ಕುಟುಂಬದ ಜೊತೆ ಕುಮಾರಸ್ವಾಮಿ ಟೆಂಪಲ್ ರನ್: ಕೊಲ್ಲೂರು ಮೂಕಾಂಬಿಕೆ ದರ್ಶನ; ನವ ಚಂಡಿಕಾ ಯಾಗ!

ಸುಮಾರು ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಹರಕೆಯ ಹಿನ್ನೆಲೆಯಲ್ಲಿ ಹಾಗೂ ದೋಷ ಪರಿಹಾರಾರ್ಥವಾಗಿ ನವಚಂಡಿಕಾಯಾಗವನ್ನು ನೆರವೇರಿಸಲಾಗುತ್ತಿದೆ.
HDK Family visits kolluru
ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಎಚ್.ಡಿಕೆ ಕುಟುಂಬ
Updated on: 

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದಂಪತಿ, ಪುತ್ರ, ಕುಟುಂಬಿಕರ ಸಹಿತ ಭಾನುವಾರ ರಾತ್ರಿ ಭೇಟಿ ನೀಡಿದರು.

ಸೋಮವಾರ ಮುಂಜಾನೆಯಿಂದ ದೇವಸ್ಥಾನದಲ್ಲಿ ಅವರು ಕುಟುಂಬಿಕರ ಜೊತೆ ವಿಶೇಷ ಸೇವೆ ಸಲ್ಲಿಸಲಿದ್ದಾರೆ. ಕೇಂದ್ರ ಮಂತ್ರಿ ಎಚ್.ಡಿ.ಕೆ. ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತವರ ಪತ್ನಿ ಹಾಗೂ ಕುಟುಂಬಸ್ಥರು ಜೊತೆಗಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ದೇವಸ್ಥಾನದಲ್ಲಿ ನಡೆಯುತ್ತಿರುವ ನವಚಂಡಿಕಾಯಾಗದಲ್ಲೂ ಪಾಲ್ಗೊಂಡರು. ಪತ್ನಿಯೊಂದಿಗೆ ಆಗಮಿಸಿದ ಕುಮಾರಸ್ವಾಮಿ ಅವರು ಅರ್ಚಕರ ನೇತೃತ್ವದಲ್ಲಿ ಸಂಕಲ್ಪ ವಿಧಿಯಲ್ಲಿ ಭಾಗಿಯಾದರು.

ಸುಮಾರು ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಹರಕೆಯ ಹಿನ್ನೆಲೆಯಲ್ಲಿ ಹಾಗೂ ದೋಷ ಪರಿಹಾರಾರ್ಥವಾಗಿ ನವಚಂಡಿಕಾಯಾಗವನ್ನು ನೆರವೇರಿಸಲಾಗುತ್ತಿದೆ. ಕೊಲ್ಲೂರಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಕುಮಾರಸ್ವಾಮಿ ಅವರು ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

HDK Family visits kolluru
ವಾಸ್ತು ಪ್ರಕಾರ ನವೀಕರಣ: ಕುಮಾರಕೃಪಾ ಗೆಸ್ಟ್‌ಹೌಸ್‌ಗೆ 'ಗಂಗಾ' ಎಂದು ನಾಮಕರಣ; ನೊಣವಿನಕೆರೆ ಅಜ್ಜಯ್ಯ ನೇತೃತ್ವದಲ್ಲಿ ವಿಶೇಷ ಹೋಮ-ಹವನ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X