ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಿ ಬದಲಾದ ಪ್ರದೋಷ್‌ಗೆ ಪಿತೃಕಾರ್ಯದಲ್ಲಿ ಭಾಗಿಯಾಗಲು ಷರತ್ತುಬದ್ಧ ಅವಕಾಶ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾದ ಆರೋಪಿ ಪ್ರದೋಶ್ ಗೆ ಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರದೂಷ್ ಅವರ ತಂದೆ ಕಳೆದ ವರ್ಷದ ನಿಧನರಾಗಿದ್ದರು.
Pradosh, Darshan
ಪ್ರದೋಷ್, ದರ್ಶನ್
Updated on: 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾದ ಆರೋಪಿ ಪ್ರದೋಶ್ ಗೆ ಕೋರ್ಟ್ ಪಿತೃಕಾರ್ಯಕ್ರದಲ್ಲಿ ಭಾಗಿಯಾಗಲು ಷರತ್ತುಬದ್ಧ ಅವಕಾಶ ನೀಡಿದೆ. ಪ್ರದೂಷ್ ಅವರ ತಂದೆ ಕಳೆದ ವರ್ಷದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ವರ್ಷದ ಪಿತೃಕಾರ್ಯವಿದ್ದು, ಅದರಲ್ಲಿ ಭಾಗಿಯಾಗಲು 6 ದಿನಗಳ ಅವಕಾಶ ನೀಡಿದೆ.

ಸೆಷನ್ಸ್ ನ್ಯಾಯಾಲಯದಲ್ಲಿ ಪ್ರದೋಶ್ ಜಾಮೀನು ಅರ್ಜಿ ರದ್ದಾಗಿತ್ತು. ಹೀಗಾಗಿ ಹೈಕೋರ್ಟ್​​ಗೆ ಪ್ರದೋಶ್ ಅರ್ಜಿ ಸಲ್ಲಿಸಿದ್ದು 20 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದ್ದರು. ಇಂದು ಹೈಕೋರ್ಟ್​​ ವಾದ-ವಿವಾದ ಆಲಿಸಿ ಅಂತಿಮವಾಗಿ ಪ್ರದೋಶ್​​ಗೆ ನವೆಂಬರ್ 7ರಿಂದ ನವೆಂಬರ್ 12ರವರೆಗೆ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ.

ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಪ್ರದೋಶ್​​ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಫಿ ಸಾಕ್ಷಿಯ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರ ಪ್ರಭಾವ ಇದ್ದು, ಈಗ ಆರೋಪಿಗೆ ಜಾಮೀನು ನೀಡಿದರೆ ಪ್ರಕರಣದಲ್ಲಿ ಹಲವು ವಿಷಯಗಳನ್ನು ತಿರುಚುವ ಸಾಧ್ಯತೆ ಇದೆ ಎಂದು ಹಷ್ಮತ್ ಪಾಷಾ ವಾದಿಸಿದ್ದರು.

Pradosh, Darshan
ದರ್ಶನ್ ಮನೆ ಮುಂದೆ ಆಟೋಗಳ ಸಾಲು: ಧನ್ವೀರ್ ಹೆಸರಲ್ಲಿ ಅನಾಮಿಕನಿಂದ ಕೊಲೆ ಬೆದರಿಕೆ!

ಕೋರ್ಟ್ ನ ಷರತ್ತುಗಳೇನು?

ಪ್ರದೋಷ್ ಅವರನ್ನು ಜೈಲಿನಿಂದ ಕರೆತರುವಾಗ ನಗರ ಸಶಸ್ತ್ರ ರಿಸರ್ವ್ ಪೊಲೀಸ್ ಬೆಂಗಾವಲು ನೀಡಬೇಕು. ಇನ್ನು ಪಿತೃಕಾರ್ಯಕ್ಕೆ ಬರುವ ವ್ಯಕ್ತಿಗಳ ಹೆಸರನ್ನು ನ್ಯಾಯಾಲಯಕ್ಕೆ ಹಾಗೂ ಪೊಲೀಸರಿಗೆ ಸಲ್ಲಿಸಬೇಕು. ಪಿತೃಕಾರ್ಯಕ್ಕೆ ಬರುವ ಪುರೋಹಿತರ ಹೆಸರನ್ನೂ ಸಹ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದವರನ್ನು ಭೇಟಿಯಾಗುವುದು ಅವರನ್ನು ಸಂಪರ್ಕಿಸುವುದಕ್ಕೆ ಅವಕಾಶ ನೀಡಬಾರದು ಎಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X