'ಆರಂಭ ಚೆನ್ನಾಗಿ ಸುಗಮವಾಗಿ ಆಯಿತು': ಪಿಂಕ್ ಲೈನ್ ಮಾರ್ಗದಲ್ಲಿ ಮೊದಲ ಮೆಟ್ರೊ ರೈಡ್ ಮಾಡಿದ ಸಚಿವ ಕೃಷ್ಣ ಭೈರೇಗೌಡ

ಬೆಳಗ್ಗೆ 6 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಮೆಟ್ರೋ ಸಿಬ್ಬಂದಿಗಳು ಪ್ರಯಾಣಿಕರನ್ನು ಪಿಂಕ್ ಬಣ್ಣದ ಗುಲಾಬಿ ನೀಡಿ ಸ್ವಾಗತಿಸಿದರು.
Minister Krishna Byre Gowda with passengers
ಮೊದಲ ಮೆಟ್ರೊ ರೈಡ್ ಮಾಡಿದ ಸಚಿವ ಕೃಷ್ಣ ಭೈರೇಗೌಡ ಪ್ರಯಾಣಿಕರೊಂದಿಗೆ
Updated on: 

ಬೆಂಗಳೂರು: ಬೆಂಗಳೂರಿಗರ ಬಹುದಿನದ ಕನಸಾಗಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಕಾಳೇನ ಅಗ್ರಹಾರದಿಂದ ಸುದ್ದಗುಂಟೆಪಾಳ್ಯದವರೆಗೆ ಪಿಂಕ್ ಲೈನ್ ವಾಣಿಜ್ಯ ಸಂಚಾರ ಅಧಿಕೃತವಾಗಿ ಇಂದು ಶನಿವಾರ ಆರಂಭಗೊಂಡಿದೆ. ಈ ಹೊಸ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ-ಬೀಳೇಕಹಳ್ಳಿ, ಎನ್.ಎಸ್.ಪಾಳ್ಯ, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ಎಸ್.ಜಿ.ಪಾಳ್ಯ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.

Minister Krishna Byre Gowda with passengers
ನವೆಂಬರ್ 13ರಂದು ನಮ್ಮ ಮೆಟ್ರೋ 'ಪಿಂಕ್ ಲೈನ್' ಉದ್ಘಾಟನೆ: ಪ್ರಯಾಣ ದರ, interval ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ...

ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಶುಕ್ರವಾರ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಬೆಳಗ್ಗೆ 6 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಮೆಟ್ರೋ ಸಿಬ್ಬಂದಿಗಳು ಪ್ರಯಾಣಿಕರನ್ನು ಪಿಂಕ್ ಬಣ್ಣದ ಗುಲಾಬಿ ನೀಡಿ ಸ್ವಾಗತಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಬೆಳಗ್ಗೆಯೇ ಪಿಂಕ್ ಲೈನ್ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಬೆರೆತರು, ಹಲವು ಮಹಿಳಾ ಪ್ರಯಾಣಿಕರು ಅವರಿಗೆ ಗುಲಾಬಿ ಬಣ್ಣದ ಹೂವನ್ನು ನೀಡಿ ಸ್ವಾಗತಿಸಿದರು.

Minister Krishna Byre Gowda with passengers
ನಮ್ಮ ಮೆಟ್ರೋ 100 ಕಿ.ಮೀ ಗೆ ವಿಸ್ತರಣೆ: ಭಾರತದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರ!

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಇಂದು ಗುಲಾಬಿ ಮಾರ್ಗ ಮೊದಲನೇ ಮೆಟ್ರೊ ರೈಡ್ ಬೆಳಗ್ಗೆ ಆರಂಭವಾಯಿತು. ಕೊನೆಯ ನಿಲ್ದಾಣ ಕಾಳೇನ ಅಗ್ರಹಾರದಿಂದ ಎಸ್ ಜಿ ಪಾಳ್ಯ ಸ್ಟೇಷನ್ ವರೆಗೆ ಪ್ರಯಾಣಿಸಿದೆ. ನಮ್ಮ ಮೆಟ್ರೊ ಅಧಿಕಾರಿಗಳೊಂದಿಗೆ ಸಿಬ್ಬಂದಿಗೆ ಯಾವುದೇ ಗೊಂದಲಗಳಿದ್ದರೆ ಬಗೆಹರಿಸಲು ಬಂದೆ. ಹೊಸ ಆರಂಭದಲ್ಲಿ ಎಲ್ಲಾ ಸರಾಗವಾಗಿ ಆಗಬೇಕೆಂದು ಸಿಬ್ಬಂದಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ನಾವು ಸಿಬ್ಬಂದಿ ಜೊತೆಗೆ ಇದ್ದರೆ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಬಂದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X