BMTC ಬೆನ್ನಲ್ಲೇ KSRTC ಬಸ್ ಪಾಸ್ ದರವೂ ಭಾರಿ ಏರಿಕೆ! ಶೇಕಡಾ 23 ರಷ್ಟು ಏರಿಕೆ ಮಾಡಿದ ಸರ್ಕಾರ

ಬಿಎಂಟಿಸಿ ಬೆನ್ನಲ್ಲೇ ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ ಬಸ್ ದೈನಂದಿನ ಹಾಗೂ ಮಾಸಿಕ ಪಾಸ್ ದರಗಳನ್ನು ಸಹ ಸರಾಸರಿ ಭಾರಿ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
KSRTC Bus
ಕೆಎಸ್‌ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)Online Desk
Updated on: 

ಬೆಂಗಳೂರು: ಕರ್ನಾಟಕ ಸರ್ಕಾರವು ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟ ಸರಿದೂಗಿಸಲು BMTC ಮತ್ತು KSRTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿದ್ದು, ದೈನಂದಿನ ಪ್ರಯಾಣಿಕರಿಗೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಇದರ ನಡುವೆಯೇ, ಬಿಎಂಟಿಸಿಯ ದೈನಂದಿನ ಹಾಗೂ ಮಾಸಿಕ ಪಾಸ್ ದರಗಳನ್ನು ಶೇ. 20 ರಿಂದ 25 ರಷ್ಟು ಸರ್ಕಾರ ಹೆಚ್ಚಿಸಿತ್ತು. ಈ ಬೆನ್ನಲ್ಲೇ, ಕೆಎಸ್‌ಆರ್‌ಟಿಸಿ ಮಾಸಿಕ ಪಾಸ್ ದರಗಳನ್ನು ಕೂಡ ಸರಾಸರಿ ಶೇಕಡಾ 23 ರಷ್ಟು ಭಾರಿ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ವೇಗದೂತ ಮತ್ತು ತಡೆರಹಿತ ಬಸ್‌ಗಳ ಪಾಸ್:

ದೂರದ ಊರುಗಳಿಗೆ ವೇಗದೂತ ಬಸ್‌ಗಳ ಮೂಲಕ ಪ್ರತಿದಿನ ಪ್ರಯಾಣಿಸುವವರಿಗಾಗಿ ಗರಿಷ್ಠ 20 ಹಂತಗಳವರೆಗೆ ಮಾಸಿಕ ಪಾಸ್ ನೀಡಲಾಗುತ್ತದೆ:

  • ಸಾಮಾನ್ಯ ಪ್ರಯಾಣಿಕರ ಕನಿಷ್ಠ ಪಾಸ್ ದರ (1ನೇ ಹಂತ): ₹520 ಇದ್ದದ್ದು ಈಗ ₹640 ಕ್ಕೆ ಏರಿಕೆಯಾಗಿದೆ.

  • ಹಿರಿಯ ನಾಗರಿಕರ ಕನಿಷ್ಠ ಪಾಸ್ ದರ (1ನೇ ಹಂತ): ₹465 ಇದ್ದದ್ದು ಈಗ ₹570 ಕ್ಕೆ ಹೆಚ್ಚಳವಾಗಿದೆ.

  • ಸಾಮಾನ್ಯ ಪ್ರಯಾಣಿಕರ ಗರಿಷ್ಠ ಪಾಸ್ ದರ (20ನೇ ಹಂತ): ₹3,220 ಇದ್ದದ್ದು ಈಗ ₹3,960 ಕ್ಕೆ ತಲುಪಿದೆ.

  • ಹಿರಿಯ ನಾಗರಿಕ ಗರಿಷ್ಠ ಪಾಸ್ ದರ (20ನೇ ಹಂತ): ₹2,900 ಇದ್ದದ್ದು ಈಗ ₹3,570 ಕ್ಕೆ ಏರಿದೆ.

KSRTC Bus
ಬಿಎಂಟಿಸಿ ಬಸ್ ದರ ಶೇ. 33-35ರಷ್ಟು; ಇತರ ಸಾರಿಗೆ ಬಸ್ ದರ ಶೇ. 23ರಷ್ಟು ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿಯಿಂದ ಜಾರಿ; Video

ಸಾಮಾನ್ಯ (ಸಾಮಾನ್ಯ/ಗ್ರಾಮಾಂತರ) ಬಸ್‌ಗಳ ಪಾಸ್:

ಗ್ರಾಮೀಣ ಭಾಗದ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಒಟ್ಟು 10 ಹಂತಗಳವರೆಗೆ ಮಾಸಿಕ ಪಾಸ್ ಸೌಲಭ್ಯವಿದ್ದು, ಪರಿಷ್ಕೃತ ದರ ಹೀಗಿದೆ:

  • ಸಾಮಾನ್ಯ ಪ್ರಯಾಣಿಕರ ಕನಿಷ್ಠ ಪಾಸ್ ದರ: ₹460 ಇದ್ದದ್ದು ಈಗ ₹570 ಕ್ಕೆ ಏರಿಕೆಯಾಗಿದೆ.

  • ಹಿರಿಯ ನಾಗರಿಕರ ಕನಿಷ್ಠ ಪಾಸ್ ದರ: ₹415 ಇದ್ದದ್ದು ಈಗ ₹510 ಕ್ಕೆ ಹೆಚ್ಚಳವಾಗಿದೆ.

  • ಸಾಮಾನ್ಯ ಪ್ರಯಾಣಿಕರ ಗರಿಷ್ಠ ಪಾಸ್ ದರ: ₹2,070 ಇದ್ದದ್ದು ಈಗ ₹2,550 ಕ್ಕೆ ತಲುಪಿದೆ.

  • ಹಿರಿಯ ನಾಗರಿಕರ ಗರಿಷ್ಠ ಪಾಸ್ ದರ: ₹1,865 ಇದ್ದದ್ದು ಈಗ ₹2,290 ಕ್ಕೆ ಏರಿದೆ.

ಏತನ್ಮಧ್ಯೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕೂಡ ತನ್ನ ಪಾಸ್ ದರಗಳನ್ನು ಶೇ. 20 ರಿಂದ 25 ರಷ್ಟು ಹೆಚ್ಚಿಸಿದೆ. ಸಾಮಾನ್ಯ ದಿನದ ಪಾಸ್ ₹80 ರಿಂದ ₹100 ಕ್ಕೆ ಏರಿಕೆಯಾಗಿದ್ದರೆ, ಮಾಸಿಕ ಪಾಸ್ ₹1,200 ರಿಂದ ₹1,500 ಕ್ಕೆ ದುಬಾರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X