'ಬಾಯಿ ಮುಚ್ಚಿಕೊಂಡು ಕೇಳಯ್ಯ, ಕೇಳೋ ಯೋಗ್ಯತೆ ಇದ್ಯಾ ನಿನಗೆ'..?: ಶೂ, ಸಾಕ್ಸ್ ವಿತರಣೆ ವಿಳಂಬ ಪ್ರಶ್ನಿಸಿದವರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ದರ್ಪ? Video ವೈರಲ್..!

ಮನವಿ ಸಲ್ಲಿಸುವ ವಿಚಾರವಾಗಿ ಸಚಿವರು ಹಾಗೂ ದೇವರಾಜ ಕಿನ್ನಾಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮಧು ಬಂಗಾರಪ್ಪ ಅವರು ಆಕ್ರೋಶದಿಂದ ಮಾತನಾಡಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.
Madhu Bangarappa
ಮಧು ಬಂಗಾರಪ್ಪ
Updated on: 

ಕೊಪ್ಪಳ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳನ್ನು ಸಮರ್ಪಕವಾಗಿ ವಿತರಿಸಿಲ್ಲ ಎಂದು ಆರೋಪಿಸಿ ಮನವಿ ಸಲ್ಲಿಸಲು ಬಂದಿದ್ದ ವ್ಯಕ್ತಿಯೊಬ್ಬರೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷ ದೇವರಾಜ ಕಿನ್ನಾಳ ಅವರು ಸಚಿವರನ್ನು ಭೇಟಿಯಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಇನ್ನೂ ಸಮರ್ಪಕವಾಗಿ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸದಿರುವ ಬಗ್ಗೆ ಗಮನ ಸೆಳೆಯಲು ಮುಂದಾಗಿದ್ದರು.

ಈ ಕುರಿತು ಮನವಿ ಸಲ್ಲಿಸಲು ಬಂದಿದ್ದ ದೇವರಾಜ ಕಿನ್ನಾಳ ಅವರಿಗೆ ಸಚಿವರು ಏಕವಚನದಲ್ಲಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Madhu Bangarappa
'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್: ಕಾಂಗ್ರೆಸ್ MP ಹೇಳಿಕೆ; ಬಿಜೆಪಿ ತಿರುಗೇಟು

ಮನವಿ ಸಲ್ಲಿಸುವ ವಿಚಾರವಾಗಿ ಸಚಿವರು ಹಾಗೂ ದೇವರಾಜ ಕಿನ್ನಾಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮಧು ಬಂಗಾರಪ್ಪ ಅವರು ಆಕ್ರೋಶದಿಂದ ಮಾತನಾಡಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.

'ಯಾವನಯ್ಯ ಕೊಡ್ತಾನೆ? ಕೇಳುವ ಯೋಗ್ಯತೆ ಇಲ್ಲ ಅಂದರೆ ಸುಮ್ಮನಿರಬೇಕು' ಎಂದು ಸಚಿವರು ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಇದಕ್ಕೆ ದೇವರಾಜ ಕಿನ್ನಾಳ ಕೂಡ ಪ್ರತಿಕ್ರಿಯಿಸಿದ್ದು, ಸಚಿವರ ವರ್ತನೆ ಚರ್ಚೆಗೆ ಗ್ರಾಸವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಡಿಯೋವನ್ನು ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸಚಿವರ ವಿರುದ್ಧ ಕಿಡಿಕಾರಿದೆ.

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯ ಪುಸ್ತಕ ನೀಡಿ ಎಂದು ಮನವಿ ಸಲ್ಲಿಸಲು ಬಂದವರ ಮೇಲೆ ಅನಕ್ಷರಸ್ಥ ಸಚಿವ ಮಧು ಬಂಗಾರಪ್ಪ ಅವರು ದೌರ್ಜನ್ಯ ಮೆರೆದಿರುವುದು ಖಂಡನೀಯ. ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸುವ ಬದಲು ದರ್ಪ ಮೆರೆಯುವುದು ನಾಲಾಯಕ್‌ ಸಚಿವರ ನಿರ್ಲಕ್ಷ್ಯ ಹಾಗೂ ವಿಫಲ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದೆ.

ಅಸಮರ್ಥ ಮಧು ಬಂಗಾರಪ್ಪ ಅವರೇ, ಮಕ್ಕಳಿಗೆ ಶೂ, ಸಾಕ್ಸ್‌ ಕೇಳುವುದು ತಪ್ಪೇ.? ಮನವಿ ಸ್ವೀಕರಿಸುವ ಕನಿಷ್ಠ ಸೌಜನ್ಯ ತಮಗಿಲ್ಲವೇ? ಕೂಡಲೇ ಕೊಪ್ಪಳ ಜಿಲ್ಲೆಯಲ್ಲಿ ಕೊರತೆಯಿರುವ ಶಾಲೆಯ ಮಕ್ಕಳಿಗೆ ಶೂ, ಸಾಕ್ಸ್‌ ಹಾಗೂ ಪಠ್ಯ ಪುಸ್ತುಕ ಪೂರೈಸಲು ಕ್ರಮ ವಹಿಸಿ ಎಂದು ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X