ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು, ಅಧಿಕೃತ ಆದೇಶ!

1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು ಭಾರತ ಸಂವಿಧಾನದ 191(1)(e) ವಿಧಿಯ ನಿಬಂಧನೆಗಳ ಪ್ರಕಾರ ಮತ್ತು ಅಂತಹ ಅನರ್ಹತೆಯು ಅವರ ಬಿಡುಗಡೆಯ ನಂತರ ಆರು ವರ್ಷಗಳ ಅವಧಿಗೆ ಮುಂದುವರಿಯುತ್ತದೆ.
Yogesh Gowda and Vinay Kulkarni
ಯೋಗೇಶ್ ಗೌಡ, ವಿನಯ್ ಕುಲಕರ್ಣಿ
Updated on

ಬೆಂಗಳೂರು: ಧಾರವಾಡದ ಬಿಜೆಪಿ ಜಿ.ಪಂ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದುಗೊಂಡಿದೆ. ಈ ಸಂಬಂಧ ಕರ್ನಾಟಕ ವಿಧಾನಸಭೆ ಶನಿವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಸದ್ಯ ಜೈಲಿನಲ್ಲಿದ್ದು, ಕೇಸ್ ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭೆಯ ಸದಸ್ಯ ವಿನಯ್ ಕುಲಕರ್ಣಿ ಅವರನ್ನು ಬೆಂಗಳೂರು ನಗರದ (CCH-82) LXXXI ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಶೇಷ CC ಸಂಖ್ಯೆ 565/2021 ರಲ್ಲಿ ದೋಷಾರೋಪಣೆ ಮಾಡಿದ ಪರಿಣಾಮವಾಗಿ ಅವರು ಶಿಕ್ಷೆಗೊಳಗಾದ ದಿನಾಂಕದಿಂದ ಅಂದರೆ ಏಪ್ರಿಲ್ 15, 2026 ರಿಂದ ಕರ್ನಾಟಕ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಅಂತ ತಿಳಿಸಲಾಗಿದೆ.

ಬಿಡುಗಡೆ ನಂತರವೂ 6 ವರ್ಷ ಅನರ್ಹತೆ ಮುಂದುವರಿಕೆ

1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು ಭಾರತ ಸಂವಿಧಾನದ 191(1)(e) ವಿಧಿಯ ನಿಬಂಧನೆಗಳ ಪ್ರಕಾರ ಮತ್ತು ಅಂತಹ ಅನರ್ಹತೆಯು ಅವರ ಬಿಡುಗಡೆಯ ನಂತರ ಆರು ವರ್ಷಗಳ ಅವಧಿಗೆ ಮುಂದುವರಿಯುತ್ತದೆ.

ಸಮರ್ಥ ನ್ಯಾಯಾಲಯವು ಶಿಕ್ಷೆಯನ್ನು ತಡೆಹಿಡಿಯದ ಹೊರತು ಅನರ್ಹತೆ ಮುಂದುವರೆಯಲಿದೆ. ಆದ್ದರಿಂದ, ಕರ್ನಾಟಕ ವಿಧಾನಸಭೆಯ ಒಂದು ಸ್ಥಾನ ಖಾಲಿಯಾಗಿದೆ ಅಂತ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಹಾಲಿ ಶಾಸಕರ ಮರಣದಿಂದಾಗಿ ಖಾಲಿಯಾಗಿದ್ದ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಎರಡು ಸ್ಥಾನಗಳನ್ನು ಭರ್ತಿ ಮಾಡಲು ಏಪ್ರಿಲ್ 9 ರಂದು ಉಪಚುನಾವಣೆ ನಡೆಸಲಾಯಿತು. ಫಲಿತಾಂಶಗಳನ್ನು ಮೇ 4 ರಂದು ಘೋಷಿಸಲಾಗುವುದು.

Yogesh Gowda and Vinay Kulkarni
ಯೋಗೇಶ್ ಗೌಡ ಕೊಲೆ ಕೇಸ್: ಜೀವಾವಧಿ ಶಿಕ್ಷೆಗೆ ತಡೆ ಕೋರಿ ವಿನಯ್ ಕುಲಕರ್ಣಿ ಹೈಕೋರ್ಟ್ ಗೆ ಮೇಲ್ಮನವಿ

ಏಪ್ರಿಲ್ 15 ರಂದು, ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಕುಲಕರ್ಣಿ ಮತ್ತು ಇತರರನ್ನು ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೋಷಿ ಎಂದು ಘೋಷಿಸಿದರು. ತದನಂತರ ಏಪ್ರಿಲ್ 17 ರಂದು ನ್ಯಾಯಾಲಯವು ಕುಲಕರ್ಣಿ ಮತ್ತು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇತರ 15 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com