ನಿರ್ಗಮನಕ್ಕೂ ಮುನ್ನ ಆಯಕಟ್ಟಿನ ಹುದ್ದೆಗಳಿಗೆ ಆಪ್ತರ ನಿಯೋಜನೆ: SHRC ಅಧ್ಯಕ್ಷರಾಗಿ ನಿವೃತ್ತ ನ್ಯಾ. PN ದೇಸಾಯಿ ನೇಮಕ!

ಮೇ 28 ರಂದು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಕೆಲವೇ ದಿನಗಳ ಮೊದಲು, ಮೇ 21 ರ ಸುಮಾರಿಗೆ ನ್ಯಾಯಮೂರ್ತಿ ದೇಸಾಯಿ ಅವರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತು.
PN  Desai
ಪಿ ಎನ್ ದೇಸಾಯಿ
Updated on

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮೊದಲು ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಈ ನೇಮಕ ರಾಜ್ಯ ರಾಜಕೀಯದಲ್ಲಿ ಪಕ್ಷಪಾತದ ಹೊಸ ಆರೋಪಗಳಿಗೆ ಕಾರಣವಾಗಿದೆ. ಮೇ 28 ರಂದು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಕೆಲವೇ ದಿನಗಳ ಮೊದಲು, ಮೇ 21 ರ ಸುಮಾರಿಗೆ ನ್ಯಾಯಮೂರ್ತಿ ದೇಸಾಯಿ ಅವರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತು.

ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ಪಡೆದ ನಿವೇಶನ ಸಂಬಂಧ, ಭೂ ಮಂಜೂರಾತಿ ಪ್ರಕರಣದ ತನಿಖೆ ನಡೆಸಿದ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವವನ್ನು ನ್ಯಾಯಮೂರ್ತಿ ದೇಸಾಯಿ ವಹಿಸಿದ್ದರು, ಈ ಮುಡಾದಿಂದ ಪರ್ಯಾಯ ನಿವೇಶನಗಳ ಹಂಚಿಕೆ ಕಾನೂನುಬಾಹಿರವಲ್ಲ ಎಂದು ತೀರ್ಮಾನಿಸಿ ನ್ಯಾಯಮೂರ್ತಿ ದೇಸಾಯಿ ಆಯೋಗವು ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿತು. ಈ ವರದಿಯನ್ನು ಸೆಪ್ಟೆಂಬರ್ 2025 ರಲ್ಲಿ ರಾಜ್ಯ ಸಚಿವ ಸಂಪುಟ ಅಂಗೀಕರಿಸಿತು.

ಸಿದ್ದರಾಮಯ್ಯ ಯಾರ ಸಾಲವನ್ನೂ ಇಟ್ಟುಕೊಳ್ಳುವ ವ್ಯಕ್ತಿಯಲ್ಲ. ಹೀಗಾಗಿ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರಿಗೆ ಕೃತಜ್ಞತೆ ಸಲ್ಲಿಸಲು ಅವರನ್ನು ರಾಜ್ಯ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

PN  Desai
ಹೋಗುವ ಮುನ್ನ...: ರಾಜೀನಾಮೆ ಮೊದಲು ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ ವರ್ಗಾವಣೆ ಮಾಡಿದ ಸಿದ್ದರಾಮಯ್ಯ

ಮುಡಾ ಪ್ರಕರಣವು ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ರಾಜಕೀಯ ಮುಜುಗರವನ್ನುಂಟು ಮಾಡಿತ್ತು. ನಿಯಮಗಳನ್ನು ಉಲ್ಲಂಘಿಸಿ, ಪಾರ್ವತಿ ಸಿದ್ದರಾಮಯ್ಯ ಅವರು ಪೂರ್ವಜರ ಭೂಮಿಗೆ ಬದಲಾಗಿ ಮೈಸೂರಿನ ಪ್ರಮುಖ ಬಡಾವಣೆಯಲ್ಲಿ 14 ಪರಿಹಾರ ನಿವೇಶನಗಳನ್ನು ಪಡೆದಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು.

ತೀವ್ರ ಒತ್ತಡದ ನಡುವೆ ಸರ್ಕಾರ ಆರೋಪಗಳನ್ನು ತನಿಖೆ ಮಾಡಲು ನ್ಯಾಯಮೂರ್ತಿ ದೇಸಾಯಿ ಅವರನ್ನು ನೇಮಿಸಿತು. ಅವರ ವರದಿಯು ಕೆಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದರ ಜೊತೆಗೆ ಕುಟುಂಬವನ್ನು ಹೆಚ್ಚಾಗಿ ದೋಷಮುಕ್ತಗೊಳಿಸಿತು. ಅನುಕೂಲಕರ ವರದಿಯನ್ನು ನೀಡಿದ ಅದೇ ನ್ಯಾಯಾಧೀಶರನ್ನು ರಾಜ್ಯದ ಪ್ರಮುಖ ಮಾನವ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿರುವುದು, ಅದು ಕೂಡ ಮುಖ್ಯಮಂತ್ರಿ ಸ್ವತಃ ನಿರ್ಗಮಿಸುವ ಮುನ್ನಾದಿನ ತೆಗೆದುಕೊಂಡಿರುವ ಈ ನಿರ್ಧಾರ ರಾಜಕೀಯ ವಲಯಗಳಲ್ಲಿಯೂ ಹುಬ್ಬೇರಿಸಿದೆ .

ಹೊರಹೋಗುವ ಸರ್ಕಾರಗಳಿಂದ ಕೊನೆಯ ಕ್ಷಣದಲ್ಲಿ ನಡೆಯುವ ಇಂತಹ ನೇಮಕಾತಿಗಳನ್ನು ಸಾಮಾನ್ಯವಾಗಿ ನಿಷ್ಠಾವಂತರಿಗೆ ಪ್ರತಿಫಲ ನೀಡುವುದಾಗಿದೆ ಎಂದು ಹೇಳಲಾಗುತ್ತಿದೆ. ಅಧಿಕಾರ ಕೈ ಬದಲಾಗುವ ಮೊದಲು ಬಾಧ್ಯತೆಗಳನ್ನು ಇತ್ಯರ್ಥಪಡಿಸುವ ಪ್ರಯತ್ನಗಳಾಗಿ ನೋಡಲಾಗುತ್ತದೆ.

ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ, ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಈ ನೇಮಕಾತಿಯನ್ನು ಅನುಮೋದಿಸಿದ್ದಾರೆ. ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿರುವುದರಿಂದ, ಹೊಸ ಆಡಳಿತವು ಸಿದ್ದರಾಮಯ್ಯ ಆಡಳಿತದ ಕೊನೆಯ ದಿನಗಳಲ್ಲಿ ಮಾಡಿದ ನೇಮಕಾತಿಗಳನ್ನು ಮರುಪರಿಶೀಲಿಸುತ್ತದೆಯೇ ಅಥವಾ ನಿಲ್ಲಿಸುತ್ತದೆಯೇ ಎಂಬ ಪ್ರಶ್ನೆಗಳು ಎದುರಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com