ನಾನು ಪೂಜೆ ಮಾಡಲ್ಲ, ಹಾಗಂತ ದೇವರು ಇಲ್ಲ ಅಂತಾ ಹೇಳಲ್ಲ; ಒಬ್ಬನೇ ದೇವರಿದ್ದಾನೆ: ಮಾಜಿ ಸಿಎಂ ಸಿದ್ದರಾಮಯ್ಯ

ನಾನು ಪೂಜೆ ಪುನಸ್ಕಾರಗಳನ್ನು ಮಾಡಲ್ಲ. ಹಾಗಂತ ದೇವರಿಲ್ಲ ಅಂತ ಹೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೇವರನ್ನು ಪ್ರಸನ್ನಗೊಳಿಸಲು ಪೂಜೆ ಮಾಡುವುದು ಒಂದು ಮಾರ್ಗ.
EX CM Siddaramaiah
ಮಾಜಿ ಸಿಎಂ ಸಿದ್ದರಾಮಯ್ಯ
Updated on: 

ಮೈಸೂರು: ನಾನು ಪೂಜೆ ಪುನಸ್ಕಾರಗಳನ್ನು ಮಾಡಲ್ಲ. ಹಾಗಂತ ದೇವರಿಲ್ಲ ಅಂತ ಹೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೇವರನ್ನು ಪ್ರಸನ್ನಗೊಳಿಸಲು ಪೂಜೆ ಮಾಡುವುದು ಒಂದು ಮಾರ್ಗ. ಬಹಳ ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಕೆಟ್ಟ ಕೆಲಸ ಮಾಡಿ ದೇವರ ಬಳಿ ಪ್ರಾರ್ಥಿಸಿದರೆ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

EX CM Siddaramaiah
ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ; ಸಿದ್ದರಾಮಯ್ಯಗೆ ಅಗೌರವ ತೋರಿಲ್ಲ: ಪರಮೇಶ್ವರ್ ಸ್ಪಷ್ಟನೆ

ವರುಣ ಕ್ಷೇತ್ರ ವ್ಯಾಪ್ತಿಯ ಹೊಸ ಕೆಂಪಯ್ಯನಹುಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ್ತೊಮ್ಮೆ ದೇವರ ಬಗ್ಗೆ ಮಾತನಾಡಿದ್ದಾರೆ. ನಾನು ದೇವರಿಗೆ ಪೂಜೆ ಮಾಡಲ್ಲ. ಹಾಗಂತ ದೇವರಿಲ್ಲ ಅಂತ ಹೇಳಲ್ಲ ದೇವರಿದ್ದಾನೆ. ಎಲ್ಲಾ ಕಡೆಯೂ ದೇವರಿದ್ದಾನೆ. ನಾವು ಮಾಡುವ ಕೆಲಸದಲ್ಲೂ ದೇವರಿದ್ದಾನೆ. ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದ್ರೆ ದೇವರು ಒಳ್ಳೇದು ಮಾಡಲ್ಲ. ಸಾವಿರಾರು ದೇವರಿಲ್ಲ, ಒಬ್ಬನೇ ದೇವರಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X