ಸ್ವಾತಂತ್ರ್ಯ ಬಂದು 80 ವರ್ಷವಾಯ್ತು; ಬೆಳಗಾವಿಯ ಈ ಕುಗ್ರಾಮದ ಜನತೆ ಬದುಕಿನಲ್ಲಿ ಇನ್ನೂ ಕತ್ತಲು !

ಇಲ್ಲಿನ 20 ಕುಟುಂಬಗಳ ಬದುಕು ಪ್ರತಿದಿನವೂ ಹೋರಾಟದಿಂದ ಕೂಡಿದೆ. ವಿದ್ಯುತ್ ಇಲ್ಲ, ಮೊಬೈಲ್ ನೆಟ್‌ವರ್ಕ್ ಇಲ್ಲ, ಟಿವಿ ಸಂಪರ್ಕವಿಲ್ಲ. ಅಷ್ಟೇ ಅಲ್ಲ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯೂ ಇಲ್ಲ.
ಖಾನಾಪುರ ತಾಲೂಕಿನ ಗೌಳಿ ವಾಡಾ ಕುಗ್ರಾಮಕ್ಕೆ ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿರುವ ಶಾಲಾ ಮಕ್ಕಳು.
ಖಾನಾಪುರ ತಾಲೂಕಿನ ಗೌಳಿ ವಾಡಾ ಕುಗ್ರಾಮಕ್ಕೆ ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿರುವ ಶಾಲಾ ಮಕ್ಕಳು.
Updated on: 

ಬೆಳಗಾವಿ: ಸ್ಮಾರ್ಟ್‌ಫೋನ್, ಇಂಟರ್ನೆಟ್ ಸಂಪರ್ಕ, ಟಿವಿ, ರಸ್ತೆ ಹೀಗೆ ಮೂಲಭೂತ ಸೌಕರ್ಯಗಳ ಜೊತೆಗೆ ಆಧುನಿಕ ಸೌಕರ್ಯ ಹೊಂದಿರುವ ಇಂದಿನ ಕಾಲದಲ್ಲಿ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಳ್ಯಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂರದ ಗೌಳಿ ವಾಡಾ ಕುಗ್ರಾಮದ ಸುಮಾರು 175 ಜನರು ಇಂದಿಗೂ ಮೂಲಸೌಕರ್ಯಗಳಿಲ್ಲದೆ ಬದುಕು ಸಾಗಿಸುತ್ತಿದ್ದಾರೆ.

ಇಲ್ಲಿನ 20 ಕುಟುಂಬಗಳ ಬದುಕು ಪ್ರತಿದಿನವೂ ಹೋರಾಟದಿಂದ ಕೂಡಿದೆ. ವಿದ್ಯುತ್ ಇಲ್ಲ, ಮೊಬೈಲ್ ನೆಟ್‌ವರ್ಕ್ ಇಲ್ಲ, ಟಿವಿ ಸಂಪರ್ಕವಿಲ್ಲ. ಅಷ್ಟೇ ಅಲ್ಲ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯೂ ಇಲ್ಲ. ಅರಣ್ಯ ಪ್ರದೇಶದಂಚಿನಲ್ಲಿರುವ ಈ ಕುಗ್ರಾಮಕ್ಕೆ ಸ್ವಾತಂತ್ರ್ಯ ಬಂದು ಸುಮಾರು ಎಂಟು ದಶಕಗಳು ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ.

ಖಾನಾಪುರ ತಾಲೂಕಿನ ಗೌಳಿ ವಾಡಾ ಕುಗ್ರಾಮಕ್ಕೆ ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿರುವ ಶಾಲಾ ಮಕ್ಕಳು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಆರಂಭಕ್ಕೂ ಮುನ್ನವೇ 382 ಕೋಟಿ ರೂ. ನೀರು ಪಾಲು, ವೆಚ್ಚ 10,240 ಕೋಟಿ ರೂ.ಗೆ ಏರಿಕೆ..!

ಈ ಕುರಿತು ಟಿಎನ್‌ಐಇ (The New Indian Express) ಜೊತೆ ಮಾತನಾಡಿದ ನಿವಾಸಿ ಭಗು ಧಾಕ್ಲು ಧಂಗರ್, ನಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಸಾಧ್ಯವಾದ ಎಲ್ಲಾ ಅಧಿಕಾರಿಗಳನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಆದರೆ, ಇದುವರೆಗೆ ಯಾರೊಬ್ಬರೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಜನಪ್ರತಿನಿಧಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ನೀಡುವ ಭರವಸೆಗಳು ತಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಗ್ರಾಮಸ್ಥರು ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಖಾನಾಪುರ ತಹಶೀಲ್ದಾರ್ ಹಾಗೂ ಹೆಸ್ಕಾಂನ ಖಾನಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರತಿದಿನ ಸಂಜೆ ಕತ್ತಲು ಆವರಿಸುತ್ತಿದ್ದಂತೆ ಗ್ರಾಮಸ್ಥರು ವಿದ್ಯುತ್ ಮತ್ತು ಸಮರ್ಪಕ ಬೆಳಕಿನ ವ್ಯವಸ್ಥೆಯಿಲ್ಲದೆ ದೈನಂದಿನ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೊರಜಗತ್ತಿನ ಸಂಪರ್ಕದಿಂದಲೂ ಬಹುತೇಕ ದೂರ ಉಳಿಯುವಂತಾಗಿದೆ.

ಖಾನಾಪುರ ತಾಲೂಕಿನ ಗೌಳಿ ವಾಡಾ ಕುಗ್ರಾಮಕ್ಕೆ ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿರುವ ಶಾಲಾ ಮಕ್ಕಳು.
‘ಮುರಸು’ ಚಂಡಮಾರುತ: ನ. 6ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ನಿರೀಕ್ಷೆ

ಮೂಲಸೌಕರ್ಯ ಕೊರತೆಯಿಂದ ಮಕ್ಕಳು, ಮಹಿಳೆಯರು, ವೃದ್ಧರಿಗೆ ಸಂಕಷ್ಟ

ಮೂಲಭೂತ ಸೌಕರ್ಯಗಳ ಕೊರತೆ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ. ಮೊಬೈಲ್ ಸಂಪರ್ಕವಿಲ್ಲದ ಕಾರಣ ಪರಸ್ಪರ ಸಂವಹನ ನಡೆಸುವುದಕ್ಕೂ, ತುರ್ತು ಸಂದರ್ಭದಲ್ಲಿ ನೆರವು ಕೋರುವುದಕ್ಕೂ ಗ್ರಾಮಸ್ಥರು ಪರದಾಡುವಂತಾಗಿದೆ.

ಸರಿಯಾದ ರಸ್ತೆ ಇಲ್ಲದಿರುವುದು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಅದರಲ್ಲೂ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿ ತುರ್ತಾಗಿ ವೈದ್ಯಕೀಯ ನೆರವು ಪಡೆಯಬೇಕಾದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತದೆ.

ಖಾನಾಪುರ ತಾಲೂಕಿನ ಗೌಳಿ ವಾಡಾ ಕುಗ್ರಾಮಕ್ಕೆ ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿರುವ ಶಾಲಾ ಮಕ್ಕಳು.
ಆಂಧ್ರಪ್ರದೇಶ: ಈ ಗ್ರಾಮದ ಜನತೆಗೆ ಇನ್ನೂ ಸಿಕ್ಕಿಲ್ಲ ರಸ್ತೆ ಭಾಗ್ಯ; ಗರ್ಭಿಣಿಯನ್ನು 3 ಕಿ.ಮೀ ದೂರ ಸ್ಟ್ರೆಚರ್‌ನಲ್ಲಿ ಹೊತ್ತೊಯ್ದ ಗ್ರಾಮಸ್ಥರು; Video

ವಿದ್ಯುತ್ ಸಂಪರ್ಕವಿಲ್ಲದ ಕಾರಣ ಬದುಕು ಅತ್ಯಂತ ಕಷ್ಟಕರವಾಗಿದೆ ಎಂದು ಸ್ಥಳೀಯ ನಿವಾಸಿ ಸಂಜಯ್ ಪಾಟೀಲ್ ಹೇಳಿದ್ದಾರೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಈ ವಸತಿ ಪ್ರದೇಶದ ಸುತ್ತಲೂ ದಟ್ಟ ಅರಣ್ಯವಿದ್ದು, ರಾತ್ರಿ ವೇಳೆ ಕಾಡುಪ್ರಾಣಿಗಳು ಗ್ರಾಮಕ್ಕೆ ನುಗ್ಗುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ. ಕತ್ತಲಿನಿಂದಾಗಿ ಸುರಕ್ಷಿತವಾಗಿ ಓಡಾಡುವುದೂ ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕತ್ತಲಿನಿಂದಾಗಿ ನಾವು ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್ ಪಾಟೀಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X