KPSC ನೇಮಕಾತಿ ಹಗರಣ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌, ಕನ್ನಾಳೆ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

ಇಡಿ ಅಧಿಕಾರಿಗಳು ಶನಿವಾರ ವಿಶೇಷ ಕೋರ್ಟ್ ಗೆ 1,500 ಪುಟಗಳ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.
IAS officer Gyanendra Kumar, Basavaraj Kannale
ಗ್ಯಾನೇಂದ್ರ ಕುಮಾರ್ - ಬಸವರಾಜ್ ಕನ್ನಾಳೆ
Updated on: 

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮೊದಲ ಚಾರ್ಜ್‌ಶೀಟ್‌ (ದೋಷಾರೋಪ ಪಟ್ಟಿ) ಸಲ್ಲಿಸಿದೆ.

ಇಡಿ ಅಧಿಕಾರಿಗಳು ಶನಿವಾರ ವಿಶೇಷ ಕೋರ್ಟ್ ಗೆ 1,500 ಪುಟಗಳ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಮೊದಲು ಬಂಧನ ಆಗಿದ್ದ ಇಬ್ಬರು ಆರೋಪಿಗಳಾದ ಅಮಾನತುಗೊಂಡ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಹಾಗೂ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆ ವಿರುದ್ಧ ಹಲವು ಆರೋಪಗಳನ್ನ ಇಡಿ ಹೊರಿಸಿದೆ.

IAS officer Gyanendra Kumar, Basavaraj Kannale
KPSC ನೇಮಕಾತಿ ಹಗರಣ: SIT ಮುಖ್ಯಸ್ಥರಾಗಿ ADGP ಆರ್. ಹಿತೇಂದ್ರ ನೇಮಕ..!

ಆರೋಪಿಗಳು ಜನವರಿ 8 ಮತ್ತು 9ನೇ ರಂದು ಸಾಕಷ್ಟು ವಿಲ್ಲಾಗಳನ್ನ ಬುಕ್ ಮಾಡಿದ್ದರು. ಆರ್ಕಿಡ್ ನಿರ್ವಾಣ ಸೇರಿದಂತೆ ಬೇರೆ ವಿಲ್ಲಾಗಳಲ್ಲಿ 20 ಅಭ್ಯರ್ಥಿಗಳು ಟ್ರೈನಿಂಗ್ ಪಡೆದಿದ್ದಾರೆ ಎಂದು ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 07 ತಾರೀಖು ಎಚ್.ಪಿ ಪೆನ್ ಡ್ರೈವ್ ಮೂಲಕ ಗ್ಯಾನೇಂದ್ರ ಕನ್ನಾಳೆಗೆ ಪ್ರಶ್ನೆ ಮತ್ತು ಉತ್ತರ ನೀಡಿದ್ದರು. 2 ಪ್ರಶ್ನೆ ಪತ್ರಿಕೆಗಳ 80 ಅಂಕದ ಪ್ರಶ್ನೆಗಳನ್ನ ಪೆನ್ ಡ್ರೈವ್ ನಲ್ಲಿ ಹಾಕಿಕೊಟ್ಟಿದ್ದರು. ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ಗ್ಯಾನೇಂದ್ರ ಮತ್ತು ಕನ್ನಾಳೆ ನಕಲು ಮಾಡಿದ್ದರು. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ ನಲ್ಲಿ ನಕಲು ಮಾಡಲಾಗಿತ್ತು ಎಂದು ಇಡಿ ಆರೋಪಿಸಿದೆ.

ನಂತರ ಟ್ಯಾಬ್‌ ಯಾರಿಗೂ ಸಿಗಬಾರದು ಎಂದು ಅದೇ ದಿನ ಟ್ಯಾಬ್ಲೆಟ್ ಅನ್ನು ಪುಡಿಪುಡಿ ಮಾಡಿ ಬಿಸಾಡಿದ್ದಾರೆ. ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಡೋದಾಗಿ ಕನ್ನಾಳೆ, ಅಧಿಕಾರಿ ಗಂಗ್ವಾರ್ ನಂಬಿಸಿದ್ದ. ಮೊದಲು 80 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಕನ್ನಾಳೆ, ಬಳಿಕ 40 ಲಕ್ಷಕ್ಕೆ ಇಳಿಸಿದ್ದಾನೆ. ಒಟ್ಟು 1.70 ಕೋಟಿ ಕೋಟಿ ಹಣವನ್ನ ಕನ್ನಾಳೆ ಬಳಿ ಗ್ಯಾನೇಂದ್ರ ಪಡೆದುಕೊಂಡಿದ್ದಾನೆ.

2025ರ ಅವಧಿಯಲ್ಲಿ ಗ್ಯಾನೇಂದ್ರ ತನ್ನ ಅತ್ತಿಗೆಗೆ 15,39 ಲಕ್ಷ ಹಣ ನೀಡಿದ್ದರು. ಸಹೋದರ ಬ್ಯಾಂಕ್ ಅಕೌಂಟ್ ಗೆ 10.94 ಲಕ್ಷ ಹಣ ಸಂದಾಯ ಮಾಡಿದ್ದಾನೆ. ಬಳಿಕ ಅಕ್ರಮದ ಹಣವನ್ನು ಸ್ವಂತ ಹಣವನ್ನಾಗಿ ಬಿಂಬಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ.

ಅಧಿಕಾರಿಯ ಮನೆ ಮೇಲೆ ದಾಳಿ ನಡೆದಾಗ ಕೆಲ ದಾಖಲಾತಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಪಶುವೈಧ್ಯಾಧಿಕಾರಿ ಅಭ್ಯರ್ಥಿಗಳ ಹೆಸರು ಕೂಡ ಈ ಪಟ್ಟಿಯಲ್ಲಿದೆ. 1:3 ರ ಅನುಪಾತದಲ್ಲಿ ಆಯ್ಕೆ ಪಟ್ಟಿ ಮಾಡಲಾಗಿದೆ. ಕೆಪಿಎಸ್‌ಸಿಯ ಇನ್ನಿತರ ಅಧಿಕಾರಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅಪರಾಧದಿಂದ ಬಂದ ಹಣವನ್ನ ಉಮೇಶ್ ಮತ್ತು ಓಂಕಾರ್ ಗೆ ವರ್ಗಾಯಿಸಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X