ಹಾವೇರಿ: ಮಧ್ಯರಾತ್ರಿ ಆಸ್ಪತ್ರೆ ವಾರ್ಡ್ ಗೆ ನುಗ್ಗಿದ ಕಾಮುಕ, ಮಹಿಳೆಯ ಬ್ಲೌಸ್ ಒಳಗೆ ಕೈ ಹಾಕಿ ಮೊಬೈಲ್, ಪರ್ಸ್ ಕದಿಯಲು ಯತ್ನ, CCTVಯಲ್ಲಿ ಕಳ್ಳಾಟ ಸೆರೆ!

ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಕಾಮುಕನ ಕಳ್ಳಾಟ ಸೆರೆಯಾಗಿದೆ.
an unidentified man
ಆಸ್ಪತ್ರೆ ವಾರ್ಡ್ ಗೆ ನುಗ್ಗಿದ ಕಾಮುಕ
Updated on: 

ಹಾವೇರಿ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಮಧ್ಯರಾತ್ರಿ ವಾರ್ಡ್ ಗೆ ನುಗ್ಗಿದ ಕಾಮುಕನೊಬ್ಬ ಮಹಿಳೆಯ ಬ್ಲೌಸ್ ಒಳಗೆ ಕೈ ಹಾಕಿ ಮೊಬೈಲ್ ಕದಿಯಲು ಯತ್ನಿಸಿರುವ ಘಟನೆ ನಡೆದಿದೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಕಾಮುಕನ ಕಳ್ಳಾಟ ಸೆರೆಯಾಗಿದೆ.

ನವೆಂಬರ್ 15 ರಂದು ಮಧ್ಯರಾತ್ರಿ 109ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಕಾಲು ಮುರಿತಕ್ಕೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವ ವಾರ್ಡ್ ಗೆ ನುಗ್ಗಿದ ಕಾಮುಕ ಸಂಪೂರ್ಣವಾಗಿ ಬೆಡ್ ಶೀಟ್ ಮುಚ್ಚಿಕೊಂಡು ಬೆಡ್ ಕೆಳಗೆ ರೋಗಿಯ ಅಟೆಂಡರ್ ಮಹಿಳೆ ಪಕ್ಕದಲ್ಲಿ ಮಲಗಿದ್ದಾನೆ.

ಅಲ್ಲದೇ ಆಕೆಯ ಬ್ಲೌಸ್ ಒಳಗೆ ಕೈ ಹಾಕಿ ಮೊಬೈಲ್ ಹಾಗೂ ಪರ್ಸ್ ಕದಿಯಲು ಯತ್ನಿಸಿದ್ದಾನೆ. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ದಿಢೀರ್ ಎಚ್ಚರಗೊಂಡಿದ್ದು, ಕಾಮುಕನ ಕೆನ್ನೆಗೆ ಬಾರಿಸಿದ್ದಾರೆ.

ಬಳಿಕ ಸುತ್ತಮುತ್ತ ಬೆಡ್ ಕೆಳಗೆ ಮಲಗಿದವರನ್ನು ಎಬ್ಬಿಸಿದ್ದು, ಎಲ್ಲರೂ ಸೇರಿ ಆತನನ್ನು ವಾರ್ಡ್ ನಲ್ಲಿ ಕೂಡಿಹಾಕಲು ಯತ್ನಿಸಿದ್ದಾರೆ. ಆದರೆ ಹೇಗೋ ಆತ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಈ ಘಟನೆಯು ರೋಗಿಗಳು ಮತ್ತು ಅವರೊಂದಿಗೆ ಬಂದವರಲ್ಲಿ ಆತಂಕವನ್ನು ಉಂಟುಮಾಡಿದೆ. ರೋಗಿಗಳ ಸುರಕ್ಷತೆಯನ್ನು ಖಚಿತಪಡಿಸಬೇಕಾದ ಜಿಲ್ಲಾ ಆಸ್ಪತ್ರೆಯಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

an unidentified man
ಮಹಿಳೆಗೆ ಲೈಂಗಿಕ ಕಿರುಕುಳ; ವಿರೋಧಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಾಮುಕ; ಸಿಸಿಟಿವಿಯಲ್ಲಿ ಕೃತ್ಯ ಸೆರೆ! Video

ಈ ಸಂಪೂರ್ಣ ಘಟನೆಯು ಆಸ್ಪತ್ರೆಯ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X