ಅರಮನೆ ವಶಕ್ಕೆ ಪಡೆಯಲು ಕಾರ್ಯಾಂಗ ದುರ್ಬಳಕೆ ಆಗಿದೆ: ಸರ್ಕಾರ - ರಾಜಮನೆತನ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್

ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ ಎಂದು ಸಚಿವ ಯತೀಂದ್ರ ಇತ್ತೀಚೆಗೆ ಹೇಳಿಕೆ ನೀಡಿದ್ದರು.
Conspiracy to take over Mysore Palace properties, says Yaduveer Wadiyar
ಯದುವೀರ್ ಒಡೆಯರ್
Updated on: 

ಮೈಸೂರು: ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ರಾಜವಂಶಸ್ಥ ಹಾಗೂ ಬಿಜೆಪಿ ಸಂಸದ ಯದುವೀರ್ ಒಡೆಯರ್ ಅವರು ಸೋಮವಾರ ಪ್ರತಿಕ್ರಿಯಿಸಿದ್ದಾರೆ.

ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ ಎಂದು ಸಚಿವ ಯತೀಂದ್ರ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು, ಅರಮನೆ, ಅಂಬಾರಿ ಹಾಗೂ ಸಿಂಹಾಸನ ನಮ್ಮದು. ಸರ್ಕಾರ ಯದುವಂಶದ ವಾರಸುದಾರ ಅಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೇ ಮೊದಲ ಬಾರಿಗೆ ಸರ್ಕಾರ - ರಾಜಮನೆತನ ನಡುವಿನ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್ ಅವರು, ಮೈಸೂರು ಅರಮನೆ ವಶಪಡಿಸಿಕೊಳ್ಳಲು ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈಗ ಅರಮನೆ ಆಸ್ತಿಯನ್ನು ವಶಕ್ಕೆ ಪಡೆಯಲು ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

Conspiracy to take over Mysore Palace properties, says Yaduveer Wadiyar
ಮೈಸೂರು ಅರಮನೆ ಸರ್ಕಾರದ್ದು, ರಾಜಮನೆತನ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಸಚಿವ ಯತೀಂದ್ರ ಸಿದ್ದರಾಮಯ್ಯ; Video

ವೈಯಕ್ತಿಕ ಟೀಕೆಗಳು ಮತ್ತು ಆಸ್ತಿ ವಿಷಯಗಳು ಸಾರ್ವಜನಿಕ ಚರ್ಚೆಗೆ ಅಪ್ರಸ್ತುತವಾಗಿದ್ದು, ಇವುಗಳ ಕುರಿತು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು. ನ್ಯಾಯಾಲಯದಲ್ಲಿನ ಕಾನೂನು ಪ್ರಕಾರದ ಆದೇಶವೇ ಅಂತಿಮ ಸತ್ಯ ಎಂದಿದ್ದಾರೆ.

ದಸರಾ ಮಹೋತ್ಸವದ ಕುರಿತು ಮಾತನಾಡಿ, ಈ ಬಾರಿಯ ದಸರಾ ಮುಗಿದಿದ್ದು, ಅದರ ಲೋಪಗಳ ಚರ್ಚೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಅವರ ತಾಯಿ ಈಗಾಗಲೇ ಹೇಳಿದ್ದಾರೆ. ಆದಾಗ್ಯೂ, ಮುಂದಿನ ದಸರಾಗಳನ್ನು ಸುಧಾರಿಸುವ ದೃಷ್ಟಿಯಿಂದ ತಾವು ಕಾರ್ಯನಿರ್ವಹಿಸುವುದಾಗಿ ಯದುವೀರ್ ತಿಳಿಸಿದ್ದಾರೆ.

ದಸರಾದಿಂದ ರಾಜಕೀಯ ಲಾಭದ ನಿರೀಕ್ಷೆ ಇಲ್ಲ ಎಂದು ಹೇಳಿದ ಅವರು, ದಸರಾ ಯಶಸ್ವಿಯಾದರೆ ಮೈಸೂರಿಗೇ ಲಾಭ ಎಂದಿದ್ದಾರೆ.

ಅರಮನೆ ಆಸ್ತಿ ವಿವಾದಗಳು ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ, ನ್ಯಾಯಾಲಯದ ತೀರ್ಮಾನದ ನಂತರವೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಾಗಿ ಒಡೆಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X