ಕರ್ನಾಟಕದಲ್ಲಿ BJP ಬೆಳೆಸಲು ಯಡಿಯೂರಪ್ಪ ತ್ಯಾಗ ಅಪಾರ: ಪ್ರಧಾನಿ ಮೋದಿ

ಒಂದು ಕಾಲದಲ್ಲಿ ಬಿಜೆಪಿ ಕೆಲವೇ ಪ್ರದೇಶಗಳಿಗೆ ಸೀಮಿತ ಪಕ್ಷ ಎಂಬ ತಪ್ಪು ಕಲ್ಪನೆ ಇತ್ತು. ಆದರೆ, ಯಡಿಯೂರಪ್ಪ ಅವರು ಆ ಕಲ್ಪನೆಯನ್ನು ದೂರ ಮಾಡಿ, ದೇಶದ ಪ್ರತಿಯೊಬ್ಬರ ಪಕ್ಷವೆಂದು ಬಿಜೆಪಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರವಹಿಸಿದರು.
Yeddyurappa-PM modi
ಪ್ರಧಾನಿ ಮೋದಿ, ಯಡಿಯೂರಪ್ಪ (ಸಂಗ್ರಹ ಚಿತ್ರ)
Updated on

ಚಿತ್ರದುರ್ಗ: ಕರ್ನಾಟಕದಲ್ಲಿ ಬಿಜೆಪಿ ಬಲವಾಗಿ ಬೆಳೆದು ಜನಮಾನಸದಲ್ಲಿ ನೆಲೆಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಶ್ರಮ ಮತ್ತು ತ್ಯಾಗವೇ ಪ್ರಮುಖ ಕಾರಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷದ ಮೈಲಿಗಲ್ಲು ಅಂಗವಾಗಿ ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ನಡುವೆ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಅವರು ಪತ್ರ ರವಾನಿಸಿದ್ದಾರೆ.

ಈ ಪತ್ರವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕಾರ್ಯಕ್ರಮದಲ್ಲಿ ಓದಿದರು. ಬಳಿಕ ಆ ಪತ್ರವನ್ನು ಫ್ರೇಮ್‌ ಮಾಡಿ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.

“ಒಂದು ಕಾಲದಲ್ಲಿ ಬಿಜೆಪಿ ಕೆಲವೇ ಪ್ರದೇಶಗಳಿಗೆ ಸೀಮಿತ ಪಕ್ಷ ಎಂಬ ತಪ್ಪು ಕಲ್ಪನೆ ಇತ್ತು. ಆದರೆ, ಯಡಿಯೂರಪ್ಪ ಅವರು ಆ ಕಲ್ಪನೆಯನ್ನು ದೂರ ಮಾಡಿ, ದೇಶದ ಪ್ರತಿಯೊಬ್ಬರ ಪಕ್ಷವೆಂದು ಬಿಜೆಪಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರವಹಿಸಿದರು” ಎಂದು ಮೋದಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಅಭಿಮಾನೋತ್ಸವವು ಕೇವಲ ಕರ್ನಾಟಕದ ಸಂಭ್ರಮವಲ್ಲ; ದೇಶದಾದ್ಯಂತ ಇರುವ ಪಕ್ಷದ ಕಾರ್ಯಕರ್ತರಿಗೆ ಇದು ಸ್ಫೂರ್ತಿಯ ಕ್ಷಣ. “ನಾನು ವೈಯಕ್ತಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬದುಕನ್ನೇ ಸಮರ್ಪಿಸಿದ ನಾಯಕರಿಗೆ ಗೌರವ ಸಲ್ಲಿಸಲು ಸೇರಿರುವ ಎಲ್ಲರ ಮಧ್ಯೆ ನನ್ನ ಮನಸ್ಸು ಇದೆ ಎಂದು ತಿಳಿಸಿದ್ದಾರೆ.

Yeddyurappa-PM modi
ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ: ಬಿ ಎಸ್ ಯಡಿಯೂರಪ್ಪ-Video

ಇದೇ ವೇಳೆ ಯಡಿಯೂರಪ್ಪ ಅವರೊಂದಿಗೆ ಹಲವು ವರ್ಷಗಳ ಕಾಲ ಹತ್ತಿರವಾಗಿ ಕೆಲಸ ಮಾಡಿದ ಅನುಭವ ಹಂಚಿಕೊಂಡಿರುವ ಮೋದಿ ಅವರು, “ಯಡಿಯೂರಪ್ಪ ಸದಾ ಆತ್ಮೀಯ, ಪರಿಶ್ರಮಿ ಹಾಗೂ ವಿನಮ್ರ ವ್ಯಕ್ತಿ. ಹೋರಾಟದ ಸಂದರ್ಭದಲ್ಲೂ, ಯಶಸ್ಸಿನ ಕ್ಷಣಗಳಲ್ಲೂ ಅವರನ್ನು ನಾನು ನೋಡಿದ್ದೇನೆ. ಆದರೆ, ಯಾವ ಹಂತದಲ್ಲಿದ್ದರೂ ಕರ್ನಾಟಕದ ಜನರ ಮತ್ತು ಪಕ್ಷದ ತತ್ವಗಳ ಬಗ್ಗೆ ಅವರ ಬದ್ಧತೆ ಮಾತ್ರ ಎಂದಿಗೂ ಬದಲಾಗಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಕುಟುಂಬ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ ಅವರು ರೈತರು, ಕಾರ್ಮಿಕರು, ಬಡವರು ಹಾಗೂ ಹಿಂದುಳಿದ ವರ್ಗಗಳ ನಡುವೆ ನಿರಂತರ ಕೆಲಸ ಮಾಡುವ ಮೂಲಕ ಹಂತ ಹಂತವಾಗಿ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಂಡರು. ಜನರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸಿ ಹಲವು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇಂದು ಕರ್ನಾಟಕದಲ್ಲಿ ಬಿಜೆಪಿ ವ್ಯಾಪಕ ಬೆಂಬಲ ಪಡೆದ ಪಕ್ಷವಾಗಿ ಬೆಳೆದಿರುವುದನ್ನು ನೋಡಿದಾಗ ನಮಗೆ ಸಂತೋಷವಾಗುತ್ತದೆ. ಆದರೆ, ಈ ಅಡಿಪಾಯ ನಿರ್ಮಾಣಕ್ಕೆ ಎಷ್ಟು ತ್ಯಾಗ ಮತ್ತು ಪರಿಶ್ರಮ ಬೇಕಾಯಿತು ಎಂಬುದನ್ನು ಹಳೆಯ ಪೀಳಿಗೆಯ ಕಾರ್ಯಕರ್ತರು ಚೆನ್ನಾಗಿ ಅರಿತಿದ್ದಾರೆಂದು ಹೇಳಿದ್ದಾರೆ.

ಯಡಿಯೂರಪ್ಪ ಅವರು ಅಭಿವೃದ್ಧಿಯನ್ನು ಎಲ್ಲ ವರ್ಗಗಳಿಗೂ ತಲುಪಿಸುವ ಕೆಲಸ ಮಾಡಿದರು. ಶಿಕ್ಷಣ, ಕೌಶಲ್ಯಾಭಿವೃದ್ಧಿ, ವಸತಿ ಯೋಜನೆಗಳ ಮೂಲಕ ಹಿಂದುಳಿದ ಸಮುದಾಯಗಳನ್ನು ಸಬಲಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಮಹಿಳೆಯರ ಆಶಯಗಳನ್ನು ಈಡೇರಿಸಲು ಸಹ ಅವರು ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಿದರು ಎಂದು ಪತ್ರದಲ್ಲಿ ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com