ಉಡುಪಿ: ಮತಾಂತರಗೊಂಡಿದ್ದ Hindu ಯುವತಿ ಮಾತು ಕೇಳಿ ಬಿಜೆಪಿಗರಿಗೆ ಉಪದೇಶ ಕೊಟ್ಟಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ನಾಗೆಪಾಟಲು!

ಹಿಂದೂ ವೃದ್ಧ ಮಹಿಳೆಯೊಬ್ಬರಿಗೆ ಮನೆ ಕಟ್ಟಲು ನೆರವು ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮುಸ್ಲಿಂ ಮಹಿಳೆಯರು ಮನವಿ ಮಾಡಿದ್ದರು. ಇದನ್ನು ಉಲ್ಲೇಖಿಸಿ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿಗರಿಗೆ ಸೌಹಾರ್ದತೆಯ ಪಾಠ ಮಾಡಿದ್ದರು.
Laxmi hebbalkar
ಲಕ್ಷ್ಮೀ ಹೆಬ್ಬಾಳ್ಕರ್
Updated on

ಉಡುಪಿ: ಹಿಂದೂ ವೃದ್ಧ ಮಹಿಳೆಯೊಬ್ಬರಿಗೆ ಮನೆ ಕಟ್ಟಲು ನೆರವು ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮುಸ್ಲಿಂ ಮಹಿಳೆಯರು ಮನವಿ ಮಾಡಿದ್ದರು. ಇದನ್ನು ಮುಂದಿಟ್ಟು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಿಜೆಪಿಗರಿಗೆ ಸೌಹಾರ್ದತೆಯ ಪಾಠ ಮಾಡಿದ್ದರು. ಆದರೆ ಇದೀಗ ಪ್ರಸಂಗ ಬದಲಾಗಿದೆ. ಉಸ್ತುವಾರಿ ಸಚಿವರನ್ನು ಭೇಟಿಯಾಗಲು ಬಂದ ಮಹಿಳೆ ಗಿರಿಜಾ ಶೆಟ್ಟಿಗಾರ್ ಅವರನ್ನು ಇಸ್ಲಾಂಗೆ ಮತಾಂತರಗೊಂಡಿದ್ದ ಪುತ್ರಿಯೇ ಕರೆತಂದಿದ್ದು ಎಂಬುದಾಗಿ ತಿಳಿದುಬಂದಿದೆ.

ಹಿಂದೂ ಮಹಿಳೆಯ ನೆರೆಮನೆಯವರು ಎಂದು ಸುಳ್ಳು ಹೇಳಿ ಉಸ್ತುವಾರಿ ಸಚಿವರನ್ನೇ ಬುರ್ಖಾಧಾರಿ ಮಹಿಳೆ ಯಾಮಾರಿಸಿದ್ದಾರೆ ಎಂದು ಆರೋಪಿಸಲಾಗಿದ್ದು ಇದೀಗ ಜಿಲ್ಲಾ ಬಿಜೆಪಿ ಮುಖಂಡರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಅವರು, ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದು ಸಮಾಜಕ್ಕೆ ಸುಳ್ಳು ಹೇಳಿದ ಬುರ್ಖಾಧಾರಿ ಮಹಿಳೆಯರಿಂದ ಬಿಜೆಪಿಗರು ಸೌಹಾರ್ದತೆ ಕಲಿಯುವ ಅಗತ್ಯವಿಲ್ಲ. ಇನ್ನು ಅವಸರ ಬುದ್ಧಿಯ ಲಕ್ಷ್ಮಿ ಹೆಬ್ಬಾಳ್ಳರ್ ಅವರು ಹಿಂದೆ ಮುಂದೆ ಯೋಚಿಸದೇ ಮಾಧ್ಯಮದ ಮುಂದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಭಾಷಣ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದರು.

Laxmi hebbalkar
'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

5 ಸೆಂಟ್ಸ್ ಭೂಮಿಯ ದಾಖಲೆ ಸಮಸ್ಯೆಯಿಂದಾಗಿ ಮನೆ ಕಟ್ಟಲು ಸಾಧ್ಯವಾಗದ ಪ್ರಕರಣದಲ್ಲಿ ಹಿಂದೂ ಮಹಿಳೆಗಾಗಿ ಮುಸ್ಲಿಂ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ ನೋಡಿ. ಉಡುಪಿ ಬಿಜೆಪಿಯವರು ಇದನ್ನು ನೋಡಿ ಸೌಹಾರ್ದತೆ ಕಲಿಯಬೇಕು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಚಾಟಿ ಬೀಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com