

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಸಂಬಂಧ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ.
ಶಾಸಕ ಪ್ರದೀಪ್ ಪತ್ನಿ ನಯನಾ ಹೆಣ್ಮು ಮಗುವಿನೆ ಜನ್ಮ ನೀಡಿದ್ದಾರೆ. ಹೆಣ್ಣು ಮಗು. ನಮ್ಮ ಮನೆಗೆ ‘ಲಕ್ಷ್ಮಿ’ ಆಗಮಿಸಿದ್ದಾಳೆ. ದೇವರ ಆಶೀರ್ವಾದದಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಗುವನ್ನು ಹಿಡಿದುಕೊಂಡಿರುವ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾದ ಮುದ್ದು ಮಗಳೆ ಹಾಡನ್ನು ವಿಡಿಯೋಗೆ ಕನೆಕ್ಟ್ ಮಾಡಿಕೊಂಡಿದ್ದಾರೆ. ನಯನಾ ಹಾಗೂ ಪ್ರದೀಪ್ ಈಶ್ವರ್ ದಂಪತಿಗೆ ಒಂದು ಗಂಡು ಮಗುವಿದೆ.