ಸಾಮಾನ್ಯ ಜನತೆಗೆ ಬರೆ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಬಸ್ ದರ ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿ ಜಾರಿ

ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ. ಕೆಎಸ್ ಆರ್ ಟಿಸಿ ಬಸ್ ದರ ಗರಿಷ್ಠ 9 ರೂಪಾಯಿ ಏರಿಕೆಯಾಗಿದೆ.
Bus rate hike
ಬಸ್ ದರ ಹೆಚ್ಚಳ
Updated on: 

ಬೆಂಗಳೂರು: ರಾಜ್ಯ ಸರ್ಕಾರ ನಂದಿನಿ ಹಾಲು, ಮೊಸರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರವನ್ನು ಕೂಡ ಇಂದು ಹೆಚ್ಚಿಸಿದೆ.

ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ. ಕೆಎಸ್ ಆರ್ ಟಿಸಿ ಬಸ್ ದರ ಗರಿಷ್ಠ 9 ರೂಪಾಯಿ ಏರಿಕೆಯಾಗಿದೆ. ಬಿಎಂಟಿಸಿ ಬಸ್ ದರ ಪ್ರತಿ ಸ್ಟೇಜ್ ಗೆ 6 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ನೂತನ ದರ ಪ್ರಕಟಿಸಿದರು.

ಸಾಮಾನ್ಯ ಸಾರಿಗೆ ಸೇವೆಗಳಲ್ಲಿ ಗರಿಷ್ಠ 9 ರೂಪಾಯಿಗಳಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅವಕಾಶವಿದ್ದು, ಹಂತ ಹಂತವಾಗಿ ದರ ಏರಿಕೆ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ದರ 81ರಿಂದ 100ಕ್ಕೆ ಏರಿಕೆ ಅಂದರೆ ಶೇ. 19ರಷ್ಟು ದರ ಹೆಚ್ಚಳವಾಗಲಿದೆ.

ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ 4 ರೂಪಾಯಿಗಳಷ್ಟು ಹೆಚ್ಚಳವಾಗಲಿದೆ.

Bus rate hike
ನವೆಂಬರ್ 5ರಿಂದ ಬಸ್ ದರ ಹೆಚ್ಚಳ: ಸಾರಿಗೆ ಸಚಿವ ಭೈರತಿ ಸುರೇಶ್; Video

ಕೇಂದ್ರ ಸರ್ಕಾರ ಡೀಸೆಲ್ ಬೆಲೆ ಏರಿಕೆ ಮಾಡಿರುವುದರಿಂದ ಸಾರಿಗೆ ನಿಗಮಕ್ಕೆ ತುಂಬಾ ಹೊರೆಯಾಗುತ್ತಿದೆ. ಸಾರಿಗೆ ನಿಗಮದ ನಷ್ಟ ಭರಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಉಚಿತ ಬಸ್ ಪ್ರಯಾಣದಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ, ಮಹಿಳೆಯರ ಟಿಕೆಟ್ ಹಣವನ್ನು ಸರ್ಕಾರವೇ ಭರಿಸುತ್ತಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾದಾಗ ಮಾತ್ರ ಟಿಕೆಟ್ ದರ ಏರಿಸಲು ನಿಗಮಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X