ್ನು ಮೇ 6 ರಂದು ಮತ್ತು ಹಣಕಾಸು ಬಿಡ್ ಅನ್ನು ಮೇ 11 ರಂದು ತೆರೆಯಲಾಗುವುದು.

ಯಾವುದೇ ಕಂಪನಿ ಟೆಂಡರ್‍‌ ಪಡೆದರೂ ಒಟ್ಟು ಮೂರು ವರ್ಷಗಳಲ್ಲಿ(36 ತಿಂಗಳು) ಯೋಜನೆ ಮುಗಿಸಬೇಕು. ಸದರಿ ಟೆಂಡರ್ ಪ್ರಕ್ರಿಯೆ ಮೇ ತಿಂಗಳು ಅಂತಿಮವಾಗುವ ಸಾಧ್ಯತೆ ಇದೆ.

ಬಿಐಇಸಿ ಮಾದವರ(ನೆಲಮಂಗಲ ಬಳಿ)ದಿಂದ ವಿಮಾನ ನಿಲ್ದಾಣ/ಬಳ್ಳಾರಿ ರಸ್ತೆಯವರೆಗಿನ ರಿಂಗ್ ರಸ್ತೆಗೆ ಟೆಂಡರ್ ಕರೆಯುವ ಮೂಲಕ ನಾವು ಒಂದು ಪ್ರಮುಖ ಮೈಲಿಗಲ್ಲು ತಲುಪಿದ್ದೇವೆ ಎಂದು ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಧ್ಯಕ್ಷ ಎಲ್ ಕೆ ಅತೀಕ್ ಅವರು ಹೇಳಿದ್ದಾರೆ.

ಮೋಹನ್‌ದಾಸ್ ಪೈ ಹೇಳಿದ್ದೇನು?

ಇನ್ನು ನೆಟಿಜನ್‌ಗಳು ಈ ಟೆಂಡರ್‌ ಅನ್ನು ಸ್ವಾಗತಿಸಿದ್ದು, ಇದನ್ನು ಒಂದು ಮೈಲಿಗಲ್ಲು ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರು, ಈ ಸಂಬಂಧ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

"ಪಿಆರ್‌ಆರ್ ಅನ್ನು ಬಹುತೇಕ ಏಕಾಂಗಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಬೆಂಗಳೂರಿಗೆ ದೊಡ್ಡ ರಿಲೀಫ್" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com