ಡಾ. ಶ್ರೀನಿಧಿ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್‌ ಎಂಗೇಜ್‌ಮೆಂಟ್; 4 ವರ್ಷ ಪ್ರೀತಿಸಿ ಮದುವೆಗೆ ಸಜ್ಜಾದ ಜೋಡಿ!

ಕೆ.ಆರ್.ಪೇಟೆ ಮೂಲದ ವೈದ್ಯೆ ಡಾ. ಶ್ರೀನಿಧಿ ಅವರೊಂದಿಗೆ ದರ್ಶನ್ ಅವರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ಸರಳ ಹಾಗೂ ಸುಂದರವಾಗಿ ನೆರವೇರಿದೆ.
Congres MLA Darshan Dhruvanarayan gets engaged
ಡಾ. ಶ್ರೀನಿಧಿ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್‌ ಎಂಗೇಜ್‌ಮೆಂಟ್
Updated on: 

ಮಂಡ್ಯ: ಕಾಂಗ್ರೆಸ್ ನಾಯಕ ದಿ. ಆರ್. ಧ್ರುವನಾರಾಯಣ್ ಅವರ ಪುತ್ರ ಹಾಗೂ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್‌ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ವೈದ್ಯೆ ಡಾ. ಶ್ರೀನಿಧಿ ಅವರೊಂದಿಗೆ ದರ್ಶನ್ ಅವರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ಸರಳ ಹಾಗೂ ಸುಂದರವಾಗಿ ನೆರವೇರಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ದರ್ಶನ್ ಧ್ರುವನಾರಾಯಣ್‌ ಹಾಗೂ ಡಾ. ಶ್ರೀನಿಧಿ ಅವರು ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Congres MLA Darshan Dhruvanarayan gets engaged
ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್‌' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!

ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅವರ ಅಕಾಲಿಕ ಅಗಲಿಕೆಯ ನಂತರ ರಾಜಕೀಯದಲ್ಲಿ ಜನಮೆಚ್ಚುಗೆ ಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದ ದರ್ಶನ್ ಅವರಿಗೆ, ಇದೀಗ ವೈಯಕ್ತಿಕ ಜೀವನದಲ್ಲಿ ಸಡಗರ ಮನೆಮಾಡಿದೆ.

ನಿಶ್ಚಿತಾರ್ಥದ ಬೆನ್ನಲ್ಲೇ ದರ್ಶನ್ ಧ್ರುವನಾರಾಯಣ್‌ ಹಾಗೂ ಡಾ. ಶ್ರೀನಿಧಿ ಅವರ ಕುಟುಂಬಗಳಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವ ಜೋಡಿಗೆ ಕುಟುಂಬಸ್ಥರು ಹಾಗೂ ಆಪ್ತರು ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X