ನಾಗಮಂಗಲ ಕೋಟೆ ಗಣೇಶ ವಿಸರ್ಜನೆ ವೇಳೆ ಅವಾಂತರ; ಯುವತಿಯರತ್ತ ಹಾವು ಎಸೆದ ಯುವಕ! ಧರ್ಮದೇಟು, Video

ನಾಗಮಂಗಲದ ಪ್ರಸಿದ್ಧ ಕೋಟೆ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ವಿಸರ್ಜನೆಗಾಗಿ ಕೆರೆಯ ಬಳಿ ಜನರು ಸೇರಿದ್ದ ಸಂದರ್ಭದಲ್ಲಿ ನೀರಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.
Snake Scare Turns Into Chaos During Ganesh Idol Immersion in Karnataka's Mandya
ಮಂಡ್ಯದಲ್ಲಿ ಗಣೇಶ ವಿಸರ್ಜನೆ
Updated on: 

ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಾವು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯುವಕನೊಬ್ಬನ ಹುಚ್ಚಾಟದಿಂದ ಗೊಂದಲ ಉಂಟಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ನಾಗಮಂಗಲದ ಪ್ರಸಿದ್ಧ ಕೋಟೆ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ವಿಸರ್ಜನೆಗಾಗಿ ಕೆರೆಯ ಬಳಿ ಜನರು ಸೇರಿದ್ದ ಸಂದರ್ಭದಲ್ಲಿ ನೀರಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.

ಈ ವೇಳೆ ಯುವಕನೊಬ್ಬ ಹಾವನ್ನು ಹಿಡಿದು, ಕೆರೆಯ ದಡದಲ್ಲಿ ನಿಂತಿದ್ದ ಯುವತಿಯರತ್ತ ಎಸೆದಿದ್ದಾನೆ. ಇದರಿಂದ ಸ್ಥಳದಲ್ಲಿದ್ದ ಯುವತಿಯರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

Snake Scare Turns Into Chaos During Ganesh Idol Immersion in Karnataka's Mandya
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿ ಹತ್ಯೆ: ತಮಿಳುನಾಡಿನ ಸೇಲಂ ಘಾಟ್ ನಲ್ಲಿ ಮತ್ತೆರಡು ಮೃತದೇಹ ಪತ್ತೆ

ಏಕಾಏಕಿ ಹಾವು ಎಸೆದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಯುವಕನ ಈ ಕೃತ್ಯವನ್ನು ಗಮನಿಸಿದ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ಯುವಕನನ್ನು ತರಾಟೆಗೆ ತೆಗೆದುಕೊಂಡ ಪೊಲೀಸ್ ಸಿಬ್ಬಂದಿ, ಆತನಿಗೆ ಹಲವು ಬಾರಿ ಕೆನ್ನೆಗೆ ಹೊಡೆದು ಎಚ್ಚರಿಸಿದ್ದಾರೆ.

ಗಣೇಶ ವಿಸರ್ಜನೆ ವೇಳೆ ನಡೆದ ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X