ಮಂಡ್ಯ: ಜಗಳ ಬಿಡಿಸಲು ಹೋದ ಯುವಕನಿಗೆ ಡ್ರ್ಯಾಗರ್‌ನಿಂದ ಕತ್ತು ಸೀಳಿ ಭೀಕರ ಹತ್ಯೆ!

ಕೊಲೆಯಾದ ಯುವಕನನ್ನು ಮದ್ದೂರು ಪಟ್ಟಣದ ನಂದನ್(25) ಎಂದು ಗುರುತಿಸಲಾಗಿದೆ.
Mandya: Youth Brutally Murdered in Maddur
ನಂದನ್
Updated on: 

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ಮಂಗಳವಾರ ಜಗಳ ಬಿಡಿಸಲು ಹೋದ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಕೊಲೆಯಾದ ಯುವಕನನ್ನು ಮದ್ದೂರು ಪಟ್ಟಣದ ನಂದನ್(25) ಎಂದು ಗುರುತಿಸಲಾಗಿದೆ.

ಹಣದ ವಿಚಾರಕ್ಕೆ ಆರೋಪಿ ರಘು ಹಾಗೂ ಪ್ರಕಾಶ್ ನಡುವೆ ಜಗಳವಾಗಿದ್ದು, ಪ್ರಕಾಶ್ ಜೊತೆ ತೆರಳಿದ್ದ ನಂದನ್ ಇಬ್ಬರ ನಡುವಿನ ಜಗಳ ಬಿಡಿಸಲು ಹೋಗಿದ್ದಾನೆ. ಈ ವೇಳೆ ಆರೋಪಿ ಶಿವರಾಜು ಡ್ರ‍್ಯಾಗರ್‌ನಿಂದ ನಂದನ್ ಮೇಲೆ ಭೀಕರ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಧನುಷ್, ಶಿವರಾಜು ಹಾಗೂ ನಿಖಿಲ್‌ನಿಂದಲೂ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಭೀಕರ ಹಲ್ಲೆಯಿಂದ ನಂದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Mandya: Youth Brutally Murdered in Maddur
ರೇಣುಕಾಸ್ವಾಮಿ ಕೊಲೆ ಕೇಸ್: ಪಟ್ಟಣಗೆರೆ ಶೆಡ್‌ಗೆ ದರ್ಶನ್, ಪವಿತ್ರಾ ಬಂದೇ ಇಲ್ಲ- ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಐ ವಿಟ್ನೆಸ್‌!

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಮದ್ದೂರು ಪೊಲೀಸರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X