ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ: ನೋಟಿಸ್ ನೀಡದೆ 300 ದಾಳಿಂಬೆ ಮರ ಕಡಿದ ತಹಶೀಲ್ದಾರ್‌ಗೆ ಹೈಕೋರ್ಟ್ ತರಾಟೆ

ಅಕ್ರಮ ಸಾಗುವಳಿ ಆರೋಪದ ಹೆಸರಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಜಮೀನಿನಲ್ಲಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಏಕಾಏಕಿ ಕಡಿದುಹಾಕಿದ ಕೋಲಾರ ತಹಶೀಲ್ದಾರ್ ಕ್ರಮಕ್ಕೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ, ಆ ಕುರಿತ ವರದಿ ಇಲ್ಲಿದೆ:
High court
ಹೈಕೋರ್ಟ್
Updated on: 

ಬೆಂಗಳೂರು: ಅಕ್ರಮ ಸಾಗುವಳಿ ಆರೋಪಕ್ಕೆ ಸಂಬಂಧಿಸಿದಂತೆ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಜಮೀನಿನಲ್ಲಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಏಕಾಏಕಿ ಕಡಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಕೋಲಾರ ತಹಶೀಲ್ದಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, "ಏಕಾಏಕಿ ಈ ಕ್ರಮ ಕೈಗೊಳ್ಳದಿದ್ದರೆ ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ" ಎಂದು ಮಾರ್ಮಿಕವಾಗಿ ಚಾಟಿ ಬೀಸಿದೆ. ಆ ಕುರಿತ ವರದಿ ಇಲ್ಲಿದೆ:

ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ

ಕೋಲಾರ ಜಿಲ್ಲೆಯ ವೆಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಮೀನೊಂದರಲ್ಲಿ ಅಕ್ರಮ ಸಾಗುವಳಿ ಮಾಡಲಾಗಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಕಂದಾಯ ಅಧಿಕಾರಿಗಳು, ನವೆಂಬರ್ 7ರ ರಜಾದಿನದಂದು ಅಧಿಕಾರಿಗಳು ಏಕಾಏಕಿ ಕಾರ್ಯಾಚರಣೆ ನಡೆಸಿ ಮರಗಳನ್ನು ಕಡಿ ಜಮೀನಿಗೆ ನುಗ್ಗಿ ಅಲ್ಲಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದು ತೆರವುಗೊಳಿಸಿದ್ದರು. ಆದರೆ, ಇದನ್ನು ಪ್ರಶ್ನಿಸಿ ಸಾಗುವಳಿದಾರೆ ಟಿ.ಎನ್. ಮೋನಿಕಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಶೇಷ ಏಕಸದಸ್ಯ ನ್ಯಾಯಪೀಠವು, "ನವೆಂಬರ್ 7ರಂದು ನೀವು ಕ್ರಮ ಕೈಗೊಳ್ಳದಿದ್ದರೆ ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ" ಎಂದು ತಹಶೀಲ್ದಾರ್ ಅವರ ಅವಸರದ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿತು.

High court
ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!

ಮುಂದುವರೆದು, ಅರ್ಜಿದಾರರು ಕಾನೂನು ಮೊರೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ, ದೀಪಾವಳಿ ಹಬ್ಬದ ಸಾಲು-ಸಾಲು ರಜೆಗಳಿರುವುದನ್ನು ಬಳಸಿಕೊಂಡು ತಹಶೀಲ್ದಾರ್ ಅವರು ಏಕಾಏಕಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಅಧಿಕಾರಿಗಳ ಇಂತಹ ನಡವಳಿಕೆಯಿಂದಾಗಿ ಸರ್ಕಾರಿ ರಜಾದಿನದಲ್ಲೂ ಹೈಕೋರ್ಟ್‌ನ ನೂರಾರು ಸಿಬ್ಬಂದಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯ ಹೇಳಿತು. ಇದರೊಂದಿಗೆ, ವಿವಾದಿತ ಜಮೀನಿನ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಹಾಗೂ ಮುಂದಿನ ಆದೇಶದವರೆಗೆ ಯಾವುದೇ ಅಧಿಕಾರಿಗಳು ಆ ಆಸ್ತಿಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ ಹೈಕೋರ್ಟ್, ರಾಜ್ಯ ಸರ್ಕಾರ, ಕೋಲಾರ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, ಈ ಕುರಿತು ಸರ್ಕಾರದ ನಿಲುವು ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.

High court
'ED ಸೂಪರ್ ಕಾಪ್ ಅಲ್ಲ': ಕಾಂಗ್ರೆಸ್ ಶಾಸಕರ ಮೇಲಿನ ಮನಿಲಾಂಡ್ರಿಂಗ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್; ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಬಗ್ಗೆಯೂ ಆದೇಶ

ಏತನ್ಮಧ್ಯೆ, ಅರ್ಜಿದಾರರ ಕುಟುಂಬವು ಹಲವು ದಶಕಗಳಿಂದ ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, 2023ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಿದ್ದು ಅದು ಇನ್ನೂ ಪರಿಶೀಲನೆಯಲ್ಲಿದೆ ಎಂದು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದರು. ನವೆಂಬರ್ 15 ಮತ್ತು 16ರಂದು ಅರ್ಜಿದಾರರ ಮದುವೆ ನಿಗದಿಯಾಗಿದ್ದು, ಅಲ್ಲಿಯವರೆಗಾದರೂ ಕ್ರಮ ಕೈಗೊಳ್ಳದಂತೆ ಕೋರಿದರೂ ತಹಶೀಲ್ದಾರ್ ಮಣಿಯದೆ, ನವೆಂಬರ್ 7ರಂದು ಪೊಲೀಸ್ ಪಡೆಯೊಂದಿಗೆ ಜಮೀನಿಗೆ ನುಗ್ಗಿ ಬೆಳೆದು ನಿಂತಿದ್ದ ದಾಳಿಂಬೆ ಮರಗಳನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X