ಬೆಂಗಳೂರು: ಬೈಕ್ ಮೇಲೆ ನಿಂತು 154 ಕಿ.ಮೀ ಕ್ರಮಿಸಿ ಹೊಸ ವಿಶ್ವದಾಖಲೆ ಬರೆದ ಮೇಜರ್ ಅಮೃತ್ ಪಾಂಡಾ!

ASC ಟೊರ್ನಾಡೋಸ್ ಎಂದು ಕರೆಯಲ್ಪಡುವ ಸೇನಾ ಸೇವಾ ದಳ (ASC) ಬೈಕ್ ಪ್ರದರ್ಶನ ತಂಡವು ಮತ್ತೊಂದು ವಿಶ್ವ ದಾಖಲೆ ಬರೆದಿದೆ. ಮೇಜರ್ ಅಮೃತ್ ಪಾಂಡಾ ಬೈಕ್ ನ ಸೀಟಿನ ಮೇಲೆ ನಿಂತು 154 ಕಿ.ಮೀ ಕ್ರಮಿಸಿದ್ದಾರೆ.
Major Amrit Panda
ಮೇಜರ್ ಅಮೃತ್ ಪಾಂಡಾ
Updated on: 

ಬೆಂಗಳೂರು: ASC ಟೊರ್ನಾಡೋಸ್ ಎಂದು ಕರೆಯಲ್ಪಡುವ ಸೇನಾ ಸೇವಾ ದಳ (ASC) ಬೈಕ್ ಪ್ರದರ್ಶನ ತಂಡವು ಮತ್ತೊಂದು ವಿಶ್ವ ದಾಖಲೆ ಬರೆದಿದೆ. ಮೇಜರ್ ಅಮೃತ್ ಪಾಂಡಾ ಬೈಕ್ ನ ಸೀಟಿನ ಮೇಲೆ ನಿಂತು 154 ಕಿ.ಮೀ ಕ್ರಮಿಸಿದ್ದಾರೆ.

ಸೇವಾ ವಿಭಾಗದ 266ನೇ ಕಾರ್ಪ್ಸ್ ಡೇ ಹಾಗೂ 12ನೇ ರಿಯೂನಿಯನ್ ಸಂಭ್ರಮಾಚರಣೆಯ ಮುನ್ನಾದಿನ ಈ ಸಾಹಸ ಪ್ರದರ್ಶನ ನಡೆದಿದೆ. ಹಿಂದೆ ಈ ವಿಭಾಗದಲ್ಲಿ ದಾಖಲಾಗಿದ್ದ 107.92 ಕಿಲೋಮೀಟರ್ ಸವಾರಿಯ ದಾಖಲೆಯನ್ನು ಮೇಜರ್ ಪಾಂಡಾ ಅವರು ಧೂಳಿಪಟ ಮಾಡಿದ್ದಾರೆ. ಈ ಹೊಸ ಸಾಧನೆಯೊಂದಿಗೆ 'ಎಎಸ್‌ಸಿ ಟೊರ್ನಾಡೋಸ್' ತಂಡವು ಇದುವರೆಗೆ ಬರೆದ ಒಟ್ಟು ವಿಶ್ವದಾಖಲೆಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

Major Amrit Panda
6 ವರ್ಷಗಳ ನಂತರ ಎಲ್ಲಾ ಅಗ್ನಿವೀರರು ಖಾಯಂ ಸೈನಿಕರಾಗಬಹುದು, ಆದ್ರೆ...: ಸೇವಾವಧಿ ವಿಸ್ತರಣೆ ಬೆನ್ನಲ್ಲೇ ಮಹತ್ವದ ಘೋಷಣೆ!

ಎಎಸ್‌ಸಿ ಟೊರ್ನಾಡೋಸ್ ಸಾಹಸ ಪಡೆಯನ್ನು 1982 ರಲ್ಲಿ ಅಂದಿನ ಮೇಜರ್ ಸಿ.ಎನ್. ರಾವ್ ಅವರ ನೇತೃತ್ವದಲ್ಲಿ ಕ್ಯಾಪ್ಟನ್ ಜೆ.ಪಿ. ವರ್ಮಾ ಮತ್ತು ಸುಬೇದಾರ್ ಧನ್ ಸಿಂಗ್ ಅವರ ಸಹಕಾರದೊಂದಿಗೆ ಸ್ಥಾಪಿಸಲಾಯಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಈ ತಂಡವು ಪ್ರಥಮ ಬಾರಿಗೆ ಪ್ರದರ್ಶನ ನೀಡಿತ್ತು. ಅಪ್ರತಿಮ ದೈಹಿಕ ಶಕ್ತಿ, ತಾಂತ್ರಿಕ ಕೌಶಲ, ಶಿಸ್ತು ಮತ್ತು ದೇಶದ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ ಈ ಸಾಹಸವನ್ನು ಕೈಗೊಳ್ಳಲಾಗಿತ್ತು.

ಈ ಪ್ರದರ್ಶನಕ್ಕೆ ಆರಂಭದಿಂದಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಬಳಸಲಾಗುತ್ತಿದೆ. ಈ ತಂಡವು ಗಣರಾಜ್ಯೋತ್ಸವ ಪರೇಡ್, ಸಿಯಾಚಿನ್‌ನಂತಹ ಉನ್ನತ ಎತ್ತರದ ಪರ್ವತಾರೋಹಣ ಅಭಿಯಾನಗಳು, ರೇಡ್ ಡಿ ಹಿಮಾಲಯ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಸಮೂಹಗಳಲ್ಲಿ ಸಾಹಸ ಪ್ರದರ್ಶನಗಳನ್ನು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X