

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಲಿನ ದರ ಏರಿಕೆಯ ಬೆನ್ನಲ್ಲೇ ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಬಸ್ ಟಿಕೆಟ್ ದರಗಳ ಜೊತೆಗೆ ದಿನದ, ವಾರದ ಮತ್ತು ತಿಂಗಳ ಬಸ್ ಪಾಸ್‌ಗಳ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಹೌದು, ಡೀಸೆಲ್ ಬೆಲೆ ಏರಿಕೆ ಹಾಗೂ ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ರಾಜ್ಯ ಸರ್ಕಾರವು ಈ ಪರಿಷ್ಕರಣೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ಪರಿಷ್ಕೃತ ಬಸ್ ಪಾಸ್‌ಗಳ ದರ ಪಟ್ಟಿ:
ದೈನಂದಿನ ಸಾಮಾನ್ಯ ಪಾಸ್: ಈ ಹಿಂದೆ ₹80 ಇದ್ದ ದಿನದ ಪಾಸ್ ದರವನ್ನು ಈಗ ₹100 ಕ್ಕೆ ಏರಿಸಲಾಗಿದೆ.
ಸಾಮಾನ್ಯ ಬಸ್‌ಗಳ ವಾರದ ಪಾಸ್: ಹಿಂದಿನ ದರ ₹350 ದಿಂದ ಪರಿಷ್ಕೃತ ದರ ₹420 ಕ್ಕೆ ಏರಿಸಲಾಗಿದೆ.
ಸಾಮಾನ್ಯ ಮಾಸಿಕ ಪಾಸ್: ಸಾಮಾನ್ಯ ಬಸ್‌ಗಳ ಮಾಸಿಕ ಪಾಸ್ ದರ ₹1,200 ರಿಂದ ಬರೋಬ್ಬರಿ ₹1,500 ಕ್ಕೆ ಏರಿಕೆಯಾಗಿದೆ.
ವಜ್ರ ಎಸಿ ದಿನದ ಪಾಸ್: ಐಟಿ ಉದ್ಯೋಗಿಗಳು ಹೆಚ್ಚಾಗಿ ಬಳಸುವ ಎಸಿ ಬಸ್‌ಗಳ ದಿನದ ಪಾಸ್ ದರ ₹140 ರಿಂದ ₹180 ಕ್ಕೆ ತಲುಪಿದೆ.
ವಜ್ರ ಎಸಿ ಮಾಸಿಕ ಪಾಸ್: ಹವಾನಿಯಂತ್ರಿತ ವಜ್ರ ಬಸ್‌ಗಳ ಮಾಸಿಕ ಪಾಸ್ ದರ ₹1,500 ಇದ್ದದ್ದು ಈಗ ₹2,000 ರಿಂದ ₹2,500 ರ ಆಸುಪಾಸಿಗೆ ಏರಿಕೆ ಮಾಡಲಾಗಿದೆ.
ವಿದ್ಯಾರ್ಥಿ ಹಾಗೂ ಹಿರಿಯ ನಾಗರಿಕರ ಪಾಸ್: ಶಾಲಾ-ಕಾಲೇಜು ವಿದ್ಯಾರ್ಥಿಗಳ ಮತ್ತು ಹಿರಿಯ ನಾಗರಿಕರ ಮಾಸಿಕ ಪಾಸ್ ದರಗಳ ಮೇಲೂ ಶೇ. 25ರಿಂದ 30ರಷ್ಟು ಹೆಚ್ಚುವರಿ ದರ ಅನ್ವಯವಾಗಲಿದೆ.
ಬಿಎಂಟಿಸಿ ಸಾಮಾನ್ಯ ಬಸ್ ಹೊಸ ಟಿಕೆಟ್ ದರ
ಮುಂದುವರೆದು, ಸಾಮಾನ್ಯ ಬಸ್‌ಗಳಲ್ಲಿ ಕನಿಷ್ಠ ಟಿಕೆಟ್ ದರವನ್ನು ₹6 ರಿಂದ ₹10 ಕ್ಕೆ ಹೆಚ್ಚಿಸಲಾಗಿದ್ದು, ಹಂತ ಹಂತವಾಗಿ ದರ ಹೀಗಿದೆ:
ಕನಿಷ್ಠ ದರ (0-2 ಕಿ.ಮೀ): ₹6 ಇರುವುದು ಇನ್ಮುಂದೆ ₹10 ಆಗಲಿದೆ.
ಗರಿಷ್ಠ ದರ: ₹35 ಇರುವುದು ಇನ್ಮುಂದೆ ₹45 ಆಗಲಿದೆ.