ಹಾಸನಾಂಬೆಯ ಗರ್ಭಗುಡಿಗೆ ಕರೆದೊಯ್ಯಲಿಲ್ಲವೆಂದು ಕಾಂಗ್ರೆಸ್ ನಾಯಕರು ಗರಂ: ಪ್ರೋಟೋಕಾಲ್ ವಿಚಾರಕ್ಕೆ ಕೈ ಕಾರ್ಯಕರ್ತರ ಕ್ಷಮೆ ಕೇಳಿದ ಹಾಸನ ಜಿಲ್ಲಾಧಿಕಾರಿ

ಹಾಸನಾಂಬೆ ದೇವಸ್ಥಾನದಲ್ಲಿ ಪ್ರೋಟೋಕಾಲ್ ಗೊಂದಲಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಸ್ಥಳದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಅಮಾನತು ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Hasanamba Temple Protocol Row: DC Apologizes to Congress Leaders, Threatens Suspension for Village Accountant
ಪ್ರೋಟೋಕಾಲ್ ವಿಚಾರಕ್ಕೆ ಕೈ ಕಾರ್ಯಕರ್ತರ ಕ್ಷಮೆ ಕೇಳಿದ ಹಾಸನ ಜಿಲ್ಲಾಧಿಕಾರಿOnline Desk
Updated on: 

ಹಾಸನ: ಹಾಸನದಲ್ಲಿ ಅಧಿದೇವತೆ ಹಾಸನಾಂಬೆ ದೇವಿ ದರ್ಶನದ ವೇಳೆ ಶಿಷ್ಟಾಚಾರ ಪಾಲನೆ ಹಾಗೂ ದರ್ಶನ ಸರಿಯಾಗಿ ಆಗಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತವರೂರಾದ ರಾಮನಗರ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ. ಅಷ್ಟೇ ಅಲ್ಲದೆ, ಪ್ರೋಟೋಕಾಲ್ ವ್ಯವಸ್ಥೆಯಲ್ಲಿದ್ದ ಲೈಸನಿಂಗ್ ಆಫೀಸರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ತೀವ್ರವಾಗಿ ಗರಂ ಆದ ಜಿಲ್ಲಾಧಿಕಾರಿಗಳು, ಅವರನ್ನು ತಕ್ಷಣವೇ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಡೆದಿದ್ದೇನು?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲೆಯಾದ ರಾಮನಗರದಿಂದ ಹಾಸನಾಂಬೆ ದರ್ಶನಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಪ್ರೋಟೋಕಾಲ್ ಅಡಿಯಲ್ಲಿ ಆಗಮಿಸಿದ್ದರು. ಇವರನ್ನು ಗರ್ಭಗುಡಿಯವರೆಗೆ ಕರೆದೊಯ್ದು ಸರಿಯಾಗಿ ದರ್ಶನ ಮಾಡಿಸಬೇಕಿದ್ದ ಲೈಸನಿಂಗ್ ಆಫೀಸರ್ ಮನು, ಕಾಂಗ್ರೆಸ್ ಮುಖಂಡರನ್ನು ಗರ್ಭಗುಡಿಯವರೆಗೆ ಕರೆದೊಯ್ದು ಸರಿಯಾಗಿ ದರ್ಶನ ಮಾಡಿಸದೆ, 'ಆಚೆಗೆ ನಡೀರಿ' ಎಂದು ಗದರಿದ್ದಾರೆ ಎನ್ನಲಾಗಿದೆ. ಅಲ್ಲದೆ, ದರ್ಶನ ಮುಗಿಸಿ ವಾಪಸ್ ಬಂದು ವಾಹನ ಹತ್ತುವ ಸಂದರ್ಭದಲ್ಲೂ ಸಿಬ್ಬಂದಿ ಯಾರೂ ಜೊತೆಗೆ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಕಾಂಗ್ರೆಸ್ ನಾಯಕರು ಅಲ್ಲಿಯೇ ಇದ್ದ ಗ್ರಾಮ ಲೆಕ್ಕಾಧಿಕಾರಿ ಮನು ಹಾಗೂ ಮತ್ತೊಬ್ಬ ಅಧಿಕಾರಿ ಸುಪ್ರೀತ್ ವಿರುದ್ಧ ಜೋರಾಗಿ ಕೂಗಾಡಿ ಆಕ್ರೋಶ ಹೊರಹಾಕಿದ್ದಾರೆ.

Hasanamba Temple Protocol Row: DC Apologizes to Congress Leaders, Threatens Suspension for Village Accountant
ಹಾಸನಾಂಬೆ ದರ್ಶನೋತ್ಸವ: ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್!

ಜಿಲ್ಲಾಧಿಕಾರಿ ಲತಾಕುಮಾರಿ ತತ್‌ಕ್ಷಣದ ಕ್ರಮ

ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಎದುರು ಕಾಂಗ್ರೆಸ್ ನಾಯಕರು ಅಧಿಕಾರಿಗಳ ನಡವಳಿಕೆ ಹಾಗೂ ಶಿಷ್ಟಾಚಾರ ಲೋಪದ ಕುರಿತು ನೇರವಾಗಿ ದೂರು ನೀಡಿದರು. "ಪ್ರೋಟೋಕಾಲ್‌ನಲ್ಲಿ ಬಂದ ಅತಿಥಿಗಳಿಗೆ ಈ ರೀತಿ ನಡೆಸಿಕೊಳ್ಳುವುದಾ?" ಎಂದು ಪ್ರಶ್ನಿಸಿದರು. ಅದರಂತೆ, ಘಟನೆಯಿಂದ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಮುಖಂಡರನ್ನು ಸಮಾಧಾನಪಡಿಸಿದ ಡಿಸಿ, ಪ್ರೋಟೋಕಾಲ್ ಲೋಪಕ್ಕಾಗಿ ಸ್ಥಳದಲ್ಲೇ ಕ್ಷಮೆ ಕೇಳಿದ್ದಾರೆ. ಜೊತೆಗೆ, ಕರ್ತವ್ಯದಲ್ಲಿದ್ದ ವಿಎ ಮನು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, "ಮನು ಅವರನ್ನು ತಕ್ಷಣ ಇಲ್ಲಿಗೆ ಕರೆಯಿರಿ, ನಾನಂತೂ ಇವರನ್ನು ಬಿಡುವುದಿಲ್ಲ, ಸಸ್ಪೆಂಡ್ ಮಾಡುತ್ತೇನೆ" ಎಂದು ಕಠಿಣ ಎಚ್ಚರಿಕೆ ನೀಡಿದರು. ಜೊತೆಗೆ, "ಇವರೆಲ್ಲರೂ ನಮ್ಮ ಜಿಲ್ಲೆಗೆ ಬಂದಿರುವ ಅತಿಥಿಗಳು, ಅವರೊಂದಿಗೆ ಸಮಾಧಾನ ಹಾಗೂ ಗೌರವದಿಂದ ವರ್ತಿಸಬೇಕು" ಎಂದು ಅಲ್ಲೇ ಇದ್ದ ಸುಪ್ರೀತ್ ಸೇರಿದಂತೆ ಇತರೆ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X