ED ಸೂಪರ್ ಕಾಪ್ ಅಲ್ಲ: ಕಾಂಗ್ರೆಸ್ ಶಾಸಕರ ಮೇಲಿನ ಮನಿಲಾಂಡ್ರಿಂಗ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್, ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಬಗ್ಗೆಯೂ ಮಹತ್ವದ ಆದೇಶ

ಜಾರಿ ನಿರ್ದೇಶನಾಲಯವು ತನ್ನ ಕಣ್ಣಿಗೆ ಬಿದ್ದ ಪ್ರತಿಯೊಂದು ವಿಷಯವನ್ನೂ ತನಿಖೆ ಮಾಡಲು ಸೂಪರ್ ಕಾಪ್ ಅಲ್ಲ ಎಂದು ಹೈಕೋರ್ಟ್, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ದಾಖಲಾಗಿದ್ದ ಮನಿ ಲಾಂಡರಿಂಗ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:
ED Is Not A Super Cop: Karnataka HC Quashes Money Laundering Case Against Congress MLA KY Nanjegowda
ಕಾಂಗ್ರೆಸ್ ಶಾಸಕ ನಂಜೇಗೌಡ ಮೇಲಿನ ಮನಿಲಾಂಡ್ರಿಂಗ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್Online Desk
Updated on: 

ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೌಕರರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತು ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಂಜೇಗೌಡರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಇಸಿಐಆರ್ ಮತ್ತು ಮನಿ ಲಾಂಡರಿಂಗ್ ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್ / KOMUL) ಉದ್ಯೋಗಿಗಳ ನೇಮಕಾತಿ ಅಕ್ರಮ ಆರೋಪ ಹಾಗೂ ಭೂ ಅಕ್ರಮದ ಆರೋಪಗಳಿಗೆ ಸಂಬಂಧಿಸಿದಂತೆ ಇಡಿ ತನಿಖೆ ಆರಂಭಿಸಿತ್ತು. ಈ ವೇಳೆ, ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ನಂಜೇಗೌಡರ ನಿವಾಸದ ಮೇಲೆಯೂ ದಾಳಿ ನಡೆಸಿ, ನವೆಂಬರ್ 30, 2023 ರಂದು ಇಸಿಐಆರ್ ದಾಖಲಿಸಿತ್ತು. ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ಕೆ.ವೈ. ನಂಜೇಗೌಡ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠವು, "ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿಗೆ ಇರುವ ಅಧಿಕಾರಗಳು ಮೂಲಭೂತವಾದದ್ದಲ್ಲ, ಅವು ಇತರ ಮೂಲ ಅಪರಾಧಗಳನ್ನು ಅವಲಂಬಿಸಿವೆ" ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ, ಮೂಲ ಅಪರಾಧವೇ ಅಸ್ತಿತ್ವದಲ್ಲಿಲ್ಲದಿದ್ದಾಗ, ಮನಿ ಲಾಂಡ್ರಿಂಗ್ ತನಿಖೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಇಸಿಐಆರ್ ಮತ್ತು ಮನಿ ಲಾಂಡ್ರಿಂಗ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.

ಇದರೊಂದಿಗೆ, ಶಾಸಕ ನಂಜೇಗೌಡರ ಮೇಲಿದ್ದ ಮೂಲ ಭೂ ಅಕ್ರಮ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ 'ಬಿ ರಿಪೋರ್ಟ್' (ಪ್ರಕರಣ ಮುಕ್ತಾಯದ ವರದಿ) ಸಲ್ಲಿಸಿದ್ದರು ಮತ್ತು ಅದನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಿತ್ತು. ಹೀಗಾಗಿ ಮೂಲ ಅಪರಾಧವೇ ರದ್ದಾಗಿರುವುದರಿಂದ ಇಡಿಯ ಇಸಿಐಆರ್ ಮತ್ತು ಖಾಸಗಿ ದೂರಿಗೆ ಯಾವುದೇ ಕಾನೂನು ಮಾನ್ಯತೆ ಉಳಿಯುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ED Is Not A Super Cop: Karnataka HC Quashes Money Laundering Case Against Congress MLA KY Nanjegowda
ಬಿಜೆಪಿ ವಿರುದ್ದ 40% ಕಮಿಷನ್ ಜಾಹೀರಾತು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್ ಮಾನನಷ್ಟ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಪ್ರತಿಯೊಂದು ವಿಷಯವನ್ನೂ ತನಿಖೆ ಮಾಡಲು ಇಡಿ ಸೂಪರ್ ಕಾಪ್ ಅಲ್ಲ

ಇಡಿಯು ತನಗೆ ಇಷ್ಟಬಂದ ವಿಷಯಗಳ ಬಗ್ಗೆ ತಾನೇ ಖಾಸಗಿ ದೂರು ದಾಖಲಿಸಿ, ಅದನ್ನೇ ಆಧಾರವಾಗಿಟ್ಟುಕೊಂಡು ಮನಿ ಲಾಂಡ್ರಿಂಗ್ ತನಿಖೆ ಆರಂಭಿಸಲು ಪಿಎಂಎಲ್‌ಎ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದ ನ್ಯಾಯಮೂರ್ತಿಗಳು, ಜಾರಿ ನಿರ್ದೇಶನಾಲಯವು ತನ್ನ ಕಣ್ಣಿಗೆ ಬಿದ್ದ ಪ್ರತಿಯೊಂದು ವಿಷಯವನ್ನೂ ತನಿಖೆ ಮಾಡಲು ಸೂಪರ್ ಕಾಪ್ ಅಲ್ಲ. ಕಾನೂನಿನ ಚೌಕಟ್ಟನ್ನು ಮೀರಿ ಸ್ವತಂತ್ರವಾಗಿ ಹಣ ಅಕ್ರಮ ವರ್ಗಾವಣೆ ತನಿಖೆಗೆ ತಳಪಾಯ ಹಾಕುವ ಅಧಿಕಾರ ತನಿಖಾ ಸಂಸ್ಥೆಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ, ಶಾಸಕ ನಂಜೇಗೌಡರಿಗೆ ನೀಡಲಾಗಿದ್ದ ಸಮನ್ಸ್, ನೋಟಿಸ್‌ಗಳು ಹಾಗೂ ಇಡಿ ಸಲ್ಲಿಸಿದ್ದ ಖಾಸಗಿ ದೂರಿನ (PCR) ವಿಚಾರಣೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಪಿಎಂಎಲ್‌ಎ ಪ್ರಾಧಿಕಾರವು ಆಸ್ತಿಗಳನ್ನು ಜಪ್ತಿ ಮಾಡಲು ನೀಡಿದ್ದ ಆದೇಶವನ್ನು ರದ್ದುಪಡಿಸಿ, ಅರ್ಜಿದಾರರಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಹಿಂತಿರುಗಿಸುವಂತೆ ನಿರ್ದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X