Namma metro: ಗುಲಾಬಿ ಮಾರ್ಗದಲ್ಲಿ ನಾಳೆಯಿಂದ ರೈಲು ಸೇವೆಗಳ ಆರಂಭ; ವೇಳಾಪಟ್ಟಿ ಇಂತಿದೆ...

ಈ ನೂತನ ಮಾರ್ಗದಲ್ಲಿ ಪ್ರತಿ ಸೋಮವಾರದಂದು ಕಾಳೇನ ಅಗ್ರಹಾರದಿಂದ ಬೆಳಗ್ಗೆ 4.55 ಗಂಟೆಗೆ ಹಾಗೂ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5.00 ಗಂಟೆಗೆ ರೈಲು ಸೇವೆಗಳು ಆರಂಭವಾಗಲಿವೆ.
train operations on Pink Line
ಗುಲಾಬಿ ಮಾರ್ಗದಲ್ಲಿ ನೂತನ ರೈಲು
Updated on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ ಕಾಳೇನ ಅಗ್ರಹಾರ ಮತ್ತು ಎಸ್. ಜಿ. ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವಿನ ಗುಲಾಬಿ ಮಾರ್ಗದಲ್ಲಿ ರೈಲು ಸೇವೆಗಳು ನಾಳೆ ಬೆಳಗ್ಗೆಯಿಂದ ಆರಂಭವಾಗಲಿವೆ.

ಈ ನೂತನ ಮಾರ್ಗದಲ್ಲಿ ಪ್ರತಿ ಸೋಮವಾರದಂದು ಕಾಳೇನ ಅಗ್ರಹಾರದಿಂದ ಬೆಳಗ್ಗೆ 4.55 ಗಂಟೆಗೆ ಹಾಗೂ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5.00 ಗಂಟೆಗೆ ರೈಲು ಸೇವೆಗಳು ಆರಂಭವಾಗಲಿವೆ.

ಮಂಗಳವಾರದಿಂದ ಶನಿವಾರದವರೆಗೆ, ಕಾಳೇನ ಅಗ್ರಹಾರ ಮತ್ತು ಎಸ್ ಜಿ ಪಾಳ್ಯ ಈ ಎರಡು ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 6 ಗಂಟೆಯಿಂದ ರೈಲು ಸೇವೆಗಳು ಶುರುವಾಗಲಿವೆ.

ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರೈಲುಗಳು ಪ್ರಾರಂಭವಾಗಲಿದ್ದು, ಕೊನೆಯ ರೈಲು ಸೇವೆಯು ಕಾಳೇನ ಅಗ್ರಹಾರದಿಂದ ರಾತ್ರಿ 10-50 ಗಂಟೆಗೆ ಹಾಗೂ ಎಸ್ ಜಿ ಪಾಳ್ಯ ಮೆಟ್ರೋ ನಿಲ್ದಾಣದಿಂದ ರಾತ್ರಿ 10.54 ಗಂಟೆಗೆ ಹೊರಡಲಿದೆ.

train operations on Pink Line
ನಮ್ಮ ಮೆಟ್ರೋ 100 ಕಿ.ಮೀ ಗೆ ವಿಸ್ತರಣೆ: ಭಾರತದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರ!

ಪ್ರಯಾಣಿಕರ ದಟ್ಟಣೆ ಅವಧಿಯಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿದ್ದು, ಇತರೆ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಲಭ್ಯವಿರಲಿವೆ. ಶನಿವಾರ ಹಾಗೂ ಭಾನುವಾರದಂದು ಪ್ರತಿ 10 ನಿಮಿಷಗಳಿಗೊಮ್ಮೆ ಸಂಚರಿಸಲಿವೆ. ಪ್ರಯಾಣಿಕರ ಸಂಚಾರದ ಮಾದರಿಯನ್ನು ಆಧರಿಸಿ ರೈಲು ಸೇವೆಗಳ ಆವರ್ತನವನ್ನು ಪರಿಷ್ಕರಿಸಲಾಗುವುದು ಎಂದು ಬಿಎಂಆರ್ ಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X