ವಿದೇಶಿ ಪ್ರಜೆಯ ಭಾಷಣಕ್ಕೆ ರಾಹುಲ್ ಚಪ್ಪಾಳೆ: 'ಇದನ್ನ ನೋಡಿ ರಕ್ತ ಕುದಿಯಲಿಲ್ಲ ಅಂದ್ರೆ ಅವರು ಭಾರತೀಯರೇ?' ನಟ ಜಗ್ಗೇಶ್ ಕೆಂಡಾಮಂಡಲ

ರಾಜಕೀಯ ವ್ಯತ್ಯಾಸ ಕೋಟಿ ಇರಲಿ, ಪಕ್ಷದ ಸಿದ್ಧಾಂತ ಅನ್ಯವಿರಲಿ ಭಾರತ ಎಂದಾಗ ನಾವೆಲ್ಲಾ ಭಾರತಮಾತೆಯ ಮಕ್ಕಳು ಅಲ್ಲವೆ, ಮುಂದೆ ದೇಶದ ಜನ ನಿರ್ಣಯಿಸುತ್ತಾರೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
Rahul gandhi and jaggesh
ರಾಹುಲ್ ಗಾಂಧಿ ಮತ್ತು ಜಗ್ಗೇಶ್
Updated on: 

ಬೆಂಗಳೂರು: ಭಾರತದ ನೆಲದಲ್ಲೇ ನಿಂತು ವಿದೇಶಿ ರಾಜಕೀಯ ಮುಖಂಡರೊಬ್ಬರು ದೇಶ ಹಾಗೂ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿ ನಕ್ಕಿರುವುದನ್ನು ಖಂಡಿಸಿ, ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತು ಆಕ್ರೋಶ ಹೊರಹಾಕಿರುವ ಜಗ್ಗೇಶ್, ದೇಶದ ವಿಚಾರ ಬಂದಾಗ ಇಂತಹ ನಡವಳಿಕೆ ತೋರುವವರ ದೇಶಭಕ್ತಿಯ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ.

ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್ ಯಾರೋ ಪರಕೀಯ ಭಾರತ ದೇಶ ಅದರ ಸಂವಿಧಾನ ಅಪಮಾನ ಮಾಡುವಾಗ ಚಪ್ಪಾಳೆ ತಟ್ಟಿ ಸಂಭ್ರಮ ಮಾಡುವ ಮಂದಿ ನೋಡಿದಾಗ ರಕ್ತ ಕುದಿಯಲ್ಲಿಲ್ಲಾ ಎಂದರೆ ಅಂತವರು ಭಾರತೀಯರೆ ಎಂಬ ಪ್ರಶ್ನೆ ಮೂಡುತ್ತದೆ.

ರಾಜಕೀಯ ವ್ಯತ್ಯಾಸ ಕೋಟಿ ಇರಲಿ, ಪಕ್ಷದ ಸಿದ್ಧಾಂತ ಅನ್ಯವಿರಲಿ ಭಾರತ ಎಂದಾಗ ನಾವೆಲ್ಲಾ ಭಾರತಮಾತೆಯ ಮಕ್ಕಳು ಅಲ್ಲವೆ, ಮುಂದೆ ದೇಶದ ಜನ ನಿರ್ಣಯಿಸುತ್ತಾರೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

Rahul gandhi and jaggesh
"ಚಿತ್ರದ ಕಥಾವಸ್ತು ಚರ್ಚೆ ಹುಟ್ಟುಹಾಕುವುದು ಆರೋಗ್ಯಕರ ಚಿತ್ರರಂಗದ ಲಕ್ಷಣ": ನಟ ಜಗ್ಗೇಶ್

ತೆಲಂಗಾಣದ ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಭಾರತ್ ಸಮ್ಮಿಟ್ 2026’ ಸಮಾವೇಶದಲ್ಲಿ ಈ ವಿವಾದ ಸೃಷ್ಟಿಯಾಗಿದೆ. ಸಮಾವೇಶದಲ್ಲಿ ಯುರೋಪಿಯನ್ ಸೋಷಿಯಲಿಸ್ಟ್‌ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಇಟಲಿಯ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್ ಭಾಷಣ ಮಾಡಿದ್ದರು.

ತಮ್ಮ ಭಾಷಣದ ವೇಳೆ ಅವರು ಭಾರತದ ಆಂತರಿಕ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ನ ರಾಜಕೀಯ ಘೋಷಣೆಯಾದ ‘ವೋಟ್ ಚೋರ್, ಗದ್ದಿ ಛೋಡ್’ ಎಂಬ ಘೋಷಣೆಯನ್ನು ಕೂಗಿದ್ದರು. ಅಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದೂ ವಾದಿಸಿದ್ದರು.

ವೇದಿಕೆಯ ಮುಂಭಾಗ ಕುಳಿತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರು ವಿದೇಶಿ ನಾಯಕನ ಈ ಮಾತಿಗೆ ಚಪ್ಪಾಳೆ ತಟ್ಟಿ, ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X